500 ರೂ., 2 ಸಾವಿರ ರೂ. ನೋಟಿಂದ ಮಹಾತ್ಮಾ ಗಾಂಧಿ ಫೋಟೋ ತೆಗೆಯಿರಿ
Team Udayavani, Oct 8, 2021, 10:00 PM IST
ಕೋಟ (ರಾಜಸ್ಥಾನ): “500 ರೂ., 2 ಸಾವಿರ ರೂ. ನೋಟುಗಳಿಂದ ಮಹಾತ್ಮಾ ಗಾಂಧಿಯವರ ಫೋಟೋ ತೆಗೆಯಿರಿ. ಏಕೆಂದರೆ ಅದನ್ನು ಭ್ರಷ್ಟಾಚಾರಕ್ಕಾಗಿ ಬಳಕೆ ಮಾಡಲಾಗುತ್ತದೆ’ ಹೀಗೆಂದು ರಾಜಸ್ಥಾನದ ಕಾಂಗ್ರೆಸ್ ಶಾಸಕ ಭರತ್ ಸಿಂಗ್ ಕುಂದನ್‌ಪುರ್ ಪ್ರಧಾನಿ ನರೇಂದ್ರ ಮೋದಿಯವರಿಗೇ ಪತ್ರ ಬರೆದಿದ್ದಾರೆ.
ಇದು ಮಹಾತ್ಮಾ ಗಾಂಧಿಯವರಿಗೆ ಮಾಡುವ ಅವಮಾನ ಎಂದು ಪತ್ರದಲ್ಲಿ ಉಲ್ಲೇಖೀಸಿದ್ದಾರೆ. ಮಹಾತ್ಮಾ ಗಾಂಧಿಯವರು ಸತ್ಯದ ಪ್ರತೀಕ ಎಂದು ಬಣ್ಣಿಸಿರುವ ಭರತ್ ಸಿಂಗ್, 500 ರೂ., 2 ಸಾವಿರ ರೂ. ನೋಟುಗಳನ್ನು ಲಂಚ ನೀಡಲು, ಬಾರ್‌ಗಳಲ್ಲಿ ಮದ್ಯದ ಪಾರ್ಟಿಗಳಿಗೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ರಾಜಸ್ಥಾನದಲ್ಲಿ 2019ರ ಜನವರಿಯಿಂದ 2020 ಡಿ.30ರ ವರೆಗೆ 616 ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿವೆ. ಅಂದರೆ ಪ್ರತಿ ದಿನ ಸರಾಸರಿ 2 ಕೇಸುಗಳು ದಾಖಲಾದಂತೆ ಆಗಿವೆ ಎಂದು ಶಾಸಕ ಸಿಂಗ್ ಪ್ರಧಾನಿಯವರಿಗೆ ವಿವರಿಸಿದ್ದಾರೆ.
ಇದನ್ನೂ ಓದಿ:ಒತ್ತಡಗಳಿಗೆ ಮಣಿಯದೆ ಕ್ರಮ ಕೈಗೊಳ್ಳಲಾಗುವುದು : ಸಿಎಂ ಯೋಗಿ ಆದಿತ್ಯನಾಥ್
5 ರೂ., 10 ರೂ., 20 ರೂ., 50 ರೂ., 100 ರೂ. 200 ರೂ.ಗಳಲ್ಲಿ ಮಾತ್ರ ಗಾಂಧಿ ಚಿತ್ರ ಇರಬೇಕು. ಏಕೆಂದರೆ ಅವುಗಳನ್ನು ಬಡವರು ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುತ್ತಾರೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ವರ್ಷದ ಆರಂಭದಲ್ಲಿ ಸ್ವಚ್ಛ ಭಾರತ ಸಂಕಲ್ಪ ಮಾಡಿ: ಗೋವಾ ಸಿಎಂ ಡಾ.ಪ್ರಮೋದ್ ಸಾವಂತ್ ಕರೆ
ನವಜೋತ್ ಸಿಂಗ್ ಸಿಧು ಪತ್ನಿಗೆ ಕ್ಯಾನ್ಸರ್: ನಿಮಗಾಗಿ ಕಾದಿರುವೆ ಎಂದು ಟ್ವೀಟ್ ಮಾಡಿದ ಕೌರ್
ದೋಷಿ,2 ವರ್ಷ ಶಿಕ್ಷೆಯ ತೀರ್ಪು…ರಾಹುಲ್ ರಾಜಕೀಯ ಭವಿಷ್ಯ ಏನಾಗಲಿದೆ?ಕಾನೂನು ತಜ್ಞರು ಹೇಳೋದೇನು
ವಿದ್ಯಾರ್ಥಿನಿಗೆ ಹೊಡೆದ ಆರೋಪ: ಶಿಕ್ಷಕನನ್ನೇ ಅಟ್ಟಾಡಿಸಿ ಥಳಿಸಿದ ಪೋಷಕರು
ತಮಿಳುನಾಡು: ಕೋರ್ಟ್ ಆವರಣದಲ್ಲೇ ಪತ್ನಿ ಮುಖದ ಮೇಲೆ ಆ್ಯಸಿಡ್ ಎಸೆದ ಪತಿ
MUST WATCH
ಹೊಸ ಸೇರ್ಪಡೆ
ಬಾಲ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆಗೆ ಬಾಲ ಗೌರವ ಪ್ರಶಸ್ತಿ
ಬಿಜೆಪಿ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವ ಬದಲು ನಿರುದ್ಯೋಗ ಸೃಷ್ಟಿಸಿದೆ: ಸಿದ್ದು ಟೀಕೆ
ಎ. 2 ರಂದು ಸಿತಾರ್-ಬಾನ್ಸುರಿ ಜುಗಲ್ ಬಂದಿ “ಬಸಂತ್ ಉತ್ಸವ್’
ಹೊಸ ವರ್ಷದ ಆರಂಭದಲ್ಲಿ ಸ್ವಚ್ಛ ಭಾರತ ಸಂಕಲ್ಪ ಮಾಡಿ: ಗೋವಾ ಸಿಎಂ ಡಾ.ಪ್ರಮೋದ್ ಸಾವಂತ್ ಕರೆ
ದಾವಣಗೆರೆ: ಯುಗಾದಿಗೆ ಅತ್ತೆ ಮನೆಗೆ ಬಂದು ನಾಪತ್ತೆಯಾಗಿದ್ದ ಅಳಿಯನ ಭೀಕರ ಹತ್ಯೆ