

Team Udayavani, Aug 23, 2018, 6:38 PM IST
ಭೋಪಾಲ್:ಕೇಂದ್ರ ಸಚಿವೆ ಉಮಾ ಭಾರತಿ ಅವರ ಖಾಸಗಿ ಭದ್ರತಾ ಅಧಿಕಾರಿ ತನ್ನ ಸರ್ವೀಸ್ ರಿವಾಲ್ವರ್ ನಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಭೋಪಾಲ್ ನಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಖಾಸಗಿ ಭದ್ರತಾ ಅಧಿಕಾರಿ ರಾಮ್ ಮೋಹನ್ ದುನೇರಿಯಾ ಆತ್ಮಹತ್ಯೆಗೆ ಶರಣಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ನಿನ್ನೆ ರಾತ್ರಿ ಈ ಅಧಿಕಾರಿ ಕುಡಿದು ಬಂದು ಪತ್ನಿ ಜೊತೆ ಜಗಳವಾಡಿರುವುದಾಗಿ ಮೂಲಗಳು ಪೊಲೀಸರಿಗೆ ಮಾಹಿತಿ ನೀಡಿವೆ.
ಪತ್ನಿಗೆ ಹಿಗ್ಗಾಮುಗ್ಗಾ ಹೊಡೆಯಲು ಆರಂಭಿಸಿದಾಗ ನೆರೆ ಮನೆಯವರು ಪೊಲೀಸ್ ಠಾಣೆಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರ ನಡುವಿನ ಜಗಳ ಶಮನ ಮಾಡಲು ಯತ್ನಿಸಿದ್ದರು. ಆದರೆ ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದ ಹಿನ್ನೆಲೆಯಲ್ಲಿ ಇಬ್ಬರನ್ನೂ ಪೊಲೀಸ್ ಠಾಣೆಯತ್ತ ಕರೆದೊಯ್ದಿದ್ದರು.
ಈ ವೇಳೆ ದಾರಿ ಮಧ್ಯೆ ರಾಮ್ ಮೋಹನ್ ತನ್ನ ಸರ್ವಿಸ್ ರಿವಾಲ್ವರ್ ತೆಗೆದುಕೊಂಡು ತನಗೆ ತಾನೇ ಗುಂಡು ಹೊಡೆದುಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ದರು ಕೂಡಾ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿರುವುದಾಗಿ ವರದಿ ವಿವರಿಸಿದೆ. ಶವವನ್ನು ಪೋಸ್ಟ್ ಮಾರ್ಟ್ಂಗೆ ಕಳುಹಿಸಿದ್ದು, ಘಟನೆ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ.
Ad
ಕ್ಯಾಂಟೀನ್ ಸಿಬ್ಬಂದಿಗೆ ಹಲ್ಲೆ: ಜನಪ್ರತಿನಿಧಿಗಳು ಹೊಡೆಯುವುದು ಸರಿಯಲ್ಲ: ಸಿಎಂ ಫಡ್ನವೀಸ್
Nobel Peace Prize: ಶಾಂತಿ ಪ್ರಶಸ್ತಿಗೆ ಟ್ರಂಪ್ ಆಯ್ಕೆ ಶತಮಾನದ ವಿಚಿತ್ರ: ಕಾಂಗ್ರೆಸ್
ನ್ಯಾ.ವರ್ಮ ವಿರುದ್ಧ ಲೋಕಸಭೇಲಿ ಪದಚ್ಯುತಿ ಮಂಡನೆ: ಮೂಲಗಳು
Oldest Elephant: ಬದುಕಿನ ಯಾನ ನಿಲ್ಲಿಸಿದ ವತ್ಸಲಾ.. ಏಷ್ಯಾದ ಅತ್ಯಂತ ಹಿರಿಯ ಆನೆ ಇನ್ನಿಲ್ಲ
ದಿಲ್ಲಿ ಸಿಎಂ ಅಧಿಕೃತ ನಿವಾಸ ನವೀಕರಣ ಟೆಂಡರ್ ರದ್ದುಗೊಳಿಸಿದ ಸರಕಾರ
You seem to have an Ad Blocker on.
To continue reading, please turn it off or whitelist Udayavani.