ಹಿಂದಿ ಹೇರುವ ಅಗತ್ಯವಿಲ್ಲ ; ಬೆಂಕಿ ಹಚ್ಚಿಕೊಂಡು ಡಿಎಂಕೆ ಕಾರ್ಯಕರ್ತ ಆತ್ಮಹತ್ಯೆ
ತಮಿಳು ಇರುವಾಗ ಹಿಂದಿ ಬೇಡ ಎಂದು ಬರೆದಿಟ್ಟ 85 ವರ್ಷದ ತಂಗವೇಲು!
Team Udayavani, Nov 26, 2022, 10:24 PM IST
ಕೊಯಮತ್ತೂರು: ಸೇಲಂ ಜಿಲ್ಲೆಯ ಮೆಟ್ಟೂರು ಬಳಿಯ ತಝೈಯೂರ್‌ನಲ್ಲಿರುವ ಡಿಎಂಕೆ ಕಚೇರಿ ಬಳಿ ಪಕ್ಷದ ಹಿರಿಯ ಕಾರ್ಯಕರ್ತರೊಬ್ಬರು ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
‘ಹಿಂದಿ ಹೇರಿಕೆ’ ವಿರುದ್ಧ ತಮ್ಮ ಪ್ರತಿಭಟನೆಯನ್ನು ತೋರಿಸಲು ಅವರು ಕಠಿಣ ಹೆಜ್ಜೆ ಇಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಎಂಕೆ ರೈತ ವಿಭಾಗದ ಮಾಜಿ ಪದಾಧಿಕಾರಿ ತಂಗವೇಲ್ (85) ಇಂದು ಬೆಳಗ್ಗೆ ಪಕ್ಷದ ಕಚೇರಿಗೆ ಆಗಮಿಸಿದ್ದರು. ‘ಹಿಂದಿ ಹೇರಿಕೆ’ ವಿರುದ್ಧ ಘೋಷಣೆ ಕೂಗಿ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡಿದ್ದಾರೆ.
ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಅವರನ್ನು ರಕ್ಷಿಸಲು ಯತ್ನಿಸಿದರಾದರೂ ತಂಗವೇಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದರು.
ತಮಿಳು ಭಾಷೆ ಇರುವಾಗ ಹಿಂದಿ ಹೇರುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರವನ್ನು ಉದ್ದೇಶಿಸಿ ಬರೆದ ಕಾಗದವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
56,332 ರೂ ಬೆಲೆಯ ಶಾಲು ಧರಿಸಿದ ಮಲ್ಲಿಕಾರ್ಜುನ ಖರ್ಗೆ; ಬಿಜೆಪಿ ಟೀಕೆ
263 ಕೋಟಿ ರೂ ಅಕ್ರಮ; ಮಾಜಿ ತೆರಿಗೆ ಅಧಿಕಾರಿ, ನಟಿ ಕೃತಿ ವರ್ಮಾ ವಿಚಾರಣೆ
ಚಂದ್ರಯಾನ-3 ಇಳಿದಾಣಗಳ ಗುರುತು ಪೂರ್ಣ; ವರ್ಷಾಂತ್ಯಕ್ಕೆ ಉಡಾವಣೆ ಸಾಧ್ಯತೆ
ಕೇರಳದಿಂದ ಪರಾರಿಯಾಗಿರುವ ಎಂಟು ಮಂದಿ ದಶಕಗಳು ಕಳೆದರೂ ಪತ್ತೆಯಿಲ್ಲ!
ಮಗುವಿನ ಜತೆಗೆ ಬಾಡಿಗೆ ತಾಯಿ ಬಾಂಧವ್ಯ ಹೊಂದಿರಬೇಕಾಗಿಲ್ಲ: ಕೇಂದ್ರ