
ಶೂನ್ಯದಿಂದ ಭರ್ಜರಿ ಬಹುಮತ:ಇದು ತ್ರಿಪುರ ಬಿಜೆಪಿ ಸಾಧನೆ!!
Team Udayavani, Mar 3, 2018, 3:21 PM IST

ಅಗರ್ತಲಾ: ತ್ರಿಪುರದಲ್ಲಿ 2013 ರ ವಿಧಾನಸಭಾ ಚುನಾವಣಾ ಫಲಿತಾಂಶ ಬಂದಾಗ ಬಿಜೆಪಿಯದ್ದು ಶೂನ್ಯ ಸಂಪಾದನೆ ಆದರೆ 5 ವರ್ಷಗಳ ಬಳಿಕ ಇಂದು ಶನಿವಾರ ಪ್ರಕಟವಾದ ಫಲಿತಾಂಶದಲ್ಲಿ ಬಿಜೆಪಿ ಭರ್ಜರಿ ಬಹುಮತ ಪಡೆದು ಕೆಂಪು ಕೋಟೆಯಲ್ಲಿ ಕೇಸರಿ ಪತಾಕೆ ಹಾರಿಸಿದೆ.
25 ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಸಿಪಿಐ(ಎಂ)ಗೆ ಭಾರೀ ಆಘಾತ ನೀಡಿರುವ ಬಿಜೆಪಿ ದೇಶದ ಅತೀ ಬಡ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮಾಣಿಕ್ ಸರ್ಕಾರ್ ಅವರ ನಿರಂತರ ಆಡಳಿತಕ್ಕೆ ಅಂತ್ಯ ಹಾಡುವಲ್ಲಿ ಯಶಸ್ವಿಯಾಗಿದೆ.
59 ಸ್ಥಾನಗಳ ಪೈಕಿ ಬಿಜೆಪಿ 41 ಸ್ಥಾನಗಳನ್ನು ಜಯಿಸುವ ಮೂಲಕ ಭರ್ಜರಿ ಬಹುಮತ ಪಡೆದಿದೆ. ಆಡಳಿತದಲ್ಲಿದ್ದ ಎಡಪಕ್ಷ 18 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡರೆ ಕಾಂಗ್ರೆಸ್‌ನದ್ದು ಶೂನ್ಯ ಸಂಪಾದನೆ. 2013 ರಲ್ಲಿ ಎಡಪಕ್ಷಗಳ ಮೈತ್ರಿಕೂಟ 49 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ 10 ಸ್ಥಾನಗಳನ್ನು ಗೆದ್ದಿತ್ತು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 4 ಚುನವಣಾ ಪ್ರಚಾರ ಸಮಾವೇಶಗಳಲ್ಲಿ ಪಾಲ್ಗೊಂಡು ಮಾಣಿಕ್ ಸರ್ಕಾರದ ಬದಲಿಗೆ ಬಿಜೆಪಿಗೆ ಮತ ನೀಡಿ, ಹೊಸ ತ್ರಿಪುರಾ ನೋಡಿ ಎಂದು ಮೋಡಿ ಮಾಡಿದ್ದರು.
ಬಿಜೆಪಿಯಿಂದ 48 ರ ಹರೆಯದ ಶಾಸಕ ಬಿಪ್‌ಲಾಬ್ ಕುಮಾರ್ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ.
ತ್ರಿಪುರಾದಲ್ಲಿ 60 ಸ್ಥಾನಗಳಿದ್ದು 1 ಕ್ಷೇತ್ರದ ಅಭ್ಯರ್ಥಿ ನಿಧನ ಹೊಂದಿದ ಹಿನ್ನಲೆಯಲ್ಲಿ ಚುನಾವಣೆ ಮುಂದೂಡಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Saroornagar: ಪ್ರೇಯಸಿಯನ್ನು ಕೊಂದು ದೇವಸ್ಥಾನದ ಬಳಿ ಚರಂಡಿಗೆ ಎಸೆದ ಅರ್ಚಕ!

Balasore Tragedy; ಭೀಕರ ರೈಲ್ವೆ ದುರಂತದಲ್ಲಿ ಶವಾಗಾರವಾಗಿದ್ದ ಶಾಲೆ ನೆಲಸಮ

BIPARJOY ಚಂಡಮಾರುತ 24ಗಂಟೆಯಲ್ಲಿ ತೀವ್ರ ಸ್ವರೂಪ-ಕರಾವಳಿ ಭಾಗದಲ್ಲಿ ತೀವ್ರ ಮಳೆ ಸಾಧ್ಯತೆ

Congress ತೊರೆದು ಹೊಸ ಪಕ್ಷ ಕಟ್ಟುವತ್ತ ಸಚಿನ್ ಪೈಲಟ್ ಚಿತ್ತ? ಏನಿದು ಹೊಸ ಬೆಳವಣಿಗೆ?

ಮತ್ತೊಂದು ಘಟನೆ: ಪ್ರೇಯಸಿಯನ್ನು ಕೊಂದು ಮನೆಯ ಟ್ಯಾಂಕ್ ನಲ್ಲಿ 14 ದಿನ ಬಚ್ಚಿಟ್ಟ ವ್ಯಕ್ತಿ!
MUST WATCH

ಮನೆಯಲ್ಲಿಯೇ ಮಾಡಿ ರುಚಿಕರವಾದ ಎಗ್ ಘೀ ರೋಸ್ಟ್

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
ಹೊಸ ಸೇರ್ಪಡೆ

ಮುಂಬೈ ಬೆಡಗಿಯ ಕನ್ನಡ ಎಂಟ್ರಿ; ‘ರೆಡ್ರಮ್’ನಲ್ಲಿ ಬೋಲ್ಡ್ ಪ್ರಾಚಿ

ಕಲಬುರಗಿ-ಯಾದಗಿರಿ ಹಾಲು ಒಕ್ಕೂಟದಿಂದ ಎಮ್ಮೆ ಹಾಲಿಗೆ ಹೆಚ್ಚಿನ ದರ ನಿಗದಿ

ಬಿಜೆಪಿ ಕಾರ್ಯಕರ್ತರ ನೆರವಿಗಾಗಿ ಕಾನೂನು ಸಹಾಯವಾಣಿ: ತೇಜಸ್ವಿ ಸೂರ್ಯ

Saroornagar: ಪ್ರೇಯಸಿಯನ್ನು ಕೊಂದು ದೇವಸ್ಥಾನದ ಬಳಿ ಚರಂಡಿಗೆ ಎಸೆದ ಅರ್ಚಕ!

Udupi Harsha Showroom: ‘ಐಎಫ್ ಬಿ ಡೀಪ್ ಕ್ಲೀನ್’ ವಾಷಿಂಗ್ ಮೆಷಿನ್ ಬಿಡುಗಡೆ