ಶ್ರೀರಾಮನ ಮೂರ್ತಿ ಕೆತ್ತನೆಗೆ ನೇಪಾಳದ ಸಾಲಿಗ್ರಾಮ ಶಿಲೆ
ಅಯೋಧ್ಯೆಯಲ್ಲಿ ರಾಮ, ಸೀತೆಯರ ವಿಗ್ರಹಗಳಿಗೆ ಗಂಡಕಿ ನದಿಯ ಕಲ್ಲು ಬಳಕೆ
Team Udayavani, Jan 31, 2023, 7:40 AM IST
ಅಯೋಧ್ಯಾ:ಮುಂದಿನ ವರ್ಷಾರಂಭದಲ್ಲಿ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮನ ದೇಗುಲ ತಲೆಯೆತ್ತಲಿದೆ. ಇದಕ್ಕಾಗಿ ಮೂರು ಅಡಿ ಎತ್ತರದ ಶ್ರೀರಾಮ, ಸೀತೆಯರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುವುದು. ಇವನ್ನು ನೇಪಾಳದ ಕಾಳಿಗಂಡಕಿ ನದಿಯಲ್ಲಿ ಸಿಗುವ ಸಾಲಿಗ್ರಾಮ ಶಿಲೆಯಿಂದ ನಿರ್ಮಿಸಲಾಗುವುದು. ತಲಾ 25 ಮತ್ತು 15 ಟನ್ ತೂಕವಿರುವ ಈ ಕಲ್ಲುಗಳನ್ನು ಜ.30ರಂದು ನೇಪಾಳದಿಂದ ಭಾರತಕ್ಕೆ ಕಳುಹಿಸಲಾಗಿದೆ.
ನೇಪಾಳ ಸರ್ಕಾರ ಸ್ವತಃ ಆಸಕ್ತಿ ವಹಿಸಿ ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದೆ. ಶ್ರೀರಾಮ ವಿಷ್ಣುವಿನ ಅವತಾರ. ಗಂಡಕಿ ನದಿಯಲ್ಲಿ ಸಿಗುವ ಸಾಲಿಗ್ರಾಮವನ್ನು ವಿಷ್ಣುವೆಂದೇ ಭಾವಿಸಿ ಪೂಜಿಸಲಾಗುತ್ತದೆ. ಹೀಗಾಗಿ ಈ ನದಿಯ ಶಿಲೆಯನ್ನು ಬಳಸಲು ನಿರ್ಧರಿಸಲಾಯಿತು. ಅಯೋಧ್ಯಾ ಶ್ರೀರಾಮನ ದೇವಸ್ಥಾನದಲ್ಲಿ ಮೂಲ ರಾಮಲಲ್ಲಾ ವಿಗ್ರಹಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗುತ್ತದೆ. ಅದರ ಜೊತೆಗೆ ಮುಖ್ಯಮಂದಿರದಲ್ಲಿ ಸಾಲಿಗ್ರಾಮ ಮೂರ್ತಿಯನ್ನು ಸ್ಥಾಪಿಸಲಾಗುತ್ತದೆ.
ಜೂನ್‌ಗೆ ಅಯೋಧ್ಯಾ ಅಂ.ರಾ. ವಿಮಾನನಿಲ್ದಾಣ: ಒಂದು ಕಡೆ ರಾಮಮಂದಿರ ನಿರ್ಮಾಣ ಭರದಿಂದ ಸಾಗಿರುವಂತೆಯೇ, ಅಯೋಧ್ಯೆಯಲ್ಲಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣವನ್ನು ಈ ವರ್ಷ ಜೂನ್ ಹೊತ್ತಿಗೆ ಮುಗಿಸಲು ಯೋಗಿ ಆದಿತ್ಯನಾಥ್ ಸರ್ಕಾರ ತೀವ್ರ ಆಸಕ್ತಿವಹಿಸಿಎ. ಕಾಮಗಾರಿಗಳು ಅಷ್ಟೇ ತ್ವರಿತವಾಗಿ ನಡೆಯುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳೆ ವಿಮೆ ಪರಿಹಾರಕ್ಕಾಗಿ ಡಿಜಿಕ್ಲೈಮ್ ; ಸಚಿವ ತೋಮರ್ ಸಿಂಗ್ ಅವರಿಂದ ಅನಾವರಣ
ಲಂಡನ್ ನಲ್ಲಿ ಖ್ಯಾತ ಗಾಯಕಿ ಬಾಂಬೆ ಜಯಶ್ರೀಯವರಿಗೆ ಶಸ್ತ್ರಚಿಕಿತ್ಸೆ ; ಆರೋಗ್ಯ ಸ್ಥಿರ
12 ನೇ ಕ್ಲಾಸ್ ಪಾಸ್ ಆಗಿರುವ ಪ್ರಧಾನಿ….; ಕೇಜ್ರಿವಾಲ್ ವಾಗ್ದಾಳಿ
ರಾಹುಲ್ ಗಾಂಧಿಯನ್ನು’ಮೀರ್ ಜಾಫರ್’ ಎಂದರು ; ಪ್ರಧಾನಿ ವಿರುದ್ಧ ಪ್ರಿಯಾಂಕಾ ಕಿಡಿ
64 ಅಧಿಕೃತ ತಿದ್ದುಪಡಿಗಳೊಂದಿಗೆ ಹಣಕಾಸು ಮಸೂದೆ ಅಂಗೀಕರಿಸಿದ ಲೋಕಸಭೆ