ಮೆಹ್ರೌಲಿ ಅರಣ್ಯದಲ್ಲಿ ಸಿಕ್ಕ ಮೂಳೆಗಳು ಶ್ರದ್ಧಾಳದ್ದೆ… ಡಿಎನ್ಎ ಪರೀಕ್ಷೆಯಲ್ಲಿ ಸಾಬೀತು!
ಶ್ರದ್ಧಾ ವಾಕರ್ ಹತ್ಯೆ ಪ್ರಕರಣ
Team Udayavani, Dec 15, 2022, 3:33 PM IST
ನವದೆಹಲಿ: ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ತಲ್ಲಣ ಎಬ್ಬಿಸಿದ್ದ ಶ್ರದ್ದಾ ವಾಕರ್ ಹತ್ಯೆ ಪ್ರಕರಣದ ಕುರಿತು ಮಹತ್ವದ ವರದಿಯೊಂದು ಪೊಲೀಸರ ಕೈಸೇರಿದೆ.
ಶ್ರದ್ದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಕೈಗೆತ್ತಿಕೊಂಡ ಪೊಲೀಸರು ಶ್ರದ್ದಾ ಅವರ ದೇಹದ ಭಾಗಗಳ ಹುಡುಕಾಟಕ್ಕೆ ಮುಂದಾಗಿದ್ದಾರೆ ಈ ವೇಳೆ ಮೆಹ್ರೌಲಿ ಅರಣ್ಯ ಪ್ರದೇಶದಲ್ಲಿ ಮಾನವ ದೇಹದ ಮೂಳೆಗಳು ಪತ್ತೆಯಾಗಿತ್ತು, ಇದರ ಡಿಎನ್ಎ ಪರೀಕ್ಷೆಗಾಗಿ ಲ್ಯಾಬ್ ಗೆ ಕಳುಹಿಸಲಾಗಿತ್ತು ಅಲ್ಲದೆ ಶ್ರದ್ದಾ ಅವರ ತಂದೆಯ ಡಿಎನ್ಎ ಸ್ಯಾಂಪಲ್ ಲ್ಯಾಬ್ ಗೆ ಕಳುಹಿಸಿಕೊಡಲಾಗಿತ್ತು ಸದ್ಯ ಮೂಳೆಗಳ ಡಿಎನ್ಎ ವರದಿ ಪೊಲೀಸರ ಕೈ ಸೇರಿದ್ದು ಮೆಹ್ರೌಲಿ ಅರಣ್ಯ ಪ್ರದೇಶದಲ್ಲಿ ಸಿಕ್ಕ ಮೂಳೆಗಳು ಶ್ರದ್ದಾ ಅವರದ್ದೇ ಎಂಬುದು ಡಿಎನ್ಎ ವರದಿಯಲ್ಲಿ ಸಾಬೀತಾಗಿದೆ.
ಮುಂಬೈ ಮೂಲದ ಅಫ್ತಾಬ್ ಪೂನವಾಲಾ ಎಂಬಾತ ಕಳೆದ ಮೇ 18 ರಂದು ತನ್ನ ಪ್ರೇಯಸಿ ಶ್ರದ್ಧಾ ವಾಕರ್ ನನ್ನು ಕೊಲೆ ಮಾಡಿ ಬಳಿಕ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೆಹಲಿಯ ಮೆಹರೌಲಿ ಅರಣ್ಯದಲ್ಲಿ ಎಸೆದಿದ್ದ. ಪ್ರಕರಣಕ್ಕೆ ಸಂಬಂಧಿಸಿ ಅಫ್ತಾಬ್ನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಈ ವೇಳೆ ಮೆಹರೌಲಿ ಅರಣ್ಯದಲ್ಲಿ ಮೂಳೆಗಳು ಪತ್ತೆಯಾಗಿತ್ತು ಇದನ್ನು ವಶಕ್ಕೆ ಪಡೆದ ಪೊಲೀಸರು ಡಿಎನ್ಎ ಪರೀಕ್ಷೆಗೆ ಕಳುಹಿಸಿದ್ದರು ಆದರೆ ಇಂದು ಬಂದ ವರದಿಯಲ್ಲಿ ಶ್ರದ್ದಾ ಅವರದ್ದೇ ಎಂದು ದೃಢ ಪಟ್ಟಿದೆ.
ಇದನ್ನೂ ಓದಿ: ಯಡಿಯೂರಪ್ಪ, ವಿಜಯೇಂದ್ರ, ಶ್ರೀನಿವಾಸ ಪ್ರಸಾದ್ ನನಗೆ ಹಣ ಕೊಡಲು ಬಂದಿದ್ದರು: ವಿಶ್ವನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು