ಉದಯಪುರ ರೈಲ್ವೆ ಹಳಿ ಸ್ಫೋಟ: ಭಯೋತ್ಪಾದಕ ಕೃತ್ಯ ಎಂದ ರಾಜಸ್ಥಾನ ಪೊಲೀಸರು, ತನಿಖೆ ಚುರುಕು

Team Udayavani, Nov 14, 2022, 11:16 AM IST

ಉದಯಪುರ ರೈಲ್ವೆ ಹಳಿ ಸ್ಫೋಟ: ಭಯೋತ್ಪಾದಕ ಕೃತ್ಯ ಎಂದ ರಾಜಸ್ಥಾನ ಪೊಲೀಸರು, ತನಿಖೆ ಚುರುಕು

ರಾಜಸ್ಥಾನ : ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ ಭಾನುವಾರದಂದು ಉದಯಪುರ-ಅಸರ್ವಾ ರೈಲ್ವೆ ಹಳಿಯಲ್ಲಿ ಸ್ಪೋಟಗೊಂಡ ಹಿನ್ನೆಲೆಯಲ್ಲಿ ಎಟಿಎಸ್ ಮತ್ತು ಎನ್‌ಐಎ ಅಧಿಕಾರಿಗಳ ತಂಡ ತನಿಖೆ ಕೈಗೆತ್ತಿಕೊಂಡಿದೆ.

ರಾಜಸ್ಥಾನ ಪೊಲೀಸರ ಪ್ರಕಾರ, ಟ್ರ್ಯಾಕ್ ಮೇಲೆ 3 ಕೆಜಿ ಡೈನಮೈಟ್ ಇಟ್ಟು ಸ್ಫೋಟ ನಡೆಸಲಾಗಿದೆ ಎಂದು ಹೇಳಿದ್ದಾರೆ. ಎಟಿಎಸ್ ಮತ್ತು ಎನ್‌ಐಎ ಈ ಬಗ್ಗೆ ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಅದಲ್ಲದೆ ಸ್ಪೋಟದ ಹಿಂದೆ ಭಯೋತ್ಪಾದಕ ಲಿಂಕ್ ಇರಬಹುದು, ಅದನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಸ್ಫೋಟದಿಂದಾಗಿ ಟ್ರ್ಯಾಕ್‌ನಲ್ಲಿ ಬಿರುಕು ಉಂಟಾಗಿದೆ ಮತ್ತು ಅದರ ಪ್ಲೇಟ್‌ಗಳಿಗೂ ಹಾನಿಯಾಗಿದೆ. ಎಟಿಎಸ್, ಎನ್ ಐಎ, ಆರ್ ಪಿಎಫ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ರವಿವಾರ ಮುಂಜಾನೆ ರೈಲ್ವೆ ಹಳಿಯಲ್ಲಿ ಸ್ಪೋಟಗೊಂಡ ಸದ್ದು ಗ್ರಾಮಸ್ಥರಿಗೆ ಕೇಳಿದ್ದು ಗ್ರಾಮಸ್ಥರು ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರ ಮಾಹಿತಿ ಮೇರೆಗೆ ರೈಲ್ವೆ ಉನ್ನತಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಇದರೊಂದಿಗೆ ಉದಯಪುರ ವಿಭಾಗೀಯ ಆಯುಕ್ತ ರಾಜೇಂದ್ರ ಭಟ್, ಜಿಲ್ಲಾಧಿಕಾರಿ ತಾರಾಚಂದ್ ಮೀನಾ, ಎಸ್ಪಿ ವಿಕಾಸ್ ಕುಮಾರ್ ಶರ್ಮಾ ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಇದೇ ವೇಳೆ ಅಹಮದಾಬಾದ್‌ನಿಂದ ಉದಯಪುರಕ್ಕೆ ಬರುತ್ತಿದ್ದ ರೈಲನ್ನು ಡುಂಗರ್‌ಪುರದಲ್ಲಿ ನಿಲ್ಲಿಸಲಾಯಿತು. ಸದ್ಯಕ್ಕೆ ಈ ಮಾರ್ಗದಲ್ಲಿ ಸಂಚರಿಸುವ ಎರಡೂ ರೈಲುಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಇದನ್ನೂ ಓದಿ : ಇಸ್ತಾಂಬುಲ್ ಸ್ಫೋಟ ಪ್ರಕರಣ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, 81 ಮಂದಿಗೆ ಗಾಯ, ಓರ್ವನ ಬಂಧನ

ಟಾಪ್ ನ್ಯೂಸ್

ಪುನಶ್ಚೇತನದಲ್ಲೊಂದು ವಿನೂತನ ಮೈಲುಗಲ್ಲು

ಪುನಶ್ಚೇತನದಲ್ಲೊಂದು ವಿನೂತನ ಮೈಲುಗಲ್ಲು

ದಿಲ್ಲಿ ಸಭೆಯಲ್ಲೂ ಹಳ್ಳಿ ಅಭಿಪ್ರಾಯಕ್ಕೆ ಮನ್ನಣೆ;  ಜಿಲ್ಲೆಗಳಲ್ಲೂ ನಡೆದ ಕೋರ್‌ ಕಮಿಟಿ ಸಭೆ

ದಿಲ್ಲಿ ಸಭೆಯಲ್ಲೂ ಹಳ್ಳಿ ಅಭಿಪ್ರಾಯಕ್ಕೆ ಮನ್ನಣೆ;  ಜಿಲ್ಲೆಗಳಲ್ಲೂ ನಡೆದ ಕೋರ್‌ ಕಮಿಟಿ ಸಭೆ

ಕೂಡ್ಲಿಗಿ ಬಿಜೆಪಿ ಟಿಕೆಟ್‌ ಭಾರೀ ಪೈಪೋಟಿ

ಕೂಡ್ಲಿಗಿ ಬಿಜೆಪಿ ಟಿಕೆಟ್‌ ಭಾರೀ ಪೈಪೋಟಿ

ಸಿದ್ದು ನಡೆ ನಿಗೂಢ: ಬಾದಾಮಿ ಕಣ ಇನ್ನೂ ಭಣ ಭಣ; ಅಭ್ಯರ್ಥಿ ಘೋಷಿಸದೆ ಕುತೂಹಲ

ಸಿದ್ದು ನಡೆ ನಿಗೂಢ: ಬಾದಾಮಿ ಕಣ ಇನ್ನೂ ಭಣ ಭಣ; ಅಭ್ಯರ್ಥಿ ಘೋಷಿಸದೆ ಕುತೂಹಲ

ಎಪ್ರಿಲ್‌ 9: ಒಂದೇ ದಿನ ನರೇಂದ್ರ ಮೋದಿ-ರಾಹುಲ್‌ ಗಾಂಧಿ ಸದ್ದು

ಎಪ್ರಿಲ್‌ 9: ಒಂದೇ ದಿನ ನರೇಂದ್ರ ಮೋದಿ-ರಾಹುಲ್‌ ಗಾಂಧಿ ಸದ್ದು

ಡಿ.ಕೆ.ಶಿವಕುಮಾರ್‌ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಡಿ.ಕೆ.ಶಿವಕುಮಾರ್‌ ಅರ್ಜಿ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಮೊಳಕಾಲ್ಮೂರು ಕಾಂಗ್ರೆಸ್‌ನಲ್ಲಿ ಕಿಡಿ

ಮೊಳಕಾಲ್ಮೂರು ಕಾಂಗ್ರೆಸ್‌ನಲ್ಲಿ ಕಿಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

neeta

ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರಕ್ಕೆ ಅಭೂತಪೂರ್ವ ಆರಂಭ

manish sisodia

ದೆಹಲಿ ನ್ಯಾಯಾಲಯದಿಂದ ಮನೀಶ್‌ ಸಿಸೋಡಿಯಾ ಜಾಮೀನು ಅರ್ಜಿ ವಜಾ

goa cm boy

ಮುಳುಗುತ್ತಿದ್ದವರನ್ನು ರಕ್ಷಿಸಿದ ಬಾಲಕನಿಗೆ ಗೋವಾ ಮುಖ್ಯಮಂತ್ರಿಯಿಂದ 1 ಲಕ್ಷ ರೂ. ಬಹುಮಾನ

kejriwal-2

ಪ್ರಧಾನಿ ಮೋದಿ ಪದವಿಯ ವಿವರ ಪ್ರಶ್ನೆ;ಕೇಜ್ರಿವಾಲ್‌ಗೆ ದಂಡ ಹಾಕಿದ ಕೋರ್ಟ್

ಪಟಿಯಾಲಾ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ನವಜೋತ್ ಸಿಂಗ್ ಸಿಧು

ಪಟಿಯಾಲಾ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ನವಜೋತ್ ಸಿಂಗ್ ಸಿಧು

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ