ಲೋಕಸಭೆ ಸಮರ; ರಮ್ಜಾನ್ ಹಿನ್ನೆಲೆ ಸಮಯ ಬದಲಾಯಿಸಲು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

Team Udayavani, May 13, 2019, 3:08 PM IST

ನವದೆಹಲಿ:ಚುನಾವಣಾ ಆಯೋಗ ನಿಗದಿಪಡಿಸಿದ ಲೋಕಸಭಾ ಚುನಾವಣೆಯ ಸಮಯವನ್ನು ರಮ್ಜಾನ್ ಹಿನ್ನೆಲೆಯಲ್ಲಿ ಬದಲಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಜಾಗೊಳಿಸಿದೆ.

ಕೇಂದ್ರ ಚುನಾವಣಾ ಆಯೋಗ ಲೋಕಸಭಾ ಚುನಾವಣೆಯ ಮತದಾನ ಬೆಳಗ್ಗೆ 7ಗಂಟೆಯಿಂದ ಸಂಜೆ 6ಗಂಟೆವರೆಗೆ ನಡೆಸುವಂತೆ ಪ್ರಕಟಣೆ ಹೊರಡಿಸಿತ್ತು. ಆದರೆ ರಮ್ಜಾನ್ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆ ಅಂತಿಮ ಹಂತದ (ಮೇ 19) ಮತದಾನದ ಸಮಯವನ್ನು ಬೆಳಗ್ಗೆ 5.30ರಿಂದ ಅಥವಾ 6ಗಂಟೆಯಿಂದ ಆರಂಭಿಸಬೇಕೆಂದು ಕೋರಿ ವಕೀಲ ಮೊಹಮ್ಮದ್ ನಿಜಾಮುದ್ದೀನ್ ಪಾಶಾ ಅರ್ಜಿ ಸಲ್ಲಿಸಿದ್ದರು.

ಇದಕ್ಕೂ ಮುನ್ನ ಸುಪ್ರೀಂ ಪೀಠ, ಲೋಕಸಭಾ ಚುನಾವಣೆಯ ಬಾಕಿ ಇರುವ ಕ್ಷೇತ್ರಗಳಲ್ಲಿ ಮತದಾನದ ಸಮಯವನ್ನು ಬೆಳಗ್ಗೆ 7ಗಂಟೆ ಬದಲು ಬೆಳಗ್ಗೆ 5ಗಂಟೆಗೆ ಆರಂಭಿಸಲು ಸೂಕ್ತವಾದ ಆದೇಶ ಹೊರಡಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು. ಆದರೆ ಚುನಾವಣಾ ಆಯೋಗ ಸಮಯ ಬದಲಾವಣೆ ಅಸಾಧ್ಯ ಎಂದು ಅಫಿಡವಿತ್ ಸಲ್ಲಿಸಿತ್ತು.

ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ನ ಜಸ್ಟೀಸ್ ಇಂದಿರಾ ಬ್ಯಾನರ್ಜಿ ಹಾಗೂ ಸಂಜೀವ್ ಖನ್ನಾ ನೇತೃತ್ವದ ರಜಾಕಾಲದ ಪೀಠ ಸಮಯ ಬದಲಾವಣೆಯ ಅರ್ಜಿಯನ್ನು ವಜಾಗೊಳಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ