ಚಂಡೀಗಢ ವಿವಿ ವೈರಲ್ ವಿಡಿಯೋ: 23 ವರ್ಷದ ಶಿಮ್ಲಾದ ಯುವಕ ಬಂಧನ
Team Udayavani, Sep 18, 2022, 10:38 PM IST
ಚಂಡೀಗಢ : ವಿಶ್ವವಿದ್ಯಾನಿಲಯದ ‘ಲೀಕ್’ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಮ್ಲಾದ 23 ವರ್ಷದ ಯುವಕನನ್ನ ಬಂಧಿಸಲಾಗಿದೆ. ಪ್ರಕರಣದಲ್ಲಿ ಇದು ಎರಡನೇ ಬಂಧನವಾಗಿದೆ. ಇದಕ್ಕೂ ಮೊದಲು, ಹಾಸ್ಟೆಲ್ ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವಿಡಿಯೋ ಗಳನ್ನು ರೆಕಾರ್ಡ್ ಮಾಡಿದ ಆರೋಪದ ಮೇಲೆ ಪಂಜಾಬ್ ಪೊಲೀಸರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯನ್ನು ಬಂಧಿಸಿದ್ದರು.
ಇದನ್ನೂ ಓದಿ:ಹಲವು ವಿದ್ಯಾರ್ಥಿನಿಯರ ವಿಡಿಯೋಗಳು ಸೋರಿಕೆಯಾಗಿಲ್ಲ: ಚಂಡೀಗಢ ವಿವಿ
ವ್ಯಕ್ತಿಯನ್ನು ಶಿಮ್ಲಾದ ರೋಹ್ರು ನಿವಾಸಿ 23 ವರ್ಷದ ಸನ್ನಿ ಮೆಹ್ತಾ ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಬಂಧಿತ ಮಹಿಳಾ ವಿದ್ಯಾರ್ಥಿನಿಯೂ ರೋಹ್ರು ಮೂಲದವಳಾಗಿದ್ದಾಳೆ. ಆರೋಪಿ ವಿದ್ಯಾರ್ಥಿನಿಗೆ ಈ ವ್ಯಕ್ತಿ ಪರಿಚಯವಿದ್ದ ಎಂದು ಪಂಜಾಬ್ ಪೊಲೀಸರು ಈ ಹಿಂದೆ ಹೇಳಿದ್ದರು.
“ಶಿಮ್ಲಾದ ಒಬ್ಬ ವ್ಯಕ್ತಿ ಆರೋಪಿ ಹುಡುಗಿಗೆ ಪರಿಚಿತನಾಗಿದ್ದಾನೆ. ಅವನು ಸಿಕ್ಕಿಬಿದ್ದ ನಂತರವೇ ಹೆಚ್ಚಿನ ವಿವರಗಳು ತಿಳಿಯುತ್ತವೆ. ಆಕೆಯ ಮೊಬೈಲ್ ಫೋನ್‌ನ ಫೋರೆನ್ಸಿಕ್ ತನಿಖೆ ನಡೆಸಲಾಗುವುದು” ಎಂದು ಎಡಿಜಿಪಿ ಸಮುದಾಯ ವ್ಯವಹಾರಗಳ ವಿಭಾಗ* ಗುರ್‌ಪ್ರೀತ್ ಡಿಯೋ ಅವರು ಎಎನ್‌ಐಗೆ ತಿಳಿಸಿದ್ದಾರೆ.