ಹುತಾತ್ಮ ಯೋಧರ ಮಕ್ಕಳನ್ನು ದತ್ತು ಪಡೆದ ಬಿಹಾರ ಡಿ.ಸಿ.


Team Udayavani, Feb 18, 2019, 11:37 AM IST

inayat-khan-700.jpg

ಪಟ್ನಾ: ಪುಲ್ವಾಮದಲ್ಲಿ ನಡೆದ ಉಗ್ರ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರಲ್ಲಿ ಬಿಹಾರ ರಾಜ್ಯದ ಇಬ್ಬರು ಸಿ.ಆರ್.ಪಿ.ಎಫ್. ಯೋಧರೂ ಸೇರಿದ್ದಾರೆ. ರತನ್ ಕುಮಾರ್ ಠಾಕೂರ್ ಮತ್ತು ಸಂಜಯ್ ಕುಮಾರ್ ಸಿನ್ಹಾ ಎಂಬ ಈ ಇಬ್ಬರು ಬಿಹಾರದ ಯೋಧರು ಈ ಉಗ್ರ ದಾಳಿಯಲ್ಲಿ ಹುತಾತ್ಮರಾಗಿದ್ದರು. ಈ ಯೋಧರಿಬ್ಬರನ್ನು ಕಳೆದುಕೊಂಡ ಅವರ ಕುಟುಂಬ ಅನಾಥವಾಗಿದೆ.

ಸಂತೋಷದ ವಿಚಾರವೆಂದರೆ, ಬಿಹಾರದ ಶೇಖ್ ಪುರದ ಜಿಲ್ಲಾಧಿಕಾರಿ ಇನಾಯತ್ ಖಾನ್ ಅವರು ಈ ಇಬ್ಬರು ಹುತಾತ್ಮ ಯೋಧರ ಮಕ್ಕಳನ್ನು ದತ್ತು ಪಡೆದುಕೊಳ್ಳಲು ತೀರ್ಮಾನಿಸಿದ್ದಾರೆ. ಇನಾಯತ್ ಖಾನ್ ಅವರು ಕ್ರಮವಾಗಿ ಹುತಾತ್ಮ ಯೋಧ ರತನ್ ಕುಮಾರ್ ಮತ್ತು ಸಂಜಯ್ ಕುಮಾರ್ ಸಿನ್ಹಾ ಅವರ ಇಬ್ಬರು ಹೆಣ್ಣು ಮಕ್ಕಳ ಶಿಕ್ಷಣ ಸಹಿತ ಭವಿಷ್ಯದಲ್ಲಿ ಅವರ ಸಂಪೂರ್ಣ ಖರ್ಚು ವೆಚ್ಚಗಳನ್ನು ತಾವು ಭರಿಸುವುದಾಗಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ತನ್ನ ಎರಡು ದಿನಗಳ ವೇತನವನ್ನೂ ಸಹ ಈ ಎರಡು ಹುತಾತ್ಮ ಯೋಧರ ಕುಟುಂಬಗಳಿಗೆ ನೀಡಲು ಉದ್ದೇಶಿಸಿರುವುದಾಗಿ ಡಿ.ಸಿ. ಇನಾಯತ್ ಖಾನ್ ಅವರು ತಿಳಿಸಿದ್ದಾರೆ.

ಮತ್ತು ತನ್ನ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸರಕಾರಿ ಅಧಿಕಾರಿಗಳು ತಮ್ಮ ಒಂದು ದಿನದ ವೇತನವನ್ನು ಈ ಹುತಾತ್ಮ ಯೋಧರ ಕುಟುಂಬಗಳಿಗೆ ನೀಡುವಂತೆ ಅವರು ಮನವಿ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಈ ಉದ್ದೇಶಕ್ಕಾಗಿ ಡಿ.ಸಿ. ಮೇಡಂ ಅವರು ಶೇಖ್ ಪುರದಲ್ಲಿ ಒಂದು ಪ್ರತ್ಯೇಕ ಬ್ಯಾಂಕ್ ಅಕೌಂಟನ್ನೂ ಸಹ ತೆರೆದಿದ್ದಾರೆ. ಈ ಅಕೌಂಟ್ ಗೆ ಸಾರ್ವಜನಿಕರೂ ಸಹ ಹಣವನ್ನು ಜಮೆ ಮಾಡುವ ಮೂಲಕ ಹುತಾತ್ಮ ಯೋಧರ ಕುಟುಂಬಗಳಿಗೆ ತಮ್ಮ ಮುಂದಿನ ಬದುಕನ್ನು ಕಟ್ಟಿಕೊಳ್ಳಲು ಸಹಾಯ ಮಾಡಬಹುದಾಗಿದೆ. ಒಟ್ಟಾರೆಯಾಗಿ ಓರ್ವ ಸರಕಾರಿ ಅಧಿಕಾರಿಯಾಗಿದ್ದುಕೊಂಡು ತನ್ನ ರಾಜ್ಯದ ಹುತಾತ್ಮ ಯೋಧರ ಕುಟುಂಬಗಳ ಸಹಾಯಕ್ಕೆ ಧಾವಿಸಿರುವ ಜಿಲ್ಲಾಧಿಕಾರಿ ಇನಾಯತ್ ಖಾನ್ ಅವರ ಈ ಕ್ರಮಕ್ಕೆ ಎಲ್ಲೆಡೆಯಿಂದ ಇದೀಗ ಶ್ಲಾಘನೆ ವ್ಯಕ್ತವಾಗಿದೆ.

ಟಾಪ್ ನ್ಯೂಸ್

Mangaluru ಎಂಡಿಎಂಎ ಮಾರಾಟ: ಆರೋಪಿಯ ಬಂಧನ

Mangaluru ಎಂಡಿಎಂಎ ಮಾರಾಟ: ಆರೋಪಿಯ ಬಂಧನ

1-weqwqe

Belagavi; ಇಂದು ಮತ್ತೊಂದು ಭೀಕರ ಅಪಘಾತ: 6 ಮಂದಿ ದುರ್ಮರಣ!

arrested

IAF; ವಿಂಗ್ ಕಮಾಂಡರ್ ಎಂದು ಏರ್ ಫೋರ್ಸ್ ಸ್ಟೇಷನ್ ಪ್ರವೇಶಿಸಿದವನ ಬಂಧನ

kejriwal-2

Delhi CM ಕೇಜ್ರಿವಾಲ್ ರನ್ನು ಬಂಧಿಸಿದರೆ ಜನರು ಬೀದಿಗಿಳಿಯುತ್ತಾರೆ: ಆಪ್ ಆಕ್ರೋಶ

HDK BJP

BJP ಯೊಂದಿಗೆ ಯಾವುದೇ ರೀತಿಯ ಸಮಸ್ಯೆಗಳಿಲ್ಲ: ಶಾ ಭೇಟಿ ಬಳಿಕ ಎಚ್.ಡಿ.ಕುಮಾರಸ್ವಾಮಿ

gmail

ಆಗಸ್ಟ್ ನಿಂದ Gmail ಸ್ಥಗಿತ? ಸ್ಪಷ್ಟನೆ ನೀಡಿದ ಗೂಗಲ್

CT Ravi

BJP; ಬೇಡಿಕೆಯಿಟ್ಟಿಲ್ಲ,ಪಕ್ಷ ಬಯಸಿದರೆ ಸ್ಪರ್ಧಿಸುತ್ತೇನೆ: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

arrested

IAF; ವಿಂಗ್ ಕಮಾಂಡರ್ ಎಂದು ಏರ್ ಫೋರ್ಸ್ ಸ್ಟೇಷನ್ ಪ್ರವೇಶಿಸಿದವನ ಬಂಧನ

kejriwal-2

Delhi CM ಕೇಜ್ರಿವಾಲ್ ರನ್ನು ಬಂಧಿಸಿದರೆ ಜನರು ಬೀದಿಗಿಳಿಯುತ್ತಾರೆ: ಆಪ್ ಆಕ್ರೋಶ

1-dsadsd

Gujarat; 350 ಕೋಟಿ ರೂ.ಮೌಲ್ಯದ ಹೆರಾಯಿನ್ ವಶ: 9 ಮಂದಿ ಬಂಧನ

1-dd

Delhi; ಕೆಡವಲಾದ ಅಖೂಂಡ್ಜಿ ಮಸೀದಿ ಬಳಿ ಪ್ರಾರ್ಥನೆಗೆ ಅವಕಾಶವಿಲ್ಲವೆಂದ ಹೈಕೋರ್ಟ್

1-asasas

Nashedi; ಇಂದ್ರಿಯವೇ ಇಲ್ಲದವರು…: ರಾಹುಲ್ ಗಾಂಧಿ ನಶೆಯ ಹೇಳಿಕೆ ವಿರುದ್ಧ ಮೋದಿ ಕಿಡಿ

MUST WATCH

udayavani youtube

ಸಸಿಹಿತ್ಲು ಕಡಲು ಸೇರಿದ ಸೇರಿದ 88 ಆಲಿವ್‌ ಮರಿಗಳು

udayavani youtube

ಮಧುಮೇಹ ಕಿಡ್ನಿ ಸಮಸ್ಯೆಗೆ ಹೇಗೆ ಕಾರಣವಾಗುತ್ತದೆ ?

udayavani youtube

ಏನಿದು ಮಂಗನ ಕಾಯಿಲೆ?

udayavani youtube

ಅರಬ್ಬರ ನಾಡಿನಲ್ಲಿ ಹಿಂದೂ ದೇವಾಲಯ

udayavani youtube

ಶುಗರ್ ಬೀಟ್ : ನೂತನ ಪ್ರಯೋಗದತ್ತ ನಿಂಗಸಾನಿ ಸಹೋದರರು

ಹೊಸ ಸೇರ್ಪಡೆ

Mangaluru ಎಂಡಿಎಂಎ ಮಾರಾಟ: ಆರೋಪಿಯ ಬಂಧನ

Mangaluru ಎಂಡಿಎಂಎ ಮಾರಾಟ: ಆರೋಪಿಯ ಬಂಧನ

1-weqwqe

Belagavi; ಇಂದು ಮತ್ತೊಂದು ಭೀಕರ ಅಪಘಾತ: 6 ಮಂದಿ ದುರ್ಮರಣ!

1-adsddasds

Canada; Halton Regional ಸಾರ್ವಜನಿಕ ಆರೋಗ್ಯ ಮುಖ್ಯಸ್ಥೆಯಾಗಿ ಡಾ. ದೀಪಿಕಾ ಲೋಬೋ

arrested

IAF; ವಿಂಗ್ ಕಮಾಂಡರ್ ಎಂದು ಏರ್ ಫೋರ್ಸ್ ಸ್ಟೇಷನ್ ಪ್ರವೇಶಿಸಿದವನ ಬಂಧನ

kejriwal-2

Delhi CM ಕೇಜ್ರಿವಾಲ್ ರನ್ನು ಬಂಧಿಸಿದರೆ ಜನರು ಬೀದಿಗಿಳಿಯುತ್ತಾರೆ: ಆಪ್ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.