Udayavni Special

ಟೂಲ್ ಕಿಟ್ ಪ್ರಕರಣ : ಪರಿಸರ ಕಾರ್ಯಕರ್ತೆ ದಿಶಾ ರವಿಗೆ ದೆಹಲಿ ಕೋರ್ಟ್ ಜಾಮೀನು..!

ದಿಶಾ ರವಿ ಪರ ವಕೀಲ ಸಿದ್ದಾರ್ಥ ಅಗರ್ ವಾಲ್ ಮಾಹಿತಿ

Team Udayavani, Feb 23, 2021, 4:31 PM IST

ನವ ದೆಹಲಿ : ರೈತರ ಪ್ರತಿಭಟನೆಗೆ ಸಂಬಂಧಿಸಿದ ಟೂಲ್‌ಕಿಟ್‌ಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ್ರೋಹ ಮತ್ತು ಇತರ ಆರೋಪಗಳಿಗಾಗಿ ಪ್ರಕರಣ ದಾಖಲಾಗಿರುವ ಮೂವರು ಆರೋಪಿಗಳಲ್ಲಿ ಒಬ್ಬರಾದ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರಿಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯವು ಮಂಗಳವಾರ(ಫೆ. 23) ಜಾಮೀನು ನೀಡಿದೆ.

ಟೂಲ್ ಕಿಟ್ ಹಂಚಿಕೊಂಡ ಆರೋಪದಡಿ ದೆಹಲಿ ಪೊಲೀಸರಿಂದ ಬಂಧನವಾಗಿರುವ ದಿಶಾ ರವಿ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ಓದಿ : ಸಿಐಡಿಯಿಂದ ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ ಪ್ರಕರಣ ತನಿಖೆ: ಬೊಮ್ಮಾಯಿ

ದಿಶಾ ರವಿ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯವು ಕಳೆದ ಶನಿವಾರ ನಡೆಸಿ, ಮಂಗಳವಾರಕ್ಕೆ(ಫೆ.23) ಕಾಯ್ದಿರಿಸಿತ್ತು.

ದಿಶಾ ರವಿ ಅವರು ಯಾವುದೇ ಪಿತೂರಿಯ ಭಾಗವಾಗಿಲ್ಲ. ಅವರು ಉದ್ದೇಶಗಳೆಲ್ಲವೂ ಪರಿಸರ ಮತ್ತು ರೈತರ ಒಳಿತಿಗಾಗಿ ಇವೆ. ಖಲಿಸ್ತಾನಿ ಚಳುವಳಿಗೂ, ಅವರಿಗೂ ಯಾವುದೇ ಸಂಬಂಧವಿಲ್ಲ’ ಎಂದು ದಿಶಾ ಪರ ವಕೀಲ ಸಿದ್ದಾರ್ಥ ಅಗರ್ ವಾಲ್ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ವಾದ ಮಂಡಿಸಿದ್ದರು.

ಇದಕ್ಕೆ ಪ್ರತಿವಾದ ಮಂಡಿಸಿರುವ ದೆಹಲಿ ಪೊಲೀಸರ ಪರ ವಕೀಲರು, ‘ಭಾರತದ ಹೆಸರಿಗೆ ಮಸಿ ಬಳಿಯುವ ನಿಟ್ಟಿನಲ್ಲಿ ಹೆಣೆಯಲಾದ ಜಾಗತಿಕ ಪಿತೂರಿಯ ಭಾಗವಾಗಿ ದಿಶಾ ರವಿ ಕಾರ್ಯನಿರ್ವಹಿಸಿದ್ದಾರೆ. ಅವರಿಗೆ ಜಾಮೀನು ನೀಡುವುದು ಸಮಂಜಸವಲ್ಲ’ ಡಾಕ್ಯುಮೆಂಟ್ನ ಸೂತ್ರೀಕರಣ ಮತ್ತು ಪ್ರಸಾರದಲ್ಲಿ ದಿಶಾ ರವಿ ಪ್ರಮುಖ ಸಂಚು ಹೂಡಿದ್ದರು ಎಂದು ದೆಹಲಿ ಪೊಲೀಸರು ಆರೋಪಿಸಿದ್ದಾರೆ ಮತ್ತು ಅವರು ಖಲಿಸ್ತಾನಿ ಪರ ಗುಂಪು ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ ನೊಂದಿಗೆ “ಭಾರತದ ವಿರುದ್ಧ ಅಸಮಾಧಾನವನ್ನು ಹರಡಲು” ಸಹಕರಿಸಿದರು ಮತ್ತು ಥನ್ ಬರ್ಗ್ ಅವರೊಂದಿಗೆ ಡಾಕ್ಯುಮೆಂಟ್ ಹಂಚಿಕೊಂಡಿದ್ದಾರೆ. ಟೆಲಿಗ್ರಾಮ್ ಆ್ಯಪ್ ಮೂಲಕ ರವಿ ಟೂಲ್ ಕಿಟ್ ನನ್ನು ಥನ್ ಬರ್ಗ್ ಗೆ ಕಳುಹಿಸಿದ್ದಾರೆ ಮತ್ತು ಎಂದು ದೆಹಲಿ ಪೊಲೀಸರು ಹೇಳಿದ್ದರು.

ಇಂದು, ನ್ಯಾಯಾಲಯಕ್ಕೆ ಹಾಜರಾಗುವ ಮುನ್ನಾ, ಸಹ-ಆರೋಪಿಗಳಾದ ನಿಕಿತಾ ಜಾಕೋಬ್ ಮತ್ತು ಶಾಂತನು ಮುಲುಕ್ ಅವರನ್ನು ಭೇಟಿಯಾಗಲು ದಿಶಾ ರವಿ ಅವರನ್ನು ದೆಹಲಿ ಪೊಲೀಸ್ ಸೈಬರ್ ಸೆಲ್ ಕಚೇರಿಗೆ ಕರೆದೊಯ್ದಿದ್ದರು. ಜಾಕೋಬ್ ಮತ್ತು ಮುಲುಕ್ ಈ ಹಿಂದೆ ಬಾಂಬೆ ಹೈಕೋರ್ಟ್‌ ನಿಂದ ಟ್ರಾನ್ಸಿಟ್ ಜಾಮೀನು ಪಡೆದಿದ್ದು, ಬಂಧನದಿಂದ ರಕ್ಷಣೆ ನೀಡಿದ್ದರು.

ಹೊಸ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸುವ ‘ಟೂಲ್ಕಿಟ್’ಹಂಚಿಕೊಂಡ ಆರೋಪದ ಮೇಲೆ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರ ಬಂಧನವಾಗಿತ್ತು.

ಈಗ ಪಟಿಯಾಲ ಹೌಸ್ ನ್ಯಾಯಾಲಯ ದಿಶಾ ರವಿ ಅವರಿಗೆ ತಲಾ ಒಂದು ಲಕ್ಷ ಎರಡು ಶೂರಿಟಿಗಳೊಂದಿಗೆ ಜಾಮೀನು ನೀಡಿದೆ ಎಂದು ದಿಶಾ ಪರ ವಕೀಲ ಸಿದ್ದಾರ್ಥ ಅಗರ್ ವಾಲ್ ಮಾಧ್ಯಮಗಳಿಗೆ ತಿಳಿಸಿರುವುದು ವರದಿಯಾಗಿದೆ.

ಓದಿ : ದೈನಂದಿನ ವೆಚ್ಚ ಭರಿಸಲು ಪರದಾಟ! ­ಎಪಿಎಂಸಿ ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣ

ಟಾಪ್ ನ್ಯೂಸ್

Bengal’s Jute, Assam’s Gamusa On PM’s #WomensDay Shopping List

ಪ್ರಧಾನಿ ಮೋದಿಯವರ #WomensDay ಶಾಪಿಂಗ್ ಪಟ್ಟಿಯಲ್ಲಿ ಏನೇನಿದೆ..? ಇಲ್ಲಿದೆ ಮಾಹಿತಿ

ಅನೈತಿಕ ಸರ್ಕಾರದ ದಿವಳಿ ಬಜೆಟ್ ಇದು : ಸಿದ್ದರಾಮಯ್ಯ

bnbnbnb

ಸಿದ್ದರಾಮಯ್ಯಗೆ ಸವಾಲು ಹಾಕಿದ ಯಡಿಯೂರಪ್ಪ

ಕರ್ನಾಟಕ ಬಜೆಟ್ 2021: ಉದ್ಯಾನ ನಗರಿ ಸಮಗ್ರ ಅಭಿವೃದ್ಧಿಗೆ ಬಂಪರ್ ಕೊಡುಗೆ

ಕರ್ನಾಟಕ ಬಜೆಟ್ 2021: ಉದ್ಯಾನ ನಗರಿ ಸಮಗ್ರ ಅಭಿವೃದ್ಧಿಗೆ ಬಂಪರ್ ಕೊಡುಗೆ

Jyotiraditya Scindia Now BJP Backbencher, Could’ve Been…”: Rahul Gandhi

ಕಾಂಗ್ರೆಸ್ ನಲ್ಲಿದ್ದಿದ್ದರೆ ಸಿಂದಿಯಾ ಮುಖ್ಯಮಂತ್ರಿಯಾಗಬಹುದಿತ್ತು : ರಾಹುಲ್ ಗಾಂಧಿ

Untitled-1

ಸುಶಾಂತ್ ಸಿಂಗ್‍ಗೆ ಡ್ರಗ್ಸ್ ಪೂರೈಸಿದ್ದ ಪೆಡ್ಲರ್ ಬಂಧನ..!

ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ವಿದ್ಯುತ್ ಶಾಕ್ : ಯುವಕ ಸಾವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengal’s Jute, Assam’s Gamusa On PM’s #WomensDay Shopping List

ಪ್ರಧಾನಿ ಮೋದಿಯವರ #WomensDay ಶಾಪಿಂಗ್ ಪಟ್ಟಿಯಲ್ಲಿ ಏನೇನಿದೆ..? ಇಲ್ಲಿದೆ ಮಾಹಿತಿ

Jyotiraditya Scindia Now BJP Backbencher, Could’ve Been…”: Rahul Gandhi

ಕಾಂಗ್ರೆಸ್ ನಲ್ಲಿದ್ದಿದ್ದರೆ ಸಿಂದಿಯಾ ಮುಖ್ಯಮಂತ್ರಿಯಾಗಬಹುದಿತ್ತು : ರಾಹುಲ್ ಗಾಂಧಿ

Untitled-1

ಸುಶಾಂತ್ ಸಿಂಗ್‍ಗೆ ಡ್ರಗ್ಸ್ ಪೂರೈಸಿದ್ದ ಪೆಡ್ಲರ್ ಬಂಧನ..!

“Didn’t Ask Him To Marry”: Chief Justice Says “Misreporting” In Rape Case

ಮದುವೆಯಾಗುತ್ತೀಯಾ ಎಂದು ಕೇಳಿರಲಿಲ್ಲ..! : ಬೋಬ್ಡೆ ಸ್ಪಷ್ಟನೆ

ಅಂಬಾನಿ ಮನೆ ಮುಂದೆ ಸ್ಪೋಟಕ ತುಂಬಿದ ಕಾರು ಪ್ರಕರಣ : ಎನ್.ಐ.ಎ ತನಿಖೆ..!

MUST WATCH

udayavani youtube

ಮಹಿಳಾ ದಿನಾಚರಣೆಯಂದು ಜನರೊಂದಿಗೆ ಉದಯವಾಣಿ

udayavani youtube

ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ | ಇಂದಿನ ಸುದ್ದಿ ಸಮಾಚಾರ 7- 3- 2021

udayavani youtube

ಸಿದ್ದರಾಮಯ್ಯ ಬಳಿ ಏನೂ ಇಲ್ಲ ಬರೀ ಬೂಟಾಟಿಕೆ ಮಾಡ್ತಾರೆ: ಡಿ.ವಿ. ಸದಾನಂದ ಗೌಡ

udayavani youtube

ಖ್ಯಾತ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರುಇನ್ನಿಲ್ಲ | Udayavani News Bulletin 6-3-21

udayavani youtube

ಮುಂಬೈನಲ್ಲೇನೂ ನಡೆದಿಲ್ಲ, ನಮ್ಮ ಕೈ, ಬಾಯಿ ಶುದ್ಧವಿದೆ: ಸಚಿವ ಭೈರತಿ ಬಸವರಾಜ್

ಹೊಸ ಸೇರ್ಪಡೆ

Bengal’s Jute, Assam’s Gamusa On PM’s #WomensDay Shopping List

ಪ್ರಧಾನಿ ಮೋದಿಯವರ #WomensDay ಶಾಪಿಂಗ್ ಪಟ್ಟಿಯಲ್ಲಿ ಏನೇನಿದೆ..? ಇಲ್ಲಿದೆ ಮಾಹಿತಿ

ನಾಥಪಂಥ ಜೋಗಿ ಸಮುದಾಯ ಅಭಿವೃದ್ಧಿಗೆ ಆಗ್ರಹ

ನಾಥಪಂಥ ಜೋಗಿ ಸಮುದಾಯ ಅಭಿವೃದ್ಧಿಗೆ ಆಗ್ರಹ

ಅನೈತಿಕ ಸರ್ಕಾರದ ದಿವಳಿ ಬಜೆಟ್ ಇದು : ಸಿದ್ದರಾಮಯ್ಯ

ಗ್ರಾಮಕ್ಕೊಂದು ಹಾಲು ಉತ್ಪಾದಕರ ಸಂಘ

ಗ್ರಾಮಕ್ಕೊಂದು ಹಾಲು ಉತ್ಪಾದಕರ ಸಂಘ

ಸಾಮಾಜಿಕ ಕ್ರಾಂತಿಗೆ ಮುಂದಾದ ಮಹಿಳೆಯರು

ಸಾಮಾಜಿಕ ಕ್ರಾಂತಿಗೆ ಮುಂದಾದ ಮಹಿಳೆಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.