ದ್ವೇಷ ಭಾಷಣ ಕಾರ್ಯಕ್ರಮದಲ್ಲಿ ಭಾಗಿಯಾಗುವವರನ್ನು ಬಂಧಿಸಬೇಕು;: ಸುಪ್ರೀಂಗೆ ಸಿಬಲ್ ಮನವಿ
ಉತ್ತರಖಂಡ ಸರಕಾರಕ್ಕೆ ಎಸ್‌ಸಿ ನೋಟಿಸ್
Team Udayavani, Jan 12, 2022, 2:39 PM IST
ನವದೆಹಲಿ:ಚುನಾವಣೆಯ ಹೊಸ್ತಿಲಲ್ಲಿರುವ ರಾಜ್ಯಗಳಲ್ಲಿ ದ್ವೇಷ ಭಾಷಣ ಮಾಡುವವರನ್ನು ವಶಕ್ಕೆ ತೆಗೆದುಕೊಳ್ಳಬೇಕು ಅಥವಾ ಬಂಧಿಸಬೇಕು ಎಂದು ಹಿರಿಯ ನ್ಯಾಯವಾದಿ ಹಾಗೂ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಸುಪ್ರೀಂಕೋರ್ಟ್ ಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು : ಸಾಮೂಹಿಕ ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ
ಉತ್ತರಾಖಂಡದಲ್ಲಿ ನಡೆದ ಧರ್ಮಸಂಸತ್ ಸಭೆಯಲ್ಲಿ ವ್ಯಕ್ತವಾದ ದ್ವೇಷಭಾಷಣ ಪ್ರಕರಣ ಸಂಬಂಧ ಅರ್ಜಿದಾರರ ಪರವಾಗಿ ಸುಪ್ರೀಂಕೋರ್ಟ್ ನಲ್ಲಿ ವಾದ ಮಂಡಿಸಿದ ಅವರು ಈ ಮನವಿ ಮಾಡಿದ್ದಾರೆ.
ಉತ್ತರ ಪ್ರದೇಶ ಸೇರಿದಂತೆ ಚುನಾವಣೆ ನಡೆಯುವ ರಾಜ್ಯಗಳಲ್ಲಿ ಇಂಥ ಧರ್ಮ ಸಂಸದ್ ಸಮಾವೇಶ ಇನ್ನಷ್ಟು ನಡೆಯಬಹದು. ಶಾಂತಿ-ಸೌಹಾರ್ದತೆಗೆ ಧಕ್ಕೆ ತರುವಂಥ ಅಭಿವ್ಯಕ್ತಿಗಳಿಗೆ ಇದು ವೇದಿಕೆಯಾಗಬಹುದು. ಹೀಗಾಗಿ ದ್ವೇಷ ಭಾಷಣ ಮಾಡುವವರನ್ನು ಬಂಧಿಸಬೇಕು ಅಥವಾ ಪೊಲೀಸರು ವಶಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಮಧ್ಯೆ ಉತ್ತರಾಖಂಡ ಸರಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಆದರೆ ಮುಂಬರುವ ಕಾರ್ಯಕ್ರಮಗಳಿಗೆ ತಡೆ ನೀಡುವ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಇನ್ನು ಮುಂದೆ ಅಮೃತಸರದ ಸ್ವರ್ಣಮಂದಿರದಲ್ಲಿ ಹಾರ್ಮೋನಿಯಂ ಬ್ಯಾನ್
ಕೇದಾರ ಯಾತ್ರೆ ಸ್ಥಗಿತ; ಉತ್ತರಾಖಂಡದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ
ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿ ವಿನಯ್ ಕುಮಾರ್ ಸಕ್ಸೇನಾ ನೇಮಕ
ಶ್ರೀರಂಗಪಟ್ಟಣ : ಸರ್ವೆ ಇಲಾಖೆ ಕಚೇರಿಯಲ್ಲಿ ಅಧಿಕಾರಿಗಳ ಗೈರು : ರೈತರಿಂದ ಕಚೇರಿಗೆ ಮುತ್ತಿಗೆ
ಮೊದಲ ಬಾರಿ ರಸ್ತೆ ಮೇಲೆ ನಮಾಜ್ ನಡೆದಿಲ್ಲ: ಯೋಗಿ ಆದಿತ್ಯನಾಥ