Civic Body: ಹತ್ತು ಮಂದಿ ಟ್ರೈನಿ ಯುವತಿಯರನ್ನು ನಗ್ನಗೊಳಿಸಿ ಪರೀಕ್ಷೆ ನಡೆಸಿದ ವೈದ್ಯರು!

ಅವಿವಾಹಿತರನ್ನೂ ಕೂಡಾ ಮಹಿಳಾ ವೈದ್ಯರುಗಳು ಗರ್ಭಿಣಿಯಾಗಿದ್ದಾರೋ ಇಲ್ಲವೋ ಎಂದು ಪರೀಕ್ಷಿಸಿದ್ದರು.

Team Udayavani, Feb 21, 2020, 6:13 PM IST

Gynocologist

ಅಹಮದಾಬಾದ್: ಋತುಮತಿ ಆಗಿದ್ದಾರೋ ಅಂತ ಪರೀಕ್ಷಿಸಲು ವಿದ್ಯಾರ್ಥಿನಿಯರ ಒಳ ಉಡುಪು ತೆಗೆಸಿ ಪರೀಕ್ಷಿಸಿದ ಘಟನೆ ನಡೆದ ಬೆನ್ನಲ್ಲೇ ಈಗ ಸೂರತ್ ಮಹಾನಗರ ಪಾಲಿಕೆಯ(ಎಸ್ ಎಂಸಿ) ತರಬೇತಿಯಲ್ಲಿರುವ ಮಹಿಳಾ ಕ್ಲರ್ಕ್ ಗಳನ್ನು ಆಸ್ಪತ್ರೆಯಲ್ಲಿ ನಗ್ನಗೊಳಿಸಿ ಮೆಡಿಕಲ್ ಟೆಸ್ಟ್ ನಡೆಸಿದ ಘಟನೆ ಗುಜರಾತ್ ನಲ್ಲಿ ನಡೆದಿದೆ.

ಸೂರತ್ ನಲ್ಲಿ ಮಹಾನಗರ ಪಾಲಿಕೆಗೆ ಒಳಪಟ್ಟ ಆಸ್ಪತ್ರೆಯ ಸ್ತ್ರೀರೋಗ ತಪಾಸಣಾ ವಾರ್ಡ್ ನಲ್ಲಿ ಹತ್ತು ಮಂದಿ ಮಹಿಳಾ ಕ್ಲರ್ಕ್ ಗಳನ್ನು ನಗ್ನಗೊಳಿಸಿ ನಿಲ್ಲಿಸಿ ಪರೀಕ್ಷೆ ನಡೆಸಿರುವ ಪ್ರಕರಣದ ಬಗ್ಗೆ ಮುನ್ಸಿಪಲ್ ಕಮಿಷನರ್ ಬಾನ್ಛಾನಿಧಿ ಪಾನಿ ಆದೇಶ ಹೊರಡಿಸಿದ್ದಾರೆ ಎಂದು ವರದಿ ತಿಳಿಸಿದೆ.

ಅವಿವಾಹಿತರನ್ನೂ ಕೂಡಾ ಮಹಿಳಾ ವೈದ್ಯರುಗಳು ಗರ್ಭಿಣಿಯಾಗಿದ್ದಾರೋ ಇಲ್ಲವೋ ಎಂದು ಪರೀಕ್ಷಿಸಿರುವುದಾಗಿ ಎಸ್ ಎಂಸಿ ಉದ್ಯೋಗಿಗಳ ಒಕ್ಕೂಟ ಕಮೀಷನರ್ ಗೆ ನೀಡಿರುವ ದೂರಿನಲ್ಲಿ ತಿಳಿಸಿದೆ.

ಸೂರತ್ ಮುನ್ಸಿಪಲ್ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಅಂಡ್ ರಿಸರ್ಚ್ ಆಸ್ಪತ್ರೆಯಲ್ಲಿ ಫೆ.20ರಂದು ಈ ಘಟನೆ ನಡೆದಿದೆ. ದೂರಿನ ಆಧಾರದ ಮೇಲೆ ಕಮಿಷನರ್ ಮೂವರು ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿ, ತನಿಖೆ ನಡೆಸುವಂತೆ ಆದೇಶ ನೀಡಿದ್ದಾರೆ. ಅಲ್ಲದೇ 15 ದಿನದೊಳಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.

ಮೆಡಿಕಲ್ ಕಾಲೇಜಿನ ಮಾಜಿ ಡೀನ್ ಡಾ.ಕಲ್ಪನಾ ದೇಸಾಯಿ, ಮುನ್ಸಿಪಲ್ ಸಹಾಯಕ ಕಮಿಷನರ್ ಗಾಯತ್ರಿ ಜಾರಿವಾಲಾ ಮತ್ತು ಎಕ್ಸಿಕ್ಯೂಟಿವ್ ತೃಪ್ತಿ ಕಾಲಾಥಿಯಾ ಅವರನ್ನೊಳಗೊಂಡ ಸಮಿತಿ ರಚಿಸಿದ್ದಾರೆ.

ಕಾನೂನು ಪ್ರಕಾರ, ಎಲ್ಲಾ ಟ್ರೈನಿ ಉದ್ಯೋಗಿಗಳು ದೈಹಿಕ ಪರೀಕ್ಷೆಗೆ ಒಳಪಡಬೇಕು. ಅವರು ತರಬೇತಿ ಸಮಯದಲ್ಲಿ ದೈಹಿಕವಾಗಿ ಆರೋಗ್ಯವಂತರಾಗಿದ್ದರೆ ಎಂಬುದನ್ನು ಪರೀಕ್ಷಿಸುತ್ತಾರೆ. ಮೂರು ವರ್ಷಗಳ ತರಬೇತಿ ಮುಕ್ತಾಯಗೊಂಡ ನಂತರ ಕೆಲವು ಮಹಿಳಾ ಟ್ರೈನಿ ಕ್ಲರ್ಕ್ ಗಳು ಆಸ್ಪತ್ರೆಗೆ ಮೆಡಿಕಲ್ ಟೆಸ್ಟ್ ಗೆ ಬರುವುದು ಕಡ್ಡಾಯ ಎಂದು ಅಧಿಕಾರಿ ತಿಳಿಸಿದ್ದಾರೆ.

ಕಡ್ಡಾಯ ಪರೀಕ್ಷೆಗೆ ನಮ್ಮ ವಿರೋಧವಿಲ್ಲ. ಆದರೆ ಮಹಿಳಾ ಸಿಬ್ಬಂದಿಗಳನ್ನು ಸ್ತ್ರೀರೋಗ ಪರೀಕ್ಷಾ ಕೊಠಡಿಯಲ್ಲಿ ನಡೆಸಿಕೊಂಡ ರೀತಿ ಸರಿಯಲ್ಲ. ಒಬ್ಬರ ನಂತರ ಒಬ್ಬರನ್ನು ಪರೀಕ್ಷಿಸಲಿ. ಇಲ್ಲಿ ಎಲ್ಲಾ ಹತ್ತು ಮಂದಿ ಯುವತಿಯರನ್ನು ಒಟ್ಟಿಗೆ ನಗ್ನಗೊಳಿಸಿ ನಿಲ್ಲಿಸಿ ಪರೀಕ್ಷೆ ನಡೆಸಿದ್ದು ತಪ್ಪು ಎಂದು ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿದೆ ಎಂದು ವರದಿ ತಿಳಿಸಿದೆ.

ಟಾಪ್ ನ್ಯೂಸ್

ಸಿದ್ರಾಮುಲ್ಲಾ ಖಾನ್‌ ಹೆಸರಿಟ್ಟಿದ್ದು ಕೊಡಗು-ಮೈಸೂರು ಜನ: ಸಿ.ಟಿ.ರವಿ

ಸಿದ್ರಾಮುಲ್ಲಾ ಖಾನ್‌ ಹೆಸರಿಟ್ಟಿದ್ದು ಕೊಡಗು-ಮೈಸೂರು ಜನ: ಸಿ.ಟಿ.ರವಿ

tdy-19

2023ರ ದ್ವಿತೀಯ ಪಿಯು ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟ

ತೆಕ್ಕಟ್ಟೆ: ರಸ್ತೆ ಬದಿಯ ಹೊಂಡಕ್ಕೆ ಬಿದ್ದ ಈಚರ್‌ ವಾಹನ; ತಪ್ಪಿದ ಭಾರೀ ಅನಾಹುತ

ತೆಕ್ಕಟ್ಟೆ: ರಸ್ತೆ ಬದಿಯ ಹೊಂಡಕ್ಕೆ ಬಿದ್ದ ಈಚರ್‌ ವಾಹನ; ತಪ್ಪಿದ ಭಾರೀ ಅನಾಹುತ

1-daadad

ಸಿನಿಮಾ ರಂಗದಿಂದಲೇ ನಾನು ಚಿರಂಜೀವಿ: ಇಫಿಯಲ್ಲಿ ಚಿರಂಜೀವಿ ಭಾವುಕ

ಮದರಸಾ ವಿದ್ಯಾರ್ಥಿಗಳಿಗೆ ಇನ್ನು ಸ್ಕಾಲರ್‌ಶಿಪ್‌ ಇಲ್ಲ

ಮದರಸಾ ವಿದ್ಯಾರ್ಥಿಗಳಿಗೆ ಇನ್ನು ಸ್ಕಾಲರ್‌ಶಿಪ್‌ ಇಲ್ಲ

1-aSASA

ಡಬ್ಬಲ್ ಇಂಜಿನ್ ಸರಕಾರವಿದ್ದರೂ ಶರಾವತಿ ಸಂತ್ರಸ್ತರಿಗೆ ನ್ಯಾಯವಿಲ್ಲ: ಸಿದ್ದರಾಮಯ್ಯ ಕಿಡಿ

Satish Jaraki

ಕಾಂಗ್ರೆಸ್ ಸರ್ಕಾರದಲ್ಲೇ ಹೆಚ್ಚು ಹಿಂದೂಗಳ ರಕ್ಷಣೆ: ಸತೀಶ್ ಜಾರಕಿಹೊಳಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮದರಸಾ ವಿದ್ಯಾರ್ಥಿಗಳಿಗೆ ಇನ್ನು ಸ್ಕಾಲರ್‌ಶಿಪ್‌ ಇಲ್ಲ

ಮದರಸಾ ವಿದ್ಯಾರ್ಥಿಗಳಿಗೆ ಇನ್ನು ಸ್ಕಾಲರ್‌ಶಿಪ್‌ ಇಲ್ಲ

ಮಾರಾಮಾರಿ: ತೆಲಂಗಾಣದಲ್ಲಿ  ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಸಹೋದರಿ ಬಂಧನ

ಮಾರಾಮಾರಿ: ತೆಲಂಗಾಣದಲ್ಲಿ  ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಸಹೋದರಿ ಬಂಧನ

ʼಪುಷ್ಪʼ ಸಿನಿಮಾದಿಂದ ಪ್ರೇರಣೆ:  ವಾಹನದ ಟಾಪ್‌ ನಲ್ಲಿ ಗಾಂಜಾಯಿಟ್ಟು ಸಾಗಾಟಕ್ಕೆ ಯತ್ನ: ಬಂಧನ

ʼಪುಷ್ಪʼ ಸಿನಿಮಾ ಪ್ರೇರಣೆ: ವಾಹನದ ಟಾಪ್‌ ನಲ್ಲಿ ಗಾಂಜಾ ಸಾಗಾಟಕ್ಕೆ ಯತ್ನ: ಬಂಧನ

theft case uttar pradesh

20 ಸೆಕೆಂಡುಗಳಲ್ಲಿ 10 ಲಕ್ಷ ಮೌಲ್ಯದ ಚಿನ್ನದ ಸರ ಕದ್ದ ವೃದ್ಧೆ: ವೀಡಿಯೋ ವೈರಲ್

1-sdadad

ಒಡೆಯಲು ಬಯಸುವವರಿಗೆ ಬೆಂಬಲಿಸಲು ಗುಜರಾತ್‌ನ ಜನರು ಸಿದ್ಧರಿಲ್ಲ: ಪ್ರಧಾನಿ ಮೋದಿ

MUST WATCH

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

udayavani youtube

ಶಾರಿಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ವೈರಲ್ ಆಗುತ್ತಿದೆ ಸಿಸಿಟಿವಿ ಫೂಟೇಜ್…

ಹೊಸ ಸೇರ್ಪಡೆ

ಸಿದ್ರಾಮುಲ್ಲಾ ಖಾನ್‌ ಹೆಸರಿಟ್ಟಿದ್ದು ಕೊಡಗು-ಮೈಸೂರು ಜನ: ಸಿ.ಟಿ.ರವಿ

ಸಿದ್ರಾಮುಲ್ಲಾ ಖಾನ್‌ ಹೆಸರಿಟ್ಟಿದ್ದು ಕೊಡಗು-ಮೈಸೂರು ಜನ: ಸಿ.ಟಿ.ರವಿ

ಮಲ್ಪೆ: ವಿದ್ಯುತ್‌ ಪ್ರವಹಿಸಿ ಬೋಟ್‌ ಕಾರ್ಮಿಕ ಸಾವು

ಮಲ್ಪೆ: ವಿದ್ಯುತ್‌ ಪ್ರವಹಿಸಿ ಬೋಟ್‌ ಕಾರ್ಮಿಕ ಸಾವು

1-ADDSDASD

ಹಾರನ್ ಹೊಡೆದ ಎಂಬ ಕ್ಷುಲ್ಲಕ ಕಾರಣಕ್ಕೆ ಮನಸೋ ಇಚ್ಛೆ ಚಾಕು ಇರಿತ

tdy-19

2023ರ ದ್ವಿತೀಯ ಪಿಯು ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಪ್ರಕಟ

ತೆಕ್ಕಟ್ಟೆ: ರಸ್ತೆ ಬದಿಯ ಹೊಂಡಕ್ಕೆ ಬಿದ್ದ ಈಚರ್‌ ವಾಹನ; ತಪ್ಪಿದ ಭಾರೀ ಅನಾಹುತ

ತೆಕ್ಕಟ್ಟೆ: ರಸ್ತೆ ಬದಿಯ ಹೊಂಡಕ್ಕೆ ಬಿದ್ದ ಈಚರ್‌ ವಾಹನ; ತಪ್ಪಿದ ಭಾರೀ ಅನಾಹುತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.