
Ujjain ; ಅತ್ಯಾಚಾರಕ್ಕೊಳಗಾಗಿ ಬೀದಿಯಲ್ಲಿ ಅರೆನಗ್ನ ಸ್ಥಿತಿಯಲ್ಲಿ ನಡೆದ 12ರ ಬಾಲೆ !!
ಮನುಷ್ಯತ್ವವನ್ನೇ ಮರೆತರು!... ಸಹಾಯಕ್ಕೆ ಅಂಗಲಾಚಿದಾಗ ದೂರ ಓಡಿಸಿದ...!
Team Udayavani, Sep 27, 2023, 4:55 PM IST

ಉಜ್ಜಯಿನಿ : ಮಧ್ಯಪ್ರದೇಶದಲ್ಲಿ 12 ವರ್ಷದ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ದಾರುಣ ಅತ್ಯಾಚಾರ ನಡೆಸಿ ನಗರದ ದಂಡಿ ಆಶ್ರಮದ ಬಳಿ ಎಸೆದು ಹೋಗಲಾಗಿದ್ದು, ಆಕೆ ತೀವ್ರ ರಕ್ತಸ್ರಾವಕ್ಕೊಳಗಾಗಿ ಅರೆನಗ್ನ ಸ್ಥಿತಿಯಲ್ಲಿ ರಸ್ತೆಯಲ್ಲಿ ನಡೆದಾಡಿದ ಹೇಯ ಘಟನೆ ವರದಿಯಾಗಿದ್ದು, ದೃಶ್ಯಗಳು ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿವೆ.
ಬಾಲಕಿ ಜನ ವಸತಿ ಪ್ರದೇಶದಲ್ಲಿ ನಡೆಯುತ್ತಿರುವುದು ಕಂಡುಬಂದಿದ್ದು, ಆಕೆಯ ಮೈಮೇಲೆ ಒಂದು ಚಿಂದಿ ವಸ್ತ್ರ ಮಾತ್ರ ವಿತ್ತು. ಸಹಾಯಕ್ಕಾಗಿ ಮನೆಯ ಹೊರಗೆ ನಿಂತಿದ್ದ ಒಬ್ಬ ವ್ಯಕ್ತಿಯನ್ನು ಅಂಗಲಾಚಿದ್ದು, ಆತ ಮಾನವೀಯತೆಯನ್ನೇ ಮರೆತು ಆಕೆಯನ್ನು ದೂರ ಓಡಿಸಿದ್ದಾನೆ.
ನಂತರ ಗಂಭೀರ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗಾಗಿ ಇಂದೋರ್‌ಗೆ ಕಳುಹಿಸಲಾಗಿದೆ. ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಅಪರಾಧಿಗಳನ್ನು ಶೀಘ್ರವಾಗಿ ಗುರುತಿಸಲು ಮತ್ತು ಹಿಡಿಯಲು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ.ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ. ಬಾಲಕಿ ಎಲ್ಲಿಯವಳೆಂದು ಕಂಡು ಹಿಡಿಯಲು ನಮಗೆ ನಿಖರವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಆದರೆ ಆಕೆಯ ಮಾತುಗಳಿಂದ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನವಳು ಎಂದು ಸೂಚಿಸುತ್ತದೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ಸಚಿನ್ ಶರ್ಮಾ ತಿಳಿಸಿದ್ದಾರೆ.
ಅತ್ಯಾಚಾರದ ಕುರಿತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR) ಉಜ್ಜಯಿನಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ. ಸಮಿತಿಯು ಪೊಲೀಸರು ಸಲ್ಲಿಸಿದ ಆರಂಭಿಕ ವರದಿಯ ವಿವರಗಳನ್ನು ಕೇಳಿದೆ ಮತ್ತು ಪೋಕ್ಸೊ ಕಾಯಿದೆಯಲ್ಲಿ ಉಲ್ಲೇಖಿಸಲಾದ ಮಾರ್ಗಸೂಚಿಗಳನ್ನು ಅನುಸರಿಸಲು ಕೇಳಿದೆ.
‘ಅತ್ಯಂತ ಅಮಾನವೀಯ ಮತ್ತು ದುರದೃಷ್ಟಕರ ವಿಚಾರವೆಂದರೆ ಅಷ್ಟು ಗಂಟೆಗಳ ಕಾಲ ಯಾರೂ ಬಾಲಕಿಗೆ ಸಹಾಯ ಮಾಡಲು ಮುಂದಾಗಲಿಲ್ಲ. ಇದು ಸಮಾಜದ ಕರಾಳ ಮುಖವನ್ನು ಬಹಿರಂಗಪಡಿಸುತ್ತದೆ’ ‘ ಎಂದು ಎನ್‌ಸಿಪಿಸಿಆರ್ ಅಧ್ಯಕ್ಷ ಪ್ರಿಯಾಂಕ್ ಕಾನೂಂಗೊ ಹೇಳಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jharkhand: ದೇಶದ ಅತೀ ದೊಡ್ಡ ಅಕ್ರಮ ಹಣ ಬೇಟೆ- ಬಗೆದಷ್ಟೂ ಹೊರಬರುತ್ತಿದೆ ನೋಟುಗಳ ಕಟ್ಟು

Aadhaar: ಬೆರಳಿಲ್ಲವೇ? ಕಣ್ಣಿಂದಲೇ ಆಧಾರ್ ನೋಂದಣಿ

ತಾಂಜೇನಿಯಾ-ಭಾರತದ ಕುಟುಂಬದ ನಡುವೆ ಹೊಸ ಬಂಧ: ಇಬ್ಬರ ಜೀವ ಉಳಿಸಿದ ಕಿಡ್ನಿ ಸ್ವ್ಯಾಪಿಂಗ್!

Climate: ಹವಾಮಾನ ರಕ್ಷಣೆಗೆ 100 ಬಿಲಿಯನ್ ಡಾಲರ್ ಮೀಸಲು ವಾಗ್ಧಾನಕ್ಕೆ ಭಾರತ ಆಕ್ಷೇಪ

Infosys: 90 ಗಂಟೆ ದುಡಿಯುತ್ತಿದ್ದೆ- ಇನ್ಫೋಸಿಸ್ ನಾರಾಯಣ ಮೂರ್ತಿ