
Borewell: ಆಟ ಆಡುವ ವೇಳೆ 300 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಎರಡೂವರೆ ವರ್ಷದ ಮಗು
Team Udayavani, Jun 7, 2023, 10:17 AM IST

ಭೋಪಾಲ್: ಆಟ ಆಡುತ್ತಿದ್ದಾಗ ತೆರೆದ ಕೊಳವೆ ಬಾವಿಗೆ ಎರಡೂವರೆ ವರ್ಷದ ಹೆಣ್ಣು ಮಗುವೊಂದು ಬಿದ್ದಿರುವ ಘಟನೆ ಮಧ್ಯ ಪ್ರದೇಶದ ಸೆಹೋರ್ ಜೆಲ್ಲೆಯ ಮುಗವಲಿ ಗ್ರಾಮದಲ್ಲಿ ನಡೆದಿದ್ದು, ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಮಂಗಳವಾರ ಮಧ್ಯಾಹ್ನ ಸೃಷ್ಟಿ ಕುಶ್ವಾಹ ಎನ್ನುವ ಮಗು ಜಮೀನಿನಲ್ಲಿ ಆಟ ಆಡುತ್ತಿದ್ದಾಗ ತೆರೆದೆ ಕೊಳವೆ ಬಾವಿಗೆ ಬಿದ್ದಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ಎಸ್ ಡಿಆರ್ ಎಫ್, ಎನ್ ಡಿಆರ್ ಎಫ್ ಸ್ಥಳೀಯ ಪೊಲೀಸರ ಸಹಕಾರದಿಂದ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಸಿದ್ದಾರೆ.
300 ಅಡಿ ಆಳದ ಕೊಳವೆ ಬಾವಿಗೆ ಮಗು ಬಿದ್ದಿದ್ದು, 20-25 ಅಡಿ ಆಳದಲ್ಲಿ ಮಗು ಸಿಲುಕಿದೆ. ಜೆಸಿಬಿ ಮೂಲಕ ಮತ್ತೊಂದು ಗುಂಡಿ ಅಗೆಯಲಾಗುತ್ತಿದ್ದು, ಆಮ್ಲಜನಕ ಸರಬರಾಜನ್ನು ನೀಡಿ ಮಗುವಿನ ಚಲನವಲಗಳ ಮೇಲೆ ನಿಗಾ ಇಡಲಾಗುತ್ತಿದೆ.
ಘಟನೆ ನಡೆದು 12 ಗಂಟೆ ಕಳೆದಿದೆ. ನಾವು ಮಗುವನ್ನು ಸುರಕ್ಷಿತವಾಗಿ ಹೊರ ತೆಗೆಯಲು ಎಲ್ಲ ರೀತಿಯ ಪ್ರಯತ್ನವನ್ನು ನಡೆಸುತ್ತಿದ್ದೇವೆ. ಮಗುವಿನ ಚಲನಲನ ಸ್ಪಷ್ಟವಾಗಿ ಕಾಣಿಸುತ್ತಿಲ್ಲ ಎಂದು ಸೆಹೋರ್ ಪಂಚಾಯತ್ ಅಧಿಕಾರಿ ಆಶಿಶ್ ತಿವಾರಿ ಪಿಟಿಐಗೆ ಹೇಳಿದ್ದಾರೆ.
ಇತ್ತೀಚೆಗಷ್ಟೇ ಗುಜರಾತ್ ನ ಜಾಮ್‌ನಗರ ನಗರದಿಂದ 40 ಕಿ.ಮೀ ದೂರದಲ್ಲಿರುವ ತಮಾಚನ್ ಗ್ರಾಮದ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಬುಡಕಟ್ಟು ಕುಟುಂಬಕ್ಕೆ ಸೇರಿದ 2 ವರ್ಷದ ಹೆಣ್ಣು ಮಗು ಆಟವಾಡುತ್ತಿದ್ದಾಗ ಕೃಷಿ ಜಮೀನಲ್ಲಿದ್ದ 200 ಅಡಿ ಆಳದ ತೆರೆದ ಕೊಳವೆ ಬಾವಿಗೆ ಬಿದ್ದಿತ್ತು. ಸತತ 19 ಗಂಟೆಗಳ ಕಾರ್ಯಾಚರಣೆ ನಡೆಸಿದರೂ ಮಗು ಸುರಕ್ಷಿತವಾಗಿ ಬದುಕಿ ಬರಲಿಲ್ಲ.
VIDEO | “We are making all possible efforts to pull the child out. A trench is being dug on the side (of the borewell). Since it has been more than 12 hours, movement (of the child) is not clearly visible from here,” says Ashish Tiwari, Sehore Panchayat official. pic.twitter.com/3gLekvEUvy
— Press Trust of India (@PTI_News) June 7, 2023
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Goa; ಈ ಕಾರಣಕ್ಕಾಗಿ ಮಹಿಳಾ ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿಲ್ಲ: ತಾನಾವಡೆ

Muslim ಮಹಿಳೆಯರ ಪರವಾಗಿ ಏಕೆ ನಿಲ್ಲಲಿಲ್ಲ?: ವಿಪಕ್ಷಗಳ ವಿರುದ್ಧ ಪ್ರಧಾನಿ ಕಿಡಿ

Ujjain ; ಅತ್ಯಾಚಾರಕ್ಕೊಳಗಾಗಿ ಬೀದಿಯಲ್ಲಿ ಅರೆನಗ್ನ ಸ್ಥಿತಿಯಲ್ಲಿ ನಡೆದ 12ರ ಬಾಲೆ !!

India-Canada ಸಂಬಂಧ ಹದಗೆಡಿಸಲು ನಿಜ್ಜರ್ ಪ್ರಕರಣದಲ್ಲಿ ಪಾಕಿಸ್ಥಾನದ ISI ಸಂಚು

Manipur ; ಇಡೀ ರಾಜ್ಯವನ್ನು ‘ಪ್ರಕ್ಷುಬ್ಧ ಪ್ರದೇಶ’ ಎಂದು ಘೋಷಿಸಿದ ಸರಕಾರ
MUST WATCH
ಹೊಸ ಸೇರ್ಪಡೆ

Cauvery Water; ಕಾಂಗ್ರೆಸ್ ಸರ್ಕಾರ ಅಸಮರ್ಥ: ಬಿಜೆಪಿ- ಜೆಡಿಎಸ್ ಜಂಟಿ ಪ್ರತಿಭಟನೆ

September 29 ರಂದು ಕರ್ನಾಟಕ ಬಂದ್ ; ನೂರಾರು ಸಂಘಟನೆಗಳ ಬೆಂಬಲ

Goa; ಈ ಕಾರಣಕ್ಕಾಗಿ ಮಹಿಳಾ ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿಲ್ಲ: ತಾನಾವಡೆ

Muslim ಮಹಿಳೆಯರ ಪರವಾಗಿ ಏಕೆ ನಿಲ್ಲಲಿಲ್ಲ?: ವಿಪಕ್ಷಗಳ ವಿರುದ್ಧ ಪ್ರಧಾನಿ ಕಿಡಿ

Ujjain ; ಅತ್ಯಾಚಾರಕ್ಕೊಳಗಾಗಿ ಬೀದಿಯಲ್ಲಿ ಅರೆನಗ್ನ ಸ್ಥಿತಿಯಲ್ಲಿ ನಡೆದ 12ರ ಬಾಲೆ !!