ಬ್ಯಾಂಕ್ಗಳಿಗೆ 48,000 ಕೋಟಿ
Team Udayavani, Feb 21, 2019, 12:30 AM IST
ಹೊಸದಿಲ್ಲಿ: ಈ ಹಣಕಾಸು ವರ್ಷದಲ್ಲಿ 12 ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ಬಂಡವಾಳ ಒದಗಿಸುವ ನಿಟ್ಟಿನಲ್ಲಿ, 48,239 ಕೋ.ರೂ. ನೀಡುವುದಾಗಿ ವಿತ್ತ ಸಚಿವಾಲಯ ಘೋಷಿಸಿದೆ. ಆರ್ಬಿಐ ಅಡಿಯಲ್ಲಿ ಈ ರಾಷ್ಟ್ರೀಕೃತ ಬ್ಯಾಂಕ್ಗಳ ಆರ್ಥಿಕತೆ ಸುಧಾರಿಸುವ ಕ್ರಮ ಕೈಗೊಳ್ಳಲಾಗುತ್ತಿದೆ. ಕಾರ್ಪೊರೇಶನ್ ಬ್ಯಾಂಕ್ (9086 ಕೋಟಿ ರೂ.) ಅಲಹಾಬಾದ್ ಬ್ಯಾಂಕ್ (6896 ಕೋಟಿ ರೂ.) ಬ್ಯಾಂಕ್ ಆಫ್ ಇಂಡಿಯಾ (4838 ಕೋಟಿ ರೂ.) ಬ್ಯಾಂಕ್ ಆಫ್ ಮಹಾರಾಷ್ಟ್ರ (205 ಕೋಟಿ ರೂ.) ಪಂಜಾಬ್ ನ್ಯಾಷನಲ್ ಬ್ಯಾಂಕ್ (5,908 ಕೋಟಿ ರೂ.), ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (4,112 ಕೋಟಿ ರೂ.), ಆಂಧ್ರ ಬ್ಯಾಂಕ್ (3256 ಕೋಟಿ ರೂ.) ಸೇರಿ ಇತರ ಬ್ಯಾಂಕ್ಗಳಿಗೆ ಮರು ಬಂಡವಾಳ ಒದಗಿಸಲಾಗುತ್ತದೆ ಎಂದು ವಿತ್ತ ಕಾರ್ಯದರ್ಶಿ ರಾಜೀವ್ ಕುಮಾರ್ ಹೇಳಿದ್ದಾರೆ.