ಪುಟಾಣಿ ಪತ್ರಕ್ಕೆ ಪ್ರಧಾನಿ ಫಿದಾ
Team Udayavani, Aug 6, 2018, 11:15 AM IST
ಹೊಸದಿಲ್ಲಿ: ಇತ್ತೀಚೆಗೆ “ಮನ್ ಕೀ ಬಾತ್’ನಲ್ಲಿ ಯೋಧರ ತ್ಯಾಗವನ್ನು ಪ್ರಶಂಸಿಸಿದ್ದ ಪ್ರಧಾನಿ ಮೋದಿ, ದೇಶದ ನಾಗರಿಕರು ತಾವು ಕಣ್ಣಾರೆ ಕಂಡ ಸೈನಿಕರ ಸೇವೆಯನ್ನು ಪತ್ರದ ಮೂಲಕ ತಮ್ಮೊಂದಿಗೆ ಹಂಚಿಕೊಳ್ಳಬೇಕೆಂದು ಕರೆ ನೀಡಿದ್ದರು. ಇದಕ್ಕೆ ಸ್ಪಂದಿಸಿದ ಸಮಾಕಿತ್ ಎಂಬ ಪುಟ್ಟ ಬಾಲಕನೊಬ್ಬ ಪ್ರಧಾನಿಗೆ ಪತ್ರ ಬರೆದಿದ್ದು, ಆ ಪತ್ರವನ್ನು ಮೆಚ್ಚಿ ಮೋದಿ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.
ಪತ್ರದಲ್ಲಿ ಆ ಬಾಲಕ ಇತ್ತೀಚೆಗೆ ಲೇಹ್ಗೆ ಪ್ರವಾಸ ಹೋಗಿದ್ದನ್ನು ಹೇಳಿಕೊಂಡಿದ್ದು, ಅಲ್ಲಿ ಸೈನಿಕರು ಪ್ರತಿಕೂಲ ಹವಾಮಾನದ ನಡುವೆಯೂ ದೇಶ ಕಾಯುತ್ತಿರುವ ಸೈನಿಕರಿಗೆ ಸೆಲ್ಯೂಟ್ ಎಂದಿದ್ದಾನೆ. “”ನನ್ನ ಪುಟಾಣಿ ಸ್ನೇಹಿತನ ಮಾತುಗಳು ಮನಮುಟ್ಟಿವೆ” ಎಂದು ಪ್ರಧಾನಿ ಶ್ಲಾಘಿ ಸಿದ್ದಾರೆ.