
ದೆಹಲಿ ಹಿಂಸಾಚಾರ: ರೈತ ಮುಖಂಡರ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ದೀಪ್ ಸಿಧು ನಾಪತ್ತೆ?
ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸರಣಿ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ
Team Udayavani, Jan 28, 2021, 2:25 PM IST

ನವದೆಹಲಿ: ಗಣರಾಜ್ಯೋತ್ಸವ(ಜನವರಿ 26) ದಿನಾಚರಣೆಯಂದು ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ರಾಲಿ ವೇಳೆ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐಆರ್ ನಲ್ಲಿ ಹೆಸರಿಸಲ್ಪಟ್ಟಿರುವ ರೈತ ಮುಖಂಡರ ವಿರುದ್ಧ ದೆಹಲಿ ಪೊಲೀಸರು ಗುರುವಾರ(ಜ.28) ಲುಕ್ ಔಟ್ ನೋಟಿಸ್ ಜಾರಿಗೊಳಿಸಿರುವುದಾಗಿ ವರದಿ ತಿಳಿಸಿದೆ.
ಏತನ್ಮಧ್ಯೆ ಪಂಜಾಬಿ ನಟ ದೀಪ್ ಸಿಧು ಹಾಗೂ ಲಾಖಾ ಸಿಧಾನಾ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ. ಆದರೆ ಇಬ್ಬರೂ ನಾಪತ್ತೆಯಾಗಿರುವುದಾಗಿ ಮಾಧ್ಯಮ ವರದಿ ತಿಳಿಸಿದೆ. ಎಫ್ ಐಆರ್ ನಲ್ಲಿ ಹೆಸರಿಸಲಾಗಿರುವ ರೈತ ಮುಖಂಡರು ತಮ್ಮ ಪಾಸ್ ಪೋರ್ಟ್ ಅನ್ನು ಒಪ್ಪಿಸುವಂತೆ ದೆಹಲಿ ಪೊಲೀಸರು ಸೂಚನೆ ನೀಡಿರುವುದಾಗಿ ಎಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಟ್ರ್ಯಾಕ್ಟರ್ ರಾಲಿ ಸಂದರ್ಭದಲ್ಲಿ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ದೊಡ್ಡ ಪ್ರಮಾಣದ ಘರ್ಷಣೆ, ಹಿಂಸಾಚಾರ ನಡೆದಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸರಣಿ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟ್ರ್ಯಾಕ್ಟರ್ ರಾಲಿ ಬಳಿಕವೂ ದೆಹಲಿಯಲ್ಲಿನ ಪರಿಸ್ಥಿತಿ ಕುರಿತು ಅಮಿತ್ ಶಾ ನಿರಂತರವಾಗಿ ಪರಿಶೀಲಿಸುತ್ತಿದ್ದು, ಬುಧವಾರ (ಜನವರಿ 27) ತಡರಾತ್ರಿವರೆಗೂ ಉನ್ನತ ಅಧಿಕಾರಿಗಳ ಜತೆ ಸಭೆ ನಡೆಸಿದ್ದರು. ಆರೋಪಿತ ರೈತ ಮುಖಂಡರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rajouri;ಮೂರನೇ ದಿನಕ್ಕೆ ಕಾಲಿಟ್ಟ ಅಡಗಿರುವ ಉಗ್ರರ ವಿರುದ್ಧದ ಕಾರ್ಯಾಚರಣೆ

Tragic Love Story: ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ; ಆಘಾತದಿಂದ ನೇಣಿಗೆ ಶರಣಾದ ಪ್ರಿಯತಮೆ

Server Issue: ವಿಮಾನ ವಿಳಂಬ… ಚೆನ್ನೈ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ

Land For Jobs Scam: ಲಾಲು ಪ್ರಸಾದ್, ಪತ್ನಿ ರಾಬ್ರಿ ದೇವಿ, ಪುತ್ರ ತೇಜಸ್ವಿಗೆ ಜಾಮೀನು

Tragic: ದೇವರ ದರ್ಶನದಿಂದ ವಾಪಾಸಾಗುವ ವೇಳೆ ದುರಂತ: ಕಾರು– ಟ್ರಕ್ ಅಪಘಾತದಲ್ಲಿ 8ಮಂದಿ ಸಾವು
MUST WATCH
ಹೊಸ ಸೇರ್ಪಡೆ

LPG Cylinders: ಪ್ರಧಾನಮಂತ್ರಿ ಉಜ್ವಲ ಸ್ಕೀಮ್ ಸಬ್ಸಿಡಿ ಏರಿಕೆ, 600 ರೂ.ಗೆ LPG ಸಿಲಿಂಡರ್

Sagara ಶೈಲೇಶಚಂದ್ರ ವರದಿಯ ಸಂಪೂರ್ಣ ಅನುಷ್ಠಾನಕ್ಕೆ ಗ್ರಾಮೀಣ ಅಂಚೆ ನೌಕರರ ಒತ್ತಾಯ

Rajouri;ಮೂರನೇ ದಿನಕ್ಕೆ ಕಾಲಿಟ್ಟ ಅಡಗಿರುವ ಉಗ್ರರ ವಿರುದ್ಧದ ಕಾರ್ಯಾಚರಣೆ

Chemistry ನೊಬೆಲ್ ಪ್ರಶಸ್ತಿಗೆ ಮೂವರು ವಿಜ್ಞಾನಿಗಳು ಆಯ್ಕೆ

Tragic Love Story: ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ; ಆಘಾತದಿಂದ ನೇಣಿಗೆ ಶರಣಾದ ಪ್ರಿಯತಮೆ