
Tragic: ಆಡುವ ವೇಳೆ ಕುತ್ತಿಗೆಗೆ ಹಗ್ಗಕಟ್ಟಿ ತಮಾಷೆ; ಸ್ಟೂಲ್ ಜಾರಿ 13ರ ಬಾಲಕ ಮೃತ್ಯು
ಪ್ರಾಣ ಉಳಿಸಲು ಪರದಾಡಿದ ಕಣ್ಣು ಕಾಣದ ತಾಯಿ
Team Udayavani, Sep 19, 2023, 5:59 PM IST

ಲಕ್ನೋ: ಆಟವಾಡುವ ವೇಳೆ ತಮಾಷೆ ಮಾಡಲು ಹೋಗಿ ಬಾಲಕನೊಬ್ಬ ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಜಲೌನ್ ನ ಕಾನ್ಶಿರಾಮ್ ಕಾಲೋನಿ ಭಾನುವಾರ(ಸೆ.17 ರಂದು) ಈ ಘಟನೆ ನಡೆದಿದ್ದು, ಜಯೇಶ್ (13) ಎನ್ನುವ ಬಾಲಕ ಮೃತಪಟ್ಟಿದ್ದಾನೆ.
ಜಯೇಶ್ ಮನೆಯಲ್ಲಿ ತಂಗಿಯರಾದ ಮಹಾಕ್ ಮತ್ತು ಆಸ್ತಾ ಅವರೊಂದಿಗೆ ಆಟ ಆಡುತ್ತಿದ್ದರು. ಈ ವೇಳೆ ತಮಾಷೆಗೆಂದು ಕಣ್ಣಿಗೆ ಬಟ್ಟೆಯ ತುಂಡನ್ನು ಕಟ್ಟಿಕೊಂಡು, ಕುತ್ತಿಗೆಗೆ ಹಗ್ಗವನ್ನು ಹಾಕಿ ಸ್ಟೂಲ್ ವೊಂದರ ಮೇಲೆ ನಿಂತುಕೊಂಡಿದ್ದಾರೆ. ಹಗ್ಗವನ್ನು ಕಿಟಕಿಗೆ ಕಟ್ಟಲಾಗಿತ್ತು. ಆದರೆ ಈ ವೇಳೆ ಆಕಸ್ಮಿಕವಾಗಿ ಸ್ಟೂಲ್ ತಳ್ಳಿದ ಪರಿಣಾಮ ಹಗ್ಗ ಜಯೇಶ್ ಅವರ ಕುತ್ತಿಗೆಗೆ ಬಿಗಿಯಾಗಿದೆ. ಮೊದಲು ತಂಗಿಯರು ನೋಡಿ ಅಣ್ಣ ತಮಾಷೆ ಮಾಡಲು ಒದ್ದಾಡುತ್ತಿದ್ದಾನೆ ಅಂದುಕೊಂಡಿದ್ದಾರೆ. ಆದರೆ ಕೆಲವೇ ನಿಮಿಷಗಳಲ್ಲಿ ಆತನ ಬಾಯಿಯಿಂದ ರಕ್ತ ಬಂದಿದೆ. ಈ ವೇಳೆ ಸಹೋದರಿಯರು ಜೋರಾಗಿ ಕಿರುಚಾಡಿ ತಾಯಿಗೆ ವಿಚಾರ ಮುಟ್ಟಿಸಿದ್ದಾರೆ.
ಕಣ್ಣು ಕಾಣದ ತಾಯಿ.. ಬಾಲಕ ಜಯೇಶ್ ಅವರ ತಾಯಿ ಸಂಗೀತ ಅವರು ಬಾಲ್ಯದಿಂದಲೇ ಅಂಧರಾಗಿದ್ದಾರೆ. ಘಟನೆ ನಡೆಯುವ ವೇಳೆ ಅವರು ಮಲಗಿದ್ದರು. ಜಯೇಶ್ ಅವರ ತಂದೆ ಕೆಲಸಕ್ಕೆ ಹೋಗಿದ್ದರು. ಮಗನ ಕುತ್ತಿಗೆಗೆ ಹಗ್ಗ ಸಿಕ್ಕಿ ಹಾಕಿಕೊಂಡಿದೆ. ಇದನ್ನು ಬಿಡಿಸಬೇಕೆಂದು ಕಣ್ಣು ಕಾಣದ ತಾಯಿ ಮನೆ ಎಲ್ಲೆಡೆ ಚೂರಿಯನ್ನು ಹುಡುಕಲು ನೋಡಿದ್ದಾರೆ. ಆದರೆ ಅವರು ಏನು ಮಾಡಲಾಗಿಲ್ಲ. ಮಗ ಜಯೇಶ್ ಉಸಿರುಗಟ್ಟಿ ಮೃತಪಟ್ಟಿದ್ದಾನೆ.
ನನಗೆ ಕಣ್ಣು ಕಾಣುತ್ತಿದ್ದರೆ, ನನ್ನ ಮಗ ಸಾಯುತ್ತಿರಲಿಲ್ಲ. ನನ್ನ ಮುಂದೆ ಮಗನಿಗೆ ಹೀಗೆ ಆಯಿತೆಂದು ತಾಯಿ ಆಳುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Indian Army ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುವುದು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

Delhi; 40 ಕೋಟಿ ರೂ. ಮೌಲ್ಯದ ಅಫೀಮು ಸಹಿತ ಮೂವರ ಬಂಧನ

Asian Games; ಅರುಣಾಚಲ ಪ್ರದೇಶದ ಆಟಗಾರರಿಗೆ ಪ್ರವೇಶ ನಿರಾಕರಿಸಿ ಚೀನಾ: ಭಾರತದ ತೀವ್ರ ವಿರೋಧ

NDA ಗೆ ಜೆಡಿಎಸ್ ಪಕ್ಷವನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದ ಶಾ, ನಡ್ಡಾ

J&K; ಗೃಹಬಂಧನದಿಂದ ಬಿಡುಗಡೆ: ಕಣ್ಣೀರಿಟ್ಟ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಮಿರ್ವೈಜ್
MUST WATCH
ಹೊಸ ಸೇರ್ಪಡೆ

Reliance Jio: ಐಫೋನ್ 15 ಖರೀದಿಸಿದರೆ ಆರು ತಿಂಗಳು ಫ್ರೀ ಪ್ಲಾನ್

BJP Ticket ವಂಚನೆ ; ಗದಗದಲ್ಲೂ ಅಭಿನವ ಹಾಲಶ್ರೀಯಿಂದ 1 ಕೋಟಿ ರೂ. ನಾಮ!

Chikodi; ಪಟಾಕಿ ಸಿಡಿಸುವ ವೇಳೆ ಯುವಕನ ಕೈ ನುಜ್ಜು ಗುಜ್ಜು

JDS ಎನ್ ಡಿಎ ಮೈತ್ರಿಕೂಟ ಸೇರ್ಪಡೆಯಿಂದ ಎರಡೂ ಪಕ್ಷಗಳಿಗೂ ಶಕ್ತಿ: ಜಿಟಿಡಿ

Indian Army ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುವುದು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್