
SSC ಪ್ರಶ್ನೆ ಪತ್ರಿಕೆ ಲೀಕ್!;ಇನ್ನೊಂದು ವ್ಯಾಪಂ ಸ್ಕ್ಯಾಮ್-ಕೈ
Team Udayavani, Mar 4, 2018, 11:53 AM IST

ಹೊಸದಿಲ್ಲಿ: 9,372 ಹುದ್ದೆಗಳಿಗಾಗಿ ನಡೆದ ಸ್ಟಾಫ್ ಸೆಲಕ್ಷನ್ ಕಮಿಷನ್(ಎಸ್‌ಎಸ್‌ಸಿ ) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿ ಸಾವಿರಾರು ಆಕಾಂಕ್ಷಿಗಳು ಪ್ರತಿಭಟನೆಗಿಳಿದಿದ್ದು, ದೆಹಲಿಯ ಲೋಧಿ ರಸ್ತೆಯಲ್ಲಿರುವ ಸಿಜಿಓ ಕಟ್ಟಡದ ಎದುರು ಭಾನುವಾರ ನಡೆದ ಪ್ರತಿಭಟನೆಯಲ್ಲಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಭಾಗಿಯಾಗಿ ಬೆಂಬಲ ಸೂಚಿಸಿದ್ದಾರೆ.
ಫೆಬ್ರವರಿ 17 ರಿಂದ 21 ರ ವರೆಗೆ ನಡೆದ ಪರೀಕ್ಷೆಯ ವೇಳೆ ಪ್ರಶ್ನೆ ಪತ್ರಿಕೆ ಬಯಲಾಗಿರುವುದು ಬೆಳಕಿಗೆ ಬಂದಿತ್ತು. ಇದರ ವಿರುದ್ಧ ನೂರಾರು ಪರೀಕ್ಷಾರ್ಥಿಗಳು ಫೆಬ್ರವರಿ 27 ರಿಂದ ಪ್ರತಿಭಟನೆ ನಡೆಸುತ್ತಿದ್ದು ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ.
ಹಗರಣಕ್ಕೆ ಸಂಬಂಧಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಇದು ಇನ್ನೊಂದು ವ್ಯಾಪಂ ಹಗರಣ ಎಂದಿದೆ.
ಟಾಪ್ ನ್ಯೂಸ್
