ಮಧ್ಯಪ್ರದೇಶದಲ್ಲೊಂದು ವಿಚಿತ್ರ ಘಟನೆ: ಪತ್ನಿ ದೂರವಾದಳೆಂದು ಅತ್ತೆಯ ಮೂಗನ್ನೇ ಕಚ್ಚಿದ ಅಳಿಯ
Team Udayavani, Mar 13, 2023, 5:36 PM IST
ಮಧ್ಯಪ್ರದೇಶ: ಪತ್ನಿ ತನ್ನಿಂದ ದೂರವಾದಳೆಂದು ತಲೆಕೆಡಿಸಿಕೊಂಡ ಪತಿ ಸಿಟ್ಟಲ್ಲಿ ಅತ್ತೆಯ ಮೂಗನ್ನೇ ಕಚ್ಚಿ ತುಂಡರಿಸಿದ ವಿಚಿತ್ರ ಘಟನೆಯೊಂದು ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಚಂಬಲ್ ಪ್ರದೇಶದಲ್ಲಿ ನಡೆದಿದೆ.
ಆರೋಪಿಯನ್ನು ರಿಂಕು ಭಾಗೇಲ್ ಎಂದು ಹೇಳಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಸಿಟಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಅಳಿಯ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮೊರೆನಾದ ಚಾಂದ್‌ಪುರ ಗ್ರಾಮದ ನಿವಾಸಿ ರಾಮ್ ವಿಲಾಸಿ(55 ವರ್ಷ) ಎಂಬ ಮಹಿಳೆಯೇ ಹಲ್ಲೆಗೊಳಗಾದವರು.
ಘಟನೆ ವಿವರ: ರಿಂಕು ಭಾಗೇಲ್ ಹಾಗೂ ಆತನ ಪತ್ನಿ ಶ್ಯಾಮ್ ಸುಂದರಿ ಕೆಲವು ವರ್ಷಗಳಿಂದ ಒಟ್ಟಿಗೆ ಸಂಸಾರ ನಡೆಸುತ್ತಿದ್ದರು, ಆದರೆ ರಿಂಕು ಭಾಗೇಲ್ ಗೆ ಕುಡಿತದ ಚಟ ಇದ್ದುದರಿಂದ ಸಂಸಾರದಲ್ಲಿ ಆಗಾಗ ಜಗಳಗಳು ನಡೆಯುತ್ತಿತ್ತು ಎನ್ನಲಾಗಿದೆ, ದಿನದಿಂದ ದಿನಕ್ಕೆ ಪತಿಯ ದೌರ್ಜನ್ಯ ಹೆಚ್ಚಾಗುತ್ತಿದ್ದಂತೆ ರೋಸಿ ಹೋದ ಪತ್ನಿ ಪತಿಯಿಂದ ದೂರ ಇರಲು ನಿರ್ದರಿಸಿದ್ದಾಳೆ, ಅದರಂತೆ ಪತ್ನಿ ಬೇರೆ ಮನೆಯಲ್ಲಿ ವಾಸಿಸಲು ಆರಂಭಿಸಿದ್ದಾಳೆ ಇದರಿಂದ ಪತಿ ಮಾನಸಿಕವಾಗಿ ಕುಗ್ಗಿದ್ದ ಎನ್ನಲಾಗಿದೆ ಅಷ್ಟು ಮಾತ್ರವಲ್ಲದೆ ತನ್ನ ಪತ್ನಿಗೆ ಅತ್ತೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಕೋಪಗೊಂಡಿದ್ದ,
ಕಳೆದ ಶುಕ್ರವಾರ ಅತ್ತೆ (ರಾಮ್ ವಿಲಾಸಿ) ಅವರು ತಮ್ಮ ಪತಿ ರಾಮೇತ್ ಬಾಘೆಲ್ ಜೊತೆ ಮಗಳನ್ನು ನೋಡಲು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಆರೋಪಿ ಅಳಿಯ ರಿಂಕು ಭಾಗೇಲ್ ಹಾಗೂ ಆತನ ತಂದೆ ರಮೇಶ್ ಭಾಗೇಲ್ ಇನ್ನೋರ್ವ ಗೆಳೆಯ ರಮೇಶ್ ಸೇರಿ ಬೈಕ್ ತಡೆದು ಅವ್ಯಾಚ್ಚ ಶಬ್ದಗಳಿಂದ ನಿಂದಿಸಿದ್ದಾನೆ ಅಷ್ಟು ಮಾತ್ರವಲ್ಲದೆ ಅತ್ತೆಯ ಮೇಲಿರುವ ಸಿಟ್ಟನ್ನು ಅತ್ತೆಯ ಮೂಗಿನ ಮೇಲೆ ತೋರಿಸಿದ್ದಾನೆ ಸಿಟ್ಟಿನಲ್ಲಿ ಅತ್ತೆಯ ಮೂಗನ್ನೇ ಕಚ್ಚಿ ಹಾಕಿದ್ದಾನೆ, ತಡೆಯಲು ಬಂದ ಮಾವನನ್ನು ತಳ್ಳಿ ಹಲ್ಲೆ ನಡೆಸಿದ್ದಾನೆ, ಘಟನೆಯಿಂದ ಗಂಭೀರ ಗಾಯಗೊಂಡ ಅತ್ತೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಮಾವ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಅಳಿಯ ಸೇರಿ ಮೂವರ ವಿರುದ್ಧ ದೂರು ನೀಡಿದ್ದಾರೆ.
ಇದನ್ನೂ ಓದಿ: ಮಡಗಾಸ್ಕರ್‌ನಲ್ಲಿ ವಲಸಿಗರ ಬೋಟ್ ಮುಳುಗಿ 22 ಮಂದಿ ಮೃತ್ಯು, ಹಲವರ ರಕ್ಷಣೆ, ಇಬ್ಬರು ನಾಪತ್ತೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ