ಪುಲ್ವಾಮಾ ಘಟನೆಯೇ ಅಜರ್‌ ನಿಷೇಧಕ್ಕೆ ಕಾರಣ

Team Udayavani, May 3, 2019, 6:10 AM IST

azar

ಹೊಸದಿಲ್ಲಿ: ಜೈಷ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ವಿಶ್ವಸಂಸ್ಥೆಯ ನಿಷೇಧಿತ ಉಗ್ರರ ಪಟ್ಟಿಗೆ ಸೇರಿಸಲು ಪುಲ್ವಾಮಾ ದಾಳಿಯೇ ಪ್ರಮುಖ ಅಂಶವಾಗಿದೆ. ಈ ಕ್ರಮ ಅಜರ್‌ನ ಉಗ್ರ ಚಟುವಟಿಕೆಗಳ ಬಯೋಡೇಟಾ ಅಲ್ಲ ಎಂದು ಭಾರತದ ಸ್ಪಷ್ಟನೆ ನೀಡಿದೆ. ಗುರುವಾರ ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಇಲಾಖೆ ವಕ್ತಾರ ರವೀಶ್‌ ಕುಮಾರ್‌, ಇಂಥ ಕ್ರಮ ಕೈಗೊಳ್ಳಲು ಚೀನಾ ಜತೆಗೆ ಯಾವುದೇ ಒಪ್ಪಂದ ಮಾಡಿಕೊಳ್ಳಲಾಗಿಲ್ಲ ಎಂದು ಹೇಳಿದ್ದಾರೆ. ಅಜರ್‌ಗೆ ನಿಷೇಧ ಹೇರುವ ವೇಳೆ ಪ್ರಸ್ತಾಪಿಸಿದ ಉಲ್ಲೇಖಗಳಲ್ಲಿ ಪುಲ್ವಾಮಾ ದಾಳಿ ಕೈಬಿಡಲಾಗಿದೆ ಎಂಬುದಕ್ಕೆ ಸಂಬಂಧಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ಗುರುವಾರ ಸ್ಪಷ್ಟನೆ ನೀಡಿದ್ದಾರೆ.

ಅಜರ್‌ನನ್ನು ಹಲವು ಉಗ್ರ ಕೃತ್ಯಗಳ ಆಧಾರದ ಮೇಲೆ ಅಂತಾರಾಷ್ಟ್ರೀಯ ಉಗ್ರ ಎಂದು ಘೋಷಿಸಲಾಗಿದೆ. ಜಾಗತಿಕ ಉಗ್ರ ಎಂದು ಆತನನ್ನು ಘೋಷಿಸಬೇಕೆಂಬುದೇ ನಮ್ಮ ಮೂಲ ಉದ್ದೇಶ. ನಾವು ಭಯೋತ್ಪಾದನೆ ಹಾಗೂ ದೇಶದ ಭದ್ರತೆ ವಿಚಾರದಲ್ಲಿ ಯಾವುದೇ ದೇಶದೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ರವೀಶ್‌ ಹೇಳಿದ್ದಾರೆ.

ಸಂಭ್ರಮಾಚರಿಸಲೂ ಸಂಕಟ: ಅಜರ್‌ ನಿಷೇಧಗೊಂ ಡಿದ್ದಕ್ಕೆ ಕಾಂಗ್ರೆಸ್‌ ಸಂಭ್ರಮಾಚರಿಸಲೂ ಆಗುತ್ತಿಲ್ಲ. ಸಂಭ್ರಮಾಚರಿಸಿದರೆ ರಾಜಕೀಯ ಅನನುಕೂಲ ಉಂಟಾಗುತ್ತದೆ ಎಂದು ಹೆದರುತ್ತಿದೆ. ಅಜರ್‌ ನಿಷೇಧ ಮೋದಿ ಸರಕಾರದ ನಿರಂತರ ಪ್ರಯತ್ನದ ಫ‌ಲ ಎಂದು ಕೇಂದ್ರ ಸಚಿವ ಅರುಣ್‌ ಜೇಟಿÉ ಹಾಗೂ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ನಿಷೇಧ ವಿವರಗಳಲ್ಲಿ ಎಲ್ಲ ಉಗ್ರ ಕೃತ್ಯ ಉಲ್ಲೇಖೀಸುವ ಅಗತ್ಯವಿಲ್ಲ. ಆತನನ್ನು ನಿಷೇಧಿಸುವುದು ಮುಖ್ಯ. ಇದರ ಪರಿಣಾಮ ಆ ದೇಶ ಎದುರಿಸಬೇಕಾಗುತ್ತದೆ ಎಂದು ಜೇಟಿÉ ಹೇಳಿದ್ದಾರೆ.

ಸೊತ್ತು ಮುಟ್ಟುಗೋಲು
ವಿಶ್ವಸಂಸ್ಥೆಯು ಅಜರ್‌ನನ್ನು ನಿಷೇಧಿಸಿದ ಬೆನ್ನಲ್ಲೇ ಪಾಕಿಸ್ಥಾನವು ಗುರುವಾರ ಮಸೂದ್‌ನ ಎಲ್ಲ ಸೊತ್ತುಗಳನ್ನು ಜಪ್ತಿ ಮಾಡಿದೆ ಮತ್ತು ಆತ ಪ್ರಯಾಣ ಮಾಡದಂತೆ ನಿಷೇಧ ವಿಧಿಸಿದೆ. ಅಜರ್‌ ಈವರೆಗೆ ಹೊಂದಿದ್ದ ಎಲ್ಲ ಹಣಕಾಸು ಸ್ವತ್ತು ಮತ್ತು ಹಣವನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ ವಿದೇಶಗಳಿಗೆ ತೆರಳದಂತೆಯೂ ಅಜರ್‌ಗೆ ನಿಷೇಧ ವಿಧಿಸಲಾಗಿದೆ. ಅಲ್ಲದೆ, ತಕ್ಷಣವೇ ಅಜರ್‌ ವಿರುದ್ಧ ನಿಷೇಧವನ್ನು ಜಾರಿಗೊಳಿಸಲಾಗುತ್ತದೆ ಎಂದು ಪಾಕಿಸ್ಥಾನ ಹೇಳಿದೆ. ಇದರಿಂದಾಗಿ ಅಜರ್‌ ಯಾವುದೇ ದೇಶಕ್ಕೆ ತೆರಳಲಾಗದು. ಆದರೆ ಸ್ವದೇಶದಲ್ಲಿ ಈತ ಪ್ರಯಾಣ ನಡೆಸಬಹುದಾಗಿದೆ.

Ad

ಟಾಪ್ ನ್ಯೂಸ್

Rain; ಕರಾವಳಿಯಲ್ಲಿ ಜು.10 ರಿಂದ 15ರವರೆಗೆ ಎಲ್ಲೋ ಅಲರ್ಟ್‌ ಘೋಷಣೆ

Rain; ಕರಾವಳಿಯಲ್ಲಿ ಜು.10 ರಿಂದ 15ರವರೆಗೆ ಎಲ್ಲೋ ಅಲರ್ಟ್‌ ಘೋಷಣೆ

ಕಾರ್ಮಿಕ ಮುಷ್ಕರ; ದ.ಕ.,ಉಡುಪಿ ಜಿಲ್ಲೆಯಲ್ಲಿ ಸಹಜ ಸ್ಥಿತಿ

ಕಾರ್ಮಿಕ ಮುಷ್ಕರ; ದ.ಕ.,ಉಡುಪಿ ಜಿಲ್ಲೆಯಲ್ಲಿ ಸಹಜ ಸ್ಥಿತಿ

Maha-CM–MLA-Canteen

ಕ್ಯಾಂಟೀನ್‌ ಸಿಬ್ಬಂದಿಗೆ ಹಲ್ಲೆ: ಜನಪ್ರತಿನಿಧಿಗಳು ಹೊಡೆಯುವುದು ಸರಿಯಲ್ಲ: ಸಿಎಂ ಫಡ್ನವೀಸ್‌

Kasaragod: ಸಾರ್ವತ್ರಿಕ ಮುಷ್ಕರ: ಬಸ್‌ ಕೊರತೆKasaragod: ಸಾರ್ವತ್ರಿಕ ಮುಷ್ಕರ: ಬಸ್‌ ಕೊರತೆ

Kasaragod: ಸಾರ್ವತ್ರಿಕ ಮುಷ್ಕರ: ಬಸ್‌ ಕೊರತೆ

ಕೆಂಪುಕಲ್ಲು, ಮರಳು ಸಮಸ್ಯೆ: ಜು.14ರಂದು ಬಿಜೆಪಿಯಿಂದ 8 ಕ್ಷೇತ್ರಗಳಲ್ಲಿ ಪ್ರತಿಭಟನೆಕೆಂಪುಕಲ್ಲು, ಮರಳು ಸಮಸ್ಯೆ: ಜು.14ರಂದು ಬಿಜೆಪಿಯಿಂದ 8 ಕ್ಷೇತ್ರಗಳಲ್ಲಿ ಪ್ರತಿಭಟನೆ

ಕೆಂಪುಕಲ್ಲು, ಮರಳು ಸಮಸ್ಯೆ: ಜು.14ರಂದು ಬಿಜೆಪಿಯಿಂದ 8 ಕ್ಷೇತ್ರಗಳಲ್ಲಿ ಪ್ರತಿಭಟನೆ

Uppinangady; ವಾಹನ ಅಪಘಾತ ಪ್ರಕರಣ; ಗಾಯಗೊಂಡಿದ್ದ ವ್ಯಕ್ತಿ ಸಾವು

Uppinangady; ವಾಹನ ಅಪಘಾತ ಪ್ರಕರಣ; ಗಾಯಗೊಂಡಿದ್ದ ವ್ಯಕ್ತಿ ಸಾವು

ಭಾರತ-ಪಾಕ್‌ ಯುದ್ಧ ನಿಲ್ಸಿದ್ದು ಟ್ರಂಪ್‌: ಅಮೆರಿಕ ವಿದೇಶಾಂಗ ಸಚಿವ

ಭಾರತ-ಪಾಕ್‌ ಯುದ್ಧ ನಿಲ್ಸಿದ್ದು ಟ್ರಂಪ್‌: ಅಮೆರಿಕ ವಿದೇಶಾಂಗ ಸಚಿವ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maha-CM–MLA-Canteen

ಕ್ಯಾಂಟೀನ್‌ ಸಿಬ್ಬಂದಿಗೆ ಹಲ್ಲೆ: ಜನಪ್ರತಿನಿಧಿಗಳು ಹೊಡೆಯುವುದು ಸರಿಯಲ್ಲ: ಸಿಎಂ ಫಡ್ನವೀಸ್‌

“ಶಾಂತಿ’ ಪ್ರಶಸ್ತಿಗೆ ಟ್ರಂಪ್‌ ಆಯ್ಕೆ ಶತಮಾನದ ವಿಚಿತ್ರ: ಕಾಂಗ್ರೆಸ್‌ ಟೀಕೆ

Nobel Peace Prize: ಶಾಂತಿ ಪ್ರಶಸ್ತಿಗೆ ಟ್ರಂಪ್‌ ಆಯ್ಕೆ ಶತಮಾನದ ವಿಚಿತ್ರ: ಕಾಂಗ್ರೆಸ್‌

ನ್ಯಾ.ವರ್ಮ ವಿರುದ್ಧ ಲೋಕಸಭೇಲಿ ಪದಚ್ಯುತಿ ಮಂಡನೆ: ಮೂಲಗಳು

ನ್ಯಾ.ವರ್ಮ ವಿರುದ್ಧ ಲೋಕಸಭೇಲಿ ಪದಚ್ಯುತಿ ಮಂಡನೆ: ಮೂಲಗಳು

ಏಷ್ಯಾದ ಅತ್ಯಂತ ಹಿರಿಯ ಆನೆ ‘ವತ್ಸಲ’ ಸಾವು…

Oldest Elephant: ಬದುಕಿನ ಯಾನ ನಿಲ್ಲಿಸಿದ ವತ್ಸಲಾ.. ಏಷ್ಯಾದ ಅತ್ಯಂತ ಹಿರಿಯ ಆನೆ ಇನ್ನಿಲ್ಲ

Rekha-Gupta-CM

ದಿಲ್ಲಿ ಸಿಎಂ ಅಧಿಕೃತ ನಿವಾಸ ನವೀಕರಣ ಟೆಂಡರ್‌ ರದ್ದುಗೊಳಿಸಿದ ಸರಕಾರ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

Rain; ಕರಾವಳಿಯಲ್ಲಿ ಜು.10 ರಿಂದ 15ರವರೆಗೆ ಎಲ್ಲೋ ಅಲರ್ಟ್‌ ಘೋಷಣೆ

Rain; ಕರಾವಳಿಯಲ್ಲಿ ಜು.10 ರಿಂದ 15ರವರೆಗೆ ಎಲ್ಲೋ ಅಲರ್ಟ್‌ ಘೋಷಣೆ

ಕಾರ್ಮಿಕ ಮುಷ್ಕರ; ದ.ಕ.,ಉಡುಪಿ ಜಿಲ್ಲೆಯಲ್ಲಿ ಸಹಜ ಸ್ಥಿತಿ

ಕಾರ್ಮಿಕ ಮುಷ್ಕರ; ದ.ಕ.,ಉಡುಪಿ ಜಿಲ್ಲೆಯಲ್ಲಿ ಸಹಜ ಸ್ಥಿತಿ

Maha-CM–MLA-Canteen

ಕ್ಯಾಂಟೀನ್‌ ಸಿಬ್ಬಂದಿಗೆ ಹಲ್ಲೆ: ಜನಪ್ರತಿನಿಧಿಗಳು ಹೊಡೆಯುವುದು ಸರಿಯಲ್ಲ: ಸಿಎಂ ಫಡ್ನವೀಸ್‌

Kasaragod: ಸಾರ್ವತ್ರಿಕ ಮುಷ್ಕರ: ಬಸ್‌ ಕೊರತೆKasaragod: ಸಾರ್ವತ್ರಿಕ ಮುಷ್ಕರ: ಬಸ್‌ ಕೊರತೆ

Kasaragod: ಸಾರ್ವತ್ರಿಕ ಮುಷ್ಕರ: ಬಸ್‌ ಕೊರತೆ

ಕೆಂಪುಕಲ್ಲು, ಮರಳು ಸಮಸ್ಯೆ: ಜು.14ರಂದು ಬಿಜೆಪಿಯಿಂದ 8 ಕ್ಷೇತ್ರಗಳಲ್ಲಿ ಪ್ರತಿಭಟನೆಕೆಂಪುಕಲ್ಲು, ಮರಳು ಸಮಸ್ಯೆ: ಜು.14ರಂದು ಬಿಜೆಪಿಯಿಂದ 8 ಕ್ಷೇತ್ರಗಳಲ್ಲಿ ಪ್ರತಿಭಟನೆ

ಕೆಂಪುಕಲ್ಲು, ಮರಳು ಸಮಸ್ಯೆ: ಜು.14ರಂದು ಬಿಜೆಪಿಯಿಂದ 8 ಕ್ಷೇತ್ರಗಳಲ್ಲಿ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.