ನಾನು ಅಶ್ಲೀಲ ಚಿತ್ರ ನಿರ್ಮಾಣ ಮಾಡಿಲ್ಲ: ರಾಜ್ ಕುಂದ್ರಾ
Team Udayavani, Dec 20, 2021, 7:50 PM IST
ಮುಂಬೈ: ಅಶ್ಲೀಲ ಚಿತ್ರಗಳ ನಿರ್ಮಾಣ ಮತ್ತು ವಿತರಣೆಯಲ್ಲಿ ಯಾವತ್ತೂ ತೊಡಗಿಸಿಕೊಂಡಿರಲಿಲ್ಲ ಎಂದು ಉದ್ಯಮಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಹೇಳಿದ್ದಾರೆ.
ಸದ್ಯ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆಯನ್ನು ಅಪ್ಲೋಡ್ ಮಾಡಿದ್ದಾರೆ.
ಒಟ್ಟಾರೆ ಪ್ರಕರಣವೇ ತಮ್ಮನ್ನು ಸಿಲುಕಿಸಿ ಹಾಕಲು ಮಾಡಿದ ಸಂಗತಿ ಎಂದು ಪ್ರತಿಪಾದಿಸಿದ್ದಾರೆ.
ಇದೊಂದು ಮಾಯಾಜಾಲವಾಗಿದೆ. ಅದರಲ್ಲಿ ನಾನು ಸಿಲುಕಿದ್ದೇನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಲು ಸಿದ್ಧವೆಂದು ಕುಂದ್ರಾ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಒಮಿಕ್ರಾನ್ ಭೀತಿ : ಗುಜರಾತ್ ನ ಎಂಟು ನಗರಗಳಲ್ಲಿ ಡಿ.31 ರ ವರೆಗೆ ನೈಟ್ ಕರ್ಫ್ಯೂ ಮುಂದುವರಿಕೆ