
ಬಹುಪತ್ನಿತ್ವ, ನಿಕಾಹ್ ಹಲಾಲಾ ಪದ್ಧತಿ : ಹೊಸ ಪೀಠ ರಚನೆ
Team Udayavani, Jan 21, 2023, 1:05 AM IST

ಹೊಸದಿಲ್ಲಿ: ಮುಸ್ಲಿಂರಲ್ಲಿನ ಬಹುಪತ್ನಿತ್ವ, ನಿಕಾಹ್ ಹಲಾಲಾ ಪದ್ಧತಿ ಕುರಿತ ಪರಿಶೀಲನೆ ರಚಿಸಲಾಗಿರುವ ಸಂವಿಧಾನ ಪೀಠವನ್ನು ಪುನರ್ ರಚಿಸಲಾಗುವುದು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದ್ದಾರೆ.
ಗುರುವಾರ ಅರ್ಜಿದಾರ ವಕೀಲ ಅಶ್ವಿನಿ ಉಪಾಧ್ಯಾಯ ಅವರು ಈ ಹಿಂದೆ ರಚಿಸಲಾಗಿದ್ದ ಸಂವಿಧಾನ ಪೀಠದಲ್ಲಿದ್ದ ನ್ಯಾ| ಇಂದಿರಾ ಬ್ಯಾನರ್ಜಿ ಮತ್ತು ನ್ಯಾ| ಹೇಮಂತ್ ಗುಪ್ತಾ ಅವರು ನಿವೃತ್ತಿಯಾಗಿದ್ದಾರೆ. ಹೀಗಾಗಿ ಹೊಸದಾಗಿ ಪೀಠವನ್ನು ರಚಿಸಬೇಕಾಗಿದೆ ಎಂದರು.
ಇದನ್ನು ಗಮನಿಸಿದ ಸಿಜೆಐ ಡಿ.ವೈ.ಚಂದ್ರಚೂಡ್ ಮತ್ತು ನ್ಯಾ| ಪಿ.ಎಸ್. ನರಸಿಂಹ ಅವರು ಹೊಸದಾಗಿ ಪೀಠ ರಚಿಸುವುದಾಗಿ ಹೇಳಿದರು.
ಟಾಪ್ ನ್ಯೂಸ್
