
ಗಣರಾಜ್ಯೋತ್ಸವ ನೋಡಲು ಆನ್‌ಲೈನ್‌ನಲ್ಲೇ ಟಿಕೆಟ್ ಖರೀದಿಸಿ
Team Udayavani, Jan 6, 2023, 9:00 PM IST

ನವದೆಹಲಿ: ಈ ವರ್ಷ ಜ.26ರಂದು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ನೋಡಬೇಕೇ? ಸ್ವಾತಂತ್ರ್ಯ ದಿನಾಚರಣೆಯನ್ನು ನೋಡಬೇಕೇ? ಇನ್ನು ಮುಂದೆ ನೀವು ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕಿಲ್ಲ. ನೀವು ಇದ್ದಲ್ಲೇ ಕುಳಿತು ಆನ್‌ಲೈನ್ ಮೂಲಕ ಟಿಕೆಟ್‌ಗಳನ್ನು ಖರೀದಿಸಬಹುದು.
ಗಣ್ಯರು ಪಾಸ್‌ಗಳನ್ನೂ ಪಡೆಯಬಹುದು. ಇದಕ್ಕಾಗಿಯೇ ಕೇಂದ್ರ ಸರ್ಕಾರ ವೆಬ್‌ಸೈಟ್ ಒಂದನ್ನು ಶುರು ಮಾಡಿದೆ.
http://www.aamantran.mod.gov.inಮೂಲಕ ನೀವು ಇಂತಹ ಕಾರ್ಯಕ್ರಮಗಳಿಗೆ ಬೇಕಾದ ಟಿಕೆಟ್‌ಗಳನ್ನು ಪಡೆಯಬಹುದು. ಕೇಂದ್ರ ರಕ್ಷಣಾ ಖಾತೆ ಸಹಾಯಕ ಸಚಿವ ಅಜಯ್ ಭಟ್ ಇದಕ್ಕೆ ಚಾಲನೆ ನೀಡಿದ್ದಾರೆ.
ದೇಶದ ಯಾವುದೇ ಪ್ರಜೆ ಬೇಕಾದರೂ ಟಿಕೆಟ್ ಖರೀದಿಸಬಹುದು. ಗಣ್ಯರು ತಮಗೆ ಮತ್ತು ಸಂಬಂಧಿಕರಿಗೆ ಪಾಸ್‌ಗಳನ್ನು ಪಡೆದುಕೊಳ್ಳಬಹುದು. ಇಲ್ಲಿ ಟಿಕೆಟ್ ಪಡೆದರೆ, ಅವನ್ನು ಆನ್‌ಲೈನ್‌ನಲ್ಲೇ ಕಳಿಸಲಾಗುತ್ತದೆ.
ಪ್ರವೇಶದ್ವಾರದಲ್ಲಿ ಕ್ಯೂಆರ್ ಕೋಡ್ ಮೂಲಕ ಸ್ಕ್ಯಾನ್ ಮಾಡಲಾಗುತ್ತದೆ. ಈ ಟಿಕೆಟ್‌ಗಳನ್ನು ರದ್ದು ಮಾಡಲಿಕ್ಕೆ ಸಾಧ್ಯವಿಲ್ಲ, ಇನ್ನೊಬ್ಬರಿಗೆ ವರ್ಗಾಯಿಸಲು ಅಸಾಧ್ಯ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Doordarshan ಖ್ಯಾತ ಟಿವಿ ನಿರೂಪಕಿ ಗೀತಾಂಜಲಿ ಅಯ್ಯರ್ ವಿಧಿವಶ

Manipur ಆಂಬ್ಯುಲೆನ್ಸ್‌ಗೆ ದುಷ್ಕರ್ಮಿಗಳಿಂದ ಬೆಂಕಿ; 8 ವರ್ಷದ ಬಾಲಕ ಸೇರಿ ಮೂವರು ಬಲಿ

Education ಗುಲಾಮಿ ಚಿಂತನೆಯನ್ನು ತುರುಕುತ್ತೀರಾ?:ಸಿಎಂ ಸಿದ್ದರಾಮಯ್ಯರಿಗೆ ಸುನಿಲ್ ಪ್ರಶ್ನೆ

Student Visa Day ಅಮೆರಿಕ-ಭಾರತ ಉನ್ನತ ಶಿಕ್ಷಣ ಸಹಯೋಗದ ಸಂಭ್ರಮಾಚರಣೆ

Goa ದಲ್ಲಿ ಪೋರ್ಚುಗೀಸ್ ಕುರುಹುಗಳು ಇನ್ನೂ ಜೀವಂತ: ಸಿಎಂ ಸಾವಂತ್
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
