
‘ಉರಿ’ ಸೇನಾ ನೆಲೆ ಮೇಲೆ ಉಗ್ರ ದಾಳಿ ಯತ್ನ ವಿಫಲ
Team Udayavani, Feb 11, 2019, 4:10 AM IST

ನವದೆಹಲಿ: ಜಮ್ಮು ಕಾಶ್ಮೀರ ಉರಿ ವಲಯದಲ್ಲಿರುವ ರಾಜ್ವಾನಿಯಲ್ಲಿನ ಸೇನಾ ಶಸ್ತ್ರಾಸ್ತ್ರ ಘಟಕದ ಮೇಲಿನ ಸಂಭಾವ್ಯ ಉಗ್ರ ದಾಳಿಯನ್ನು ನಮ್ಮ ಜವಾನರು ವಿಫಲಗೊಳಿಸಿದ್ದಾರೆ. ಈ ಪ್ರದೇಶದಲ್ಲಿ ಗಸ್ತು ನಿರತರಾಗಿದ್ದ ಯೋಧರಿಗೆ ಶಂಕಿತ ಚಟುವಟಿಕೆಗಳು ಕಂಡುಬಂದ ಬಂದ ಹಿನ್ನಲೆಯಲ್ಲಿ ತಕ್ಷಣವೇ ಅವರು ಗುಂಡಿನ ದಾಳಿ ನಡೆಸಿದರು. ಆ ಮೂಲಕ ಯಾವುದೇ ಸಂಭಾವ್ಯ ಉಗ್ರ ದಾಳಿಯನ್ನು ಸೇನೆ ವಿಫಲಗೊಳಿಸಿದೆ ಎಂದು ವರದಿಯಾಗಿದೆ. ಇನ್ನೊಂದು ಮೂಲಗಳ ಪ್ರಕಾರ ಸೇನಾ ಜವಾನರು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆಯ ಬಳಿಕ ಸಂಪೂರ್ಣ ಪ್ರದೇಶವನ್ನು ಸೇನೆ ಸುತ್ತುವರಿದಿದ್ದು, ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸ್ ಪಡೆಗಳು ತೀವ್ರ ಶೋಧ ಕಾರ್ಯಾಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸೇನೆಯ ಎಲ್ಲಾ ಸ್ಥಳೀಯ ಪಡೆಗಳನ್ನು ಹಾಗೂ ಕೆಂದ್ರೀಯ ಅರೆಸೇನಾಪಡೆಯ ಜವಾನರನ್ನು ಉರಿ ಪ್ರದೇಶದಲ್ಲಿ ನಿಯೋಜಿಸಲಾಗಿದೆ.
ಇಬ್ಬರು ಶಂಕಿತರನ್ನು ಸೇನೆ ವಶಕ್ಕೆ ಪಡೆದಿದ್ದು ಅವರನ್ನು ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ತಿಳಿದುಬಂದಿದೆ. ಕಣಿವೆ ರಾಜ್ಯದ ಕುಲ್ಗಾಂ ಜಿಲ್ಲೆಯಲ್ಲಿ ಐವರು LET ಉಗ್ರರನ್ನು ಸೇನೆ ಹೊಡೆದುರುಳಿಸಿದ ಒಂದು ದಿನದ ಬಳಿಕ ಈ ಘಟನೆ ನಡೆದಿದೆ.
J&K: Last night the security personnel of Army Artillery unit at Rajarwani, Uri detected some suspicious movement around the camp and opened fire. The area has been cordoned off and is being searched jointly by Police & Army. Two people are being examined. pic.twitter.com/yL2e4l3h5Y
— ANI (@ANI) February 11, 2019
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uttar Pradesh: ಮಗಳ ಮದುವೆಗೆ ಕೂಡಿಟ್ಟ 18 ಲಕ್ಷ ರೂ. ಗೆದ್ದಲು ಪಾಲು!

Today ಆರ್ಟ್ ಆಫ್ ಲಿವಿಂಗ್ “ಸಂಸ್ಕೃತಿ ಉತ್ಸವ”; ಸಮಾರಂಭಕ್ಕೆ ವಿಶ್ವದ ದೊಡ್ಡಣ್ಣನ ಆತಿಥ್ಯ

Road ವರ್ಷಾಂತ್ಯಕ್ಕೆ ಹೆದ್ದಾರಿಗಳು ಗುಂಡಿ ಮುಕ್ತ: ಸಚಿವ ನಿತಿನ್ ಗಡ್ಕರಿ

Cable TV service ಎಂಎಸ್‌ಒಗಳಿಗೆ 10 ವರ್ಷ ಲೈಸನ್ಸ್: ಕೇಂದ್ರ ಸರಕಾರ

US aims ಭಾರತೀಯರಿಗೆ 10 ಲಕ್ಷಕ್ಕೂ ಅಧಿಕ ಅಮೆರಿಕದ ವಲಸೆರಹಿತ ವೀಸಾ ವಿತರಣೆ
MUST WATCH
ಹೊಸ ಸೇರ್ಪಡೆ

Baana Daariyalli movie review; ಗಣೇಶ್- ಗುಬ್ಬಿ ಚಿತ್ರ ಹೇಗಿದೆ?

Asian Games: ವಿಶ್ವದಾಖಲೆಯೊಂದಿಗೆ ಮತ್ತೊಂದು ಚಿನ್ನಕ್ಕೆ ಗುರಿಯಿಟ್ಟ ಭಾರತದ ಶೂಟಿಂಗ್ ತಂಡ

ICC World Cup 2023; ಭಾರತ ತಂಡದಲ್ಲಿ ಮಹತ್ವದ ಬದಲಾವಣೆ; ಆರ್.ಅಶ್ವಿನ್ ಗೆ ಬುಲಾವ್

Karnataka Bandh: ಕಾವೇರಿಗಾಗಿ ಜನಾಕ್ರೋಶ, ಹಲವೆಡೆ ಪ್ರತಿಭಟನೆ; ಬಿಗಿ ಪೊಲೀಸ್ ಭದ್ರತೆ

Sept 29: ವಿಶ್ವ ಹೃದಯ ದಿನ: ಹೃದಯ ಆರೋಗ್ಯಕ್ಕೆ ಸಹಕಾರಿ ಆಹಾರಾಭ್ಯಾಸಗಳು