ಆರ್‌ಎಸ್‌ಎಸ್ ಬಲವೂ ಅಲ್ಲ, ಎಡವೂ ಅಲ್ಲ : ಹೊಸಬಾಳೆ
Team Udayavani, Feb 2, 2023, 9:05 PM IST
ಜೈಪುರ : ಆರ್‌ಎಸ್‌ಎಸ್ ಬಲಪಂಥವೂ ಅಲ್ಲ, ಎಡ ಪಂಥವೂ ಅಲ್ಲ. ನಮ್ಮದು ರಾಷ್ಟ್ರೀಯ ಪಂಥ. ರಾಜಕೀಯದ ಒಲವಿಲ್ಲದೆ, ರಾಷ್ಟ್ರ ಹಿತಕ್ಕಾಗಿ ಮಾತ್ರ ಸೇವೆ ಸಲ್ಲಿಸುತ್ತಿರುವ ಸಂಸ್ಥೆ ಎಂದು ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
ದೇಶದಲ್ಲಿರುವ ಜನರ ಆಚರಣೆಗಳೂ ವಿಭಿನ್ನವಾಗಿದ್ದರೂ, ಅವರೆಲ್ಲರ ಪೂರ್ವಜರು ಹಿಂದೂಗಳೇ ಹಾಗಾಗಿ ದೇಶದಲ್ಲಿರುವವರೆಲ್ಲರೂ ಹಿಂದೂಗಳೇ ಎಂದು ಹೊಸಬಾಳೆ ಪ್ರತಿಪಾದಿಸಿದ್ದಾರೆ.
ರಾಜಸ್ಥಾನದ ಜೈಪುರದಲ್ಲಿ ನಡೆಯುತ್ತಿರುವ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಲವಂತದಿಂದ ಗೋಮಾಂಸ ತಿಂದವರನ್ನು ಹಿಂದೂಗಳಲ್ಲ ಎಂದು ಹೇಳಿ ಅವರನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಅವರೆಲ್ಲರೂ ಭಾರತದವರು. ಯಾರ ಪೂರ್ವಜರು ಭಾರತೀಯರೋ ಅವರೆಲ್ಲರೂ ಹಿಂದೂಗಳೇ ಎಂದರು.
ಆರ್‌ಎಸ್‌ಎಸ್ ಒಂದು ರಾಷ್ಟೀಯವಾದಿ ಸಂಘಟನೆ, ರಾಷ್ಟ್ರ ಹಿತಕ್ಕಾಗಿಯಷ್ಟೇ ಶ್ರಮಿಸುವ ಸಂಘಟನೆ. ಸಂಘಟಿತ ಪ್ರಯತ್ನದಿಂದ ಅಷ್ಟೇ ಭಾರತ ವಿಶ್ವಗುರುವಾಗಿ, ಜಗತ್ತನ್ನು ಮುನ್ನಡೆಸಲು ಸಾಧ್ಯ. ಸಂಘ ದೇಶದ ಎಲ್ಲ ಧರ್ಮ, ಪಂಗಡಗಳನ್ನು ಒಂದೇ ಎಂದು ಪರಿಗಣಿಸುತ್ತದೆ ಎಂದು ಹೊಸಬಾಳೆ ತಿಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶಾಲಾ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಪತ್ತೆಯಾಯ್ತು ಕಾಂಡೋಮ್, ಮದ್ಯದ ಬಾಟಲಿ…
ಗೋವಾ ಸಮುದ್ರ ತೀರದಲ್ಲಿ ಮದುವೆಯಾಗುವ ಕನಸು ಕಾಣುತ್ತಿದ್ದವರಿಗೆ ಇನ್ನು ಹೆಚ್ಚು ಖರ್ಚು
ಏರ್ ಇಂಡಿಯಾ ಮತ್ತು ನೇಪಾಳ ಏರ್‌ಲೈನ್ಸ್ ವಿಮಾನಗಳು ಢಿಕ್ಕಿ ಹೊಡೆಯುತ್ತಿವು!!
ಕೊಚ್ಚಿನ್ ನಲ್ಲಿ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ
‘ಅನರ್ಹ ಸಂಸದ’ ಎಂದು ಟ್ವಿಟರ್ ನಲ್ಲಿ ಹಾಕಿಕೊಂಡ ರಾಹುಲ್ ಗಾಂಧಿ