ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ: ಗಡ್ಕರಿ

Team Udayavani, Sep 12, 2019, 5:00 AM IST

ನವದೆಹಲಿ: ಆಟೋಮೊಬೈಲ್ ಕ್ಷೇತ್ರದ ಆರ್ಥಿಕ ಬಿಕ್ಕಟ್ಟಿಗೆ ಯುವಕರು ಓಲಾ, ಊಬರ್‌ ಕಾರುಗಳನ್ನೇ ಹೆಚ್ಚಾಗಿ ಬಳಸುತ್ತಿರುವುದು ಕಾರಣ ಎಂಬ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

ಬಿಕ್ಕಟ್ಟಿಗೆ ಅನೇಕ ಕಾರಣಗಳಿವೆ. ಅನೇಕರು ಇ-ರಿಕ್ಷಾಗಳತ್ತ ಮುಖ ಮಾಡಿರುವ ಕಾರಣ ಐಸಿಇ ಆಟೋ ರಿಕ್ಷಾಗಳ ಮಾರಾಟ ಕುಗ್ಗಿದೆ, ದೇಶಾದ್ಯಂತ ಸಾರ್ವಜನಿಕ ಸಾರಿಗೆಯ ಸುಧಾರಣೆಯೂ ಕಾರುಗಳ ಮಾರಾಟ ತಗ್ಗಲು ಕಾರಣ. ಈ ರೀತಿಯ ಅನೇಕ ಕಾರಣಗಳಲ್ಲಿ ಓಲಾ, ಊಬರ್‌ ಕೂಡ ಒಂದು. ಆದರೆ, ನಿರ್ಮಲಾ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ ಗಡ್ಕರಿ.

ಕಾಂಗ್ರೆಸ್‌ ಕಿಡಿ: ಇದೇ ವೇಳೆ, ನಿರ್ಮಲಾ ಹೇಳಿಕೆಗೆ ಕಾಂಗ್ರೆಸ್‌ ನಾಯಕ ಅಭಿಷೇಕ್‌ ಮನು ಸಿಂಘ್ವಿ ಪ್ರತಿಕ್ರಿಯಿಸಿದ್ದು, ‘ದೇಶದ ಆರ್ಥಿಕತೆಯನ್ನು ನಿಭಾಯಿಸಲಾಗದ ಬಿಜೆಪಿಯನ್ನು ಹೊರತುಪಡಿಸಿ ಉಳಿದೆಲ್ಲರನ್ನೂ ನೀವು ಹೊಣೆಗಾರರನ್ನಾಗಿಸುತ್ತೀರಿ’ ಎಂದು ಕಿಡಿಕಾರಿದ್ದಾರೆ. ಜತೆಗೆ, ಟ್ರಕ್‌, ಬಸ್‌ ಮಾರಾಟ ಇಳಿಕೆಯಾಗಲು ಕೂಡ ಯುವಕರು ಓಲಾ, ಊಬರ್‌ ಬಳಕೆ ಮಾಡುತ್ತಿರುವುದು ಕಾರಣವೇ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ