ಶಾಸಕರು, ಸಂಸದರ ವಿರುದ್ಧದ ತನಿಖೆಯಲ್ಲಿ ವಿಳಂಬವೇಕೆ?
Team Udayavani, Aug 26, 2021, 7:30 AM IST
ಹೊಸದಿಲ್ಲಿ: ಶಾಸಕರು, ಸಂಸದರ ವಿರುದ್ಧ ಇರುವ ಪ್ರಕರಣಗಳ ತನಿಖೆಯಲ್ಲಿ ವಿಳಂಬ ಏಕೆ ಎಂದು ಸುಪ್ರೀಂ ಕೋರ್ಟ್ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇ.ಡಿ.)ಕ್ಕೆ ಬುಧವಾರ ಕಟುವಾಗಿ ಪ್ರಶ್ನೆ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಎನ್. ವಿ.ರಮಣ, ನ್ಯಾ| ಡಿ.ವೈ.ಚಂದ್ರಚೂಡ್, ನ್ಯಾ| ಸೂರ್ಯಕಾಂತ್ ಕೆಲವೊಂದು ಪ್ರಕರಣ ಗಳಲ್ಲಿ 10-15 ವರ್ಷಗಳಿಂದ ಹೆಚ್ಚಿನ ಪ್ರಗತಿ ಯಾಗಿಲ್ಲ ಎಂದು ಕಟುವಾಗಿ ಆಕ್ಷೇಪ ಮಾಡಿತು. ಜಾರಿ ನಿರ್ದೇಶನಾಲಯ ಕೇವಲ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಲ್ಲಿ ಮಾತ್ರ ಆಸಕ್ತಿ ವಹಿಸಿದೆಯೇ ಹೊರತು ಪ್ರಕರಣಗಳ ತನಿಖೆಯಲ್ಲಿ ಪ್ರಗತಿಯೇ ಇಲ್ಲ ಎಂದು ಟೀಕಿಸಿತು.”ನೀವು ತನಿಖೆ ನಡೆಸುತ್ತಿರುವ ಕೇಸುಗಳಲ್ಲಿ ತಪ್ಪಿತಸ್ಥರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿ. ಅವುಗಳನ್ನು ಅತಂತ್ರದಲ್ಲಿ ಇಡಬೇಡಿ’ ಎಂದು ಸಿಜೆಐ, ಇ.ಡಿ.ಗೆ ಸೂಚಿಸಿದರು.
ಇದೇ ವೇಳೆ, ಶಾಸಕರು ಮತ್ತು ಸಂಸದರ ವಿರುದ್ಧ ಉದ್ದೇಶಪೂರ್ವಕ ದಾಖಲಿ ಸಿದ್ದ ಕೇಸುಗಳನ್ನು ವಾಪಸ್ ಪಡೆಯಲು ಆಕ್ಷೇಪ ಇಲ್ಲ. ಆದರೆ, ಆಯಾ ರಾಜ್ಯಗಳ ಹೈಕೋರ್ಟ್‌ಗಳು ಪ್ರಕರಣವನ್ನು ಅಮೂಲಾಗ್ರವಾಗಿ ಪರಿಶೀಲನೆ ನಡೆಸಬೇಕು ಎಂದು ನ್ಯಾಯಪೀಠ ಹೇಳಿತು.