
ಕಾರಿಗೆ ಢಿಕ್ಕಿ ಹೊಡೆದು ಪಾದಚಾರಿಗಳ ಮೇಲೆ ಹರಿದ ಟ್ರಕ್: 6 ಮಂದಿ ದಾರುಣ ಅಂತ್ಯ
Team Udayavani, Jan 23, 2023, 8:13 AM IST

ಲಕ್ನೋ: ಟ್ರಕ್ ವೊಂದು ಕಾರಿಗೆ ಢಿಕ್ಕಿ ಹೊಡೆದು, ಪಾದಚಾರಿಗಳ ಮೇಲೆ ಹರಿದ ಪರಿಣಾಮ 6 ಮಂದಿ ಮೃತಪಟ್ಟ ದಾರುಣ ಘಟನೆ ಲಕ್ನೋ-ಕಾನ್ಪುರ ಹೆದ್ದಾರಿಯ ಅಚಲಗಂಜ್ ದಲ್ಲಿ ಭಾನುವಾರ (ಜ.22 ರಂದು) ನಡೆದಿದೆ.
ಭಾನುವಾರ ಸಂಜೆ 7 ಗಂಟೆಯ ಸಮಯದಲ್ಲಿ ಲಕ್ನೋ-ಕಾನ್ಪುರ ಹೆದ್ದಾರಿಯ ಅಚಲಗಂಜ್ ದಲ್ಲಿ ವೇಗವಾಗಿ ಬಂದ ಟ್ರಕ್ ವೊಂದು ಕಾರಿಗೆ ಢಿಕ್ಕಿ ಹೊಡೆದು ಪಾದಚಾರಿಗಳ ಮೇಲೆ ಹರಿದಿದೆ. ಕೆಲ ದೂರ ಕಾರನ್ನು ಎಳೆದುಕೊಂಡೇ ಹೋದ ಪರಿಣಾಮ ಕಾರು ಕಂದಕಕ್ಕೆ ಉರುಳಿದೆ.
ರಸ್ತೆಯಲ್ಲಿದ್ದ ಮಹಿಳೆ,ಮಗಳು ಸೇರಿದಂತೆ ಘಟನೆಯಲ್ಲಿ ಒಟ್ಟು 6 ಮಂದಿ ಮೃತಪಟ್ಟಿದ್ದಾರೆ. ಮೃತರನ್ನು ಛೋಟ್ಟೆಲಾಲ್ (32), ಶಿವಾಂಗ್ (30), ವಿಮಲೇಶ್ (60), ರಾಂಪ್ಯಾರಿ (45) ಮತ್ತು ಆಕೆಯ ಮಗಳು ಶಿವಾನಿ (13) ಎಂದು ಗುರುತಿಸಲಾಗಿದೆ.
ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ಬಳಿಕ ಸ್ಥಳೀಯರು ಪೊಲೀಸರ ನಡುವೆ ವಾಗ್ವಾದ ನಡೆದಿದ್ದು, ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಯಿತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manish Sisodia ರಿಗೆ ಮಧ್ಯಂತರ ಪರಿಹಾರ; ಪತ್ನಿ ಭೇಟಿಗೆ ಕೋರ್ಟ್ ಅನುಮತಿ

UP; ಅಯೋಧ್ಯೆಯಲ್ಲಿ ಬ್ರಿಜ್ ಭೂಷಣ್ ‘ಮಹಾ ರ‍್ಯಾಲಿ’ಗೆ ಅನುಮತಿ ನಿರಾಕಾರ

ಕಾಲೇಜು ವಿದ್ಯಾರ್ಥಿನಿಗೆ ಮಾದಕ ದ್ರವ್ಯ ನೀಡಿ ಅತ್ಯಾಚಾರ! ಕೇರಳದಲ್ಲಿ ನಡೆದ ಘಟನೆ

Chhatrapati Shivaji; ಧೈರ್ಯ-ಶೌರ್ಯಕ್ಕೆ ದಾರಿದೀಪ ಛತ್ರಪತಿ ಶಿವಾಜಿ: ಪ್ರಧಾನಿ ಮೋದಿ

Manipur ಹಿಂಸಾಚಾರ: ಮೃತ್ಯು ಸಂಖ್ಯೆ ನೂರರ ಸನಿಹ! ಹಲವರಿಗೆ ಗಂಭೀರ ಗಾಯ