

Team Udayavani, Jun 26, 2019, 2:47 PM IST
ನವದೆಹಲಿ: ದೇಶದ ಎರಡು ಪ್ರತಿಷ್ಠಿತ ಗುಪ್ತಚರ ಇಲಾಖೆಗೆ ಕೇಂದ್ರ ಸರ್ಕಾರ ಬುಧವಾರ ನೂತನ ನಿರ್ದೇಶಕರನ್ನು ನೇಮಕ ಮಾಡಿದೆ. 1984ರ ಬ್ಯಾಚ್ ನ ಐಪಿಎಸ್ ಅಧಿಕಾರಿ ಅರವಿಂದ್ ಕುಮಾರ್ ಐಬಿ(ಇಂಟೆಲಿಜೆನ್ಸ್ ಬ್ಯುರೋ)ಗೆ ನೂತನ ನಿರ್ದೇಶಕರಾಗಿದ್ದು, ಸಮಂತ್ ಗೋಯಲ್ ಅವರನ್ನು “ರಾ”(ರಿಸರ್ಚ್ ಅಂಡ್ ಅನಾಲಿಸೀಸ್ ವಿಂಗ್)ನ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ.
ಅಸ್ಸಾಂ-ಮೇಘಾಲಯ ಕೇಡರ್ ನ ಐಪಿಎಸ್ ಅಧಿಕಾರಿ ಅರವಿಂದ್ ಕುಮಾರ್ ಇಂಟೆಲಿಜೆನ್ಸ್ ಬ್ಯುರೋದ ಕಾಶ್ಮೀರ ಡೆಸ್ಕ್ ನಲ್ಲಿ ವಿಶೇಷ ನಿರ್ದೇಶಕರಾಗಿ ಕಾರ್ಯನಿರ್ವಹಿಸುವ ಮೂಲಕ ಕಾಶ್ಮೀರ್ ಎಕ್ಸ್ ಪರ್ಟ್ ಎಂದೇ ಹೆಸರುಗಳಿಸಿದ್ದಾರೆ. ಅಲ್ಲದೇ ಎಡಪಂಥೀಯ ಉಗ್ರವಾದವನ್ನು ಹತ್ತಿಕ್ಕುವಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದು ವರದಿ ತಿಳಿಸಿದೆ.
ಸಮಂತ್ ಗೋಯಲ್ 1990ರಲ್ಲಿ ಪಂಜಾಬ್ ನಲ್ಲಿ ಉಗ್ರಗಾಮಿ ಚಟುವಟಿಕೆ ತೀವ್ರವಾಗಿದ್ದ ಸಂದರ್ಭದಲ್ಲಿ ಉಗ್ರಗಾಮಿ ಚಟುವಟಿಕೆ ಹತ್ತಿಕ್ಕುವಲ್ಲಿ ಗೋಯಲ್ ಮುಖ್ಯಪಾತ್ರವಹಿಸಿದ್ದರು. ಅಲ್ಲದೇ ದುಬೈ, ಲಂಡನ್ ನಲ್ಲಿಯೂ ಕಾರ್ಯನಿರ್ವಹಿಸಿದ್ದರು.
ದೇಶದ ಎರಡು ಪ್ರಮುಖ ಗುಪ್ತಚರ ಏಜೆನ್ಸಿಗೆ ನೂತನ ಮುಖ್ಯಸ್ಥರನ್ನು ನೇಮಕವಾದ ಬಳಿಕ ಇದೀಗ ಎಲ್ಲರ ಕಣ್ಣು ಭಾರತದ ಸೇನೆಯ ನೂತನ ಮುಖ್ಯಸ್ಥರು ಯಾರಾಗಲಿದ್ದಾರೆ ಎಂಬ ಕುತೂಹಲ ಮೂಡಿದೆ. ಹಾಲಿ ಆರ್ಮಿ ವರಿಷ್ಠ ಜನರಲ್ ಬಿಪಿನ್ ರಾವತ್ 2019ರ ಡಿಸೆಂಬರ್ ನಲ್ಲಿ ನಿವೃತ್ತಿಯಾಗಲಿದ್ದಾರೆ ಎಂದು ವರದಿ ವಿವರಿಸಿದೆ.
Ad
You seem to have an Ad Blocker on.
To continue reading, please turn it off or whitelist Udayavani.