

Team Udayavani, Aug 18, 2018, 6:00 AM IST
ಶ್ರೀನಗರ: ಜಮ್ಮು- ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಶುಕ್ರವಾರ ಉಗ್ರರು ಹಾಗೂ ಭದ್ರತಾ ಪಡೆ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಒಬ್ಬ ಯೋಧ ಹುತಾತ್ಮರಾಗಿದ್ದಾರೆ. ಇಲ್ಲಿನ ಕಚೂ ಗ್ರಾಮದಲ್ಲಿ ಉಗ್ರರು ಅಡಗಿರುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಭದ್ರತಾ ಪಡೆ ಯೋಧರು ಶೋಧ ಕಾರ್ಯ ಆರಂಭಿಸಿದರು. ಅಷ್ಟರಲ್ಲಿ ಮನೆಯೊಂದರಲ್ಲಿ ಅವಿತಿದ್ದ ಉಗ್ರರು ಒಂದೇ ಸಮನೆ ಗುಂಡಿನ ದಾಳಿ ಆರಂಭಿಸಿದರು. ಈ ವೇಳೆ ಯೋಧ ರಾಮ್‌ಬಾಬು ಸಹಾಯ್ ಗಾಯಗೊಂಡಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಅವರು ಅಸುನೀಗಿದರು ಎಂದು ಸೇನಾ ಮೂಲಗಳು ತಿಳಿಸಿವೆ.
ಗ್ರೆನೇಡ್ ದಾಳಿ: ನಾಲ್ವರಿಗೆ ಗಾಯ
ಇದೇ ವೇಳೆ ಇಲ್ಲಿನ ಅವಂತಿಪೋರಾದ ಪೊಲೀಸ್ ಕಟ್ಟಡವೊಂದನ್ನು ಗುರಿಯಾಗಿಸಿಕೊಂಡು ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದು, ನಾಲ್ವರು ನಾಗರಿಕರು ಗಾಯಗೊಂಡಿದ್ದಾರೆ. ಗುರಿ ತಪ್ಪಿದ ಕಾರಣ, ಗ್ರೆನೇಡ್ ರಸ್ತೆಯಲ್ಲೇ ಸ್ಫೋಟಗೊಂಡಿದ್ದರಿಂದ ನಾಗರಿಕರಿಗೆ ಗಾಯಗಳಾಗಿವೆ. ಈ ಪೈಕಿ ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಹಿಳೆಯ ಹತ್ಯೆಗೈದ ಉಗ್ರರು
ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಶುಕ್ರವಾರ ಹಿಜ್ಬುಲ್ ಮುಜಾಹಿದೀನ್ ಉಗ್ರರು ಮಹಿಳೆಯೊಬ್ಬರನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಮೃತ ಮಹಿಳೆಯನ್ನು ಶಮೀಮಾ ಬಾನೋ ಎಂದು ಗುರುತಿಸಲಾಗಿದೆ. ಆದರೆ ಈ ಹತ್ಯೆಗೆ ಕಾರಣವೇನೆಂದು ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
Ad
Kejriwal: ಉತ್ತಮ ಆಡಳಿತಕ್ಕಾಗಿ ನನಗೆ ನೊಬೆಲ್ ಪ್ರಶಸ್ತಿ ಸಿಗಬೇಕು!: ಕೇಜ್ರಿವಾಲ್
Mumbai: ಮನೆಗೆ ಊಟಕ್ಕೆ ಬರುವುದಾಗಿ ಹೇಳಿ ಸೇತುವೆಯಿಂದ ಜಿಗಿದು ವೈದ್ಯ ಆತ್ಮಹ*ತ್ಯೆಗೆ ಶರಣು!
Rajasthan: ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನ ಪತನ; ಪೈಲಟ್ ಸೇರಿ ಇಬ್ಬರು ಸಾವು
ಚಿಕ್ಕಮ್ಮನ ಜತೆ ಸಂಬಂಧ: 24ರ ಯುವಕನನ್ನು ಅಪಹರಣ ಮಾಡಿ ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕರು
Gujarat Bridge Collapse: ಸೇತುವೆ ಕುಸಿದು ನದಿಗೆ ಉರುಳಿದ ವಾಹನಗಳು– ಕನಿಷ್ಠ 9 ಮಂದಿ ಸಾವು
Dharawad: ಕಾಂಗ್ರೆಸ್-ಬಿಜೆಪಿಯಿಂದ ಹಿಂದಿ ಹೇರಿಕೆ ತಡೆ ಅಸಾಧ್ಯ: ಪ್ರೊ.ಬಿಳಿಮಲೆ
ಆ ನಟಿ ʼಬಿಗ್ ಬಾಸ್ʼ ಮನೆಯಲ್ಲೇ ಆತ್ಮಹ*ತ್ಯೆಗೆ ಯತ್ನಿಸಿದ್ದರು- ಶಾಕಿಂಗ್ ಸಂಗತಿ ರಿವೀಲ್
Kejriwal: ಉತ್ತಮ ಆಡಳಿತಕ್ಕಾಗಿ ನನಗೆ ನೊಬೆಲ್ ಪ್ರಶಸ್ತಿ ಸಿಗಬೇಕು!: ಕೇಜ್ರಿವಾಲ್
Kalaburagi: ರಸ್ತೆ ಕಾಮಗಾರಿ ಬಿಲ್ ಮಾಡಲು ಕಮಿಷನ್ ಕೇಳಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್
Madenuru Manu: ಅತ್ಯಾಚಾ*ರ ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೊರೆ ಹೋದ ಮಡೆನೂರು ಮನು
You seem to have an Ad Blocker on.
To continue reading, please turn it off or whitelist Udayavani.