ಚಲಿಸುತ್ತಿದ್ದ ಟ್ರಕ್, ಟ್ಯಾಂಕರ್ ಮೇಲೆ ಉರುಳಿದ ಬಂಡೆ: ಓರ್ವ ಮೃತ್ಯು
Team Udayavani, Jan 25, 2023, 9:04 AM IST
ಶ್ರೀನಗರ್: ವಾಹನಗಳ ಮೇಲೆ ಬಂಡೆ ಉರುಳಿ ಬಿದ್ದು ಓರ್ವ ಮೃತಪಟ್ಟ ಘಟನೆ ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ನಡೆದಿದೆ.
ರಾಂಬನ್ ಜಿಲ್ಲೆಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ಟ್ರಕ್ ಹಾಗೂ ಹಾಗೂ ಟ್ಯಾಂಕರ್ ಮೇಲೆ ಬಂಡೆ ಉರುಳಿ ಬಿದ್ದಿದೆ. ಪರಿಣಾಮ ಕೆಲವರು ಗಾಯಗೊಂಡಿದ್ದು, ಓರ್ವ ಮೃತಪಟ್ಟಿದ್ದಾನೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಟ್ರಕ್ ಚಲಾಯಿಸುತ್ತಿದ್ದ ಕುಲ್ಗಾಮ್ ನಿವಾಸಿ ಮುನೀಬ್ ತಕ್ ಬಂಡೆ ಉರುಳಿದ ಪರಿಣಾಮ ಮೃತಪಟ್ಟಿದ್ದಾನೆ.
ಈ ಘಟನೆಯಿಂದ ಕೆಲಕಾಲ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು. ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.