

Team Udayavani, Feb 17, 2017, 3:14 PM IST
ಥಾಣೆ : ಇಲ್ಲಿನ ಹಳೇ ಮಾರ್ಕೆಟ್ ಪ್ರದೇಶದಲ್ಲಿರುವ ಐದು ಮಹಡಿಗಳ ಕಟ್ಟಡದಲ್ಲಿ ತೀವ್ರ ಮಟ್ಟದ ಬಿರುಕುಗಳು ಕಾಣಿಸಿಕೊಂಡು ಕಟ್ಟಡವು ಒಂದು ಬದಿಗೆ ವಾಲಲು ಆರಂಭಿಸಿರುವುದನ್ನು ಪರಿಗಣಿಸಿ ಕಟ್ಟಡದಲ್ಲಿ ವಾಸವಾಗಿರುವ 9 ಕುಟುಂಬಗಳನ್ನು ಇಂದು ಮುನ್ನೆಚ್ಚರಿಕೆಯ ಕ್ರಮವಾಗಿ ಸ್ಥಳಾಂತರಿಸಲಾಗಿದೆ ಎಂದು ಥಾಣೆ ಮುನಿಸಿಪಲ್ ಕಾರ್ಪೋರೇಶನ್ ಅಧಿಕಾರಿಗಳು ತಿಳಿಸಿದ್ದಾರೆ.
ಹಳೇ ಮಾರ್ಕೆಟ್ ಪ್ರದೇಶದಲ್ಲಿನ ಸವೇರಾ ಅಪಾರ್ಟ್‌ಮೆಂಟ್ ಕಟ್ಟಡವು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿ ಇರುವುದನ್ನು ಗಮನಿಸಿ ಅದರೊಳಗಿನ ನಿವಾಸಿಗಳನ್ನು ಒಡನೆಯೇ ಸ್ಥಳಾಂತರಿಸಲಾಯಿತೆಂದು ಟಿಎಂಸಿ ಅಧಿಕಾರಿ ಸಂತೋಷ್ ಕದಮ್ ಹೇಳಿದರು.
ನೆಲ ಹಾಗೂ ಮೇಲಿನ ನಾಲ್ಕು ಅಂತಸ್ತುಗಳನ್ನು ಒಳಗೊಂಡ ಒಟ್ಟು ಐದು ಮಹಡಿಗಳ ಈ ಕಟ್ಟಡದಲ್ಲಿ ಗಂಭೀರ ಬಿರುಕುಗಳು ಕಾಣಿಸಿಕೊಂಡು ಕಟ್ಟಡವು ತನ್ನ ಒಂದು ಬದಿಯತ್ತ ವಾಲತೊಡಗಿದದೆ. ಕಟ್ಟಡಕ್ಕೆ ಕೂಡಲೇ ನೀರು ಮತ್ತು ವಿದ್ಯುತ್ ಪೂರೈಕೆಯನ್ನು ನಿಲ್ಲಿಸಲಾಗುವುದು ಎಂದು ಮುಖ್ಯ ಅಗ್ನಿ ಶಾಮಕ ದಳದ ಅಧಿಕಾರಿ ಶಶಿಕಾಂತ್ ಕಾಳೆ ತಿಳಿಸಿದ್ದಾರೆ.
ಅತಿಕ್ರಮಣ ನಿಗ್ರಹ ಇಲಾಖೆಯ ಅಧಿಕಾರಿಗಳು ಈ ಕಟ್ಟಡವನ್ನು ಯಾವಾಗ ಧರಾಶಾಯಿ ಮಾಡಲಾಗುವುದೆಂಬುದನ್ನು ನಿರ್ಧರಿಸಲಿದ್ದಾರೆ ಎಂದವರು ಹೇಳಿದರು.
Ad
ಕ್ಯಾಂಟೀನ್ ಸಿಬ್ಬಂದಿಗೆ ಹಲ್ಲೆ: ಜನಪ್ರತಿನಿಧಿಗಳು ಹೊಡೆಯುವುದು ಸರಿಯಲ್ಲ: ಸಿಎಂ ಫಡ್ನವೀಸ್
Nobel Peace Prize: ಶಾಂತಿ ಪ್ರಶಸ್ತಿಗೆ ಟ್ರಂಪ್ ಆಯ್ಕೆ ಶತಮಾನದ ವಿಚಿತ್ರ: ಕಾಂಗ್ರೆಸ್
ನ್ಯಾ.ವರ್ಮ ವಿರುದ್ಧ ಲೋಕಸಭೇಲಿ ಪದಚ್ಯುತಿ ಮಂಡನೆ: ಮೂಲಗಳು
Oldest Elephant: ಬದುಕಿನ ಯಾನ ನಿಲ್ಲಿಸಿದ ವತ್ಸಲಾ.. ಏಷ್ಯಾದ ಅತ್ಯಂತ ಹಿರಿಯ ಆನೆ ಇನ್ನಿಲ್ಲ
ದಿಲ್ಲಿ ಸಿಎಂ ಅಧಿಕೃತ ನಿವಾಸ ನವೀಕರಣ ಟೆಂಡರ್ ರದ್ದುಗೊಳಿಸಿದ ಸರಕಾರ
Mangaluru: ಶಾಂತಿ ನೆಲೆಸಲಿ, ಮೂಲ ಸಮಸ್ಯೆಗಳಿಗೆ ಪರಿಹಾರ ಸಿಗಲಿ
ಪ್ರತೀ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ: ಡಾ.ಜಿ. ಪರಮೇಶ್ವರ್
ಮೈಸೂರು-ಕುಶಾಲನಗರ ಎಕ್ಸ್‌ಪ್ರೆಸ್‌ವೇ ಕಾರ್ಯ ಶೀಘ್ರ ಆರಂಭ
ಕೊಡಗಿನಲ್ಲಿ ಅಕ್ರಮ ರೆಸಾರ್ಟ್‌ಗಳ ಅಬ್ಬರ: ಕೂಡಲೇ ನೆಲಸಮಗೊಳಿಸಲು ಆಗ್ರಹ
Rain; ಕರಾವಳಿಯಲ್ಲಿ ಜು.10 ರಿಂದ 15ರವರೆಗೆ ಎಲ್ಲೋ ಅಲರ್ಟ್ ಘೋಷಣೆ
You seem to have an Ad Blocker on.
To continue reading, please turn it off or whitelist Udayavani.