ಬರಿಗಾಲಲ್ಲೇ ವಿನಾಯಕ ದೇಗುಲಕ್ಕೆ ತೆರಳಿದ್ದ ಸ್ಮತಿ!

Team Udayavani, May 29, 2019, 6:10 AM IST

ಮುಂಬಯಿ: ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರನ್ನೇ ಸೋಲಿಸಿ “ಜೈಂಟ್‌ ಕಿಲ್ಲರ್‌’ ಎನಿಸಿಕೊಂಡಿರುವ ಕೇಂದ್ರದ ಮಾಜಿ ಸಚಿವೆ ಸ್ಮತಿ ಇರಾನಿ ಅವರು, ಫ‌ಲಿತಾಂಶದ ಬಳಿಕ ಮುಂಬಯಿನ ಸಿದ್ಧಿ ವಿನಾಯಕ ದೇಗುಲಕ್ಕೆ ಬರಿಗಾಲಲ್ಲೇ ತೆರಳಿ ಪೂಜೆ ಸಲ್ಲಿಸಿದ್ದರಂತೆ!

ಸ್ಮತಿ ಅವರ ಆತ್ಮೀಯ ಸ್ನೇಹಿತೆ ಹಾಗೂ ನಿರ್ಮಾಪಕಿ ಏಕ್ತಾ ಕಪೂರ್‌ ಅವರು ಈ ವಿಚಾರ ಬಹಿರಂಗಪಡಿಸಿದ್ದಾರೆ. ಫ‌ಲಿತಾಂಶದ ಬಳಿಕ ಸ್ಮೃತಿ ಮುಂಬಯಿನ ಪ್ರಸಿದ್ಧ ದೇಗುಲವಾದ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ, ಅದೂ 14 ಕಿ.ಮೀ.ನಷ್ಟು ದೂರದವರೆಗೆ ಬರಿಗಾಲಲ್ಲೇ ತೆರಳಿದ್ದರು. ಅವರಿಗೆ ನಾನು ಮತ್ತು ನನ್ನ 4 ತಿಂಗಳ ಪುತ್ರ ರೇವಿ ಕೂಡ ಸಾಥ್‌ ನೀಡಿದ್ದೆವು ಎಂದು ಏಕ್ತಾ ಅವರು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ವಿಡಿಯೋ ಕೂಡ ಅಪ್‌ಲೋಡ್‌ ಮಾಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ