ರಾಜಕೀಯಕ್ಕೆ ಬರಲು ಸಲಹೆ ನೀಡಿದ್ದೇ ಮಂಡೇಲಾ
Team Udayavani, Jul 19, 2019, 5:00 AM IST
ನವದೆಹಲಿ: ದಕ್ಷಿಣ ಆಫ್ರಿಕಾದ ನಾಯಕ ದಿ.ನೆಲ್ಸನ್ ಮಂಡೇಲಾ ನನಗೆ ಸ್ಫೂರ್ತಿ. ಸಕ್ರಿಯ ರಾಜಕೀಯಕ್ಕೆ ಬರಬೇಕು ಎಂದು ಅವರೇ ಸಲಹೆ ನೀಡಿದ್ದರು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಹೇಳಿದ್ದಾರೆ. ಮಂಡೇಲಾರ 101ನೇ ಜನ್ಮದಿನ ಪ್ರಯುಕ್ತ ಅವರನ್ನು ನೆನಪು ಮಾಡಿ ಕೊಂಡು ಗುರುವಾರ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕಿ, ‘ಪ್ರಪಂಚ ಮಂಡೇಲಾ ಅವರಂಥ ನಾಯಕರನ್ನು ಯಾವತ್ತೂ ನೆನ ಪಿಸಿಕೊಳ್ಳುತ್ತಿದೆ’ ಎಂದು ಬರೆದುಕೊಂಡಿದ್ದಾರೆ. ‘ಅವರ ಜೀವನ ಶೈಲಿಯು ಪ್ರೀತಿ, ಸ್ವಾತಂತ್ರ್ಯ ಮತ್ತು ಸತ್ಯದ ಪ್ರತೀಕ. ಅಂಕಲ್ ಮಂಡೇಲಾ ನನಗೆ ಸ್ಫೂರ್ತಿ. ನಾನು ರಾಜಕೀಯ ಪ್ರವೇಶ ಮಾಡ ಬೇಕು ಎಂದು ಇತರರು ಹೇಳುವ ಮೊದಲೇ ನನಗೆ ಸಲಹೆ ನೀಡಿದ್ದು ಅವರು’ ಎಂದು ನೆನ ಪಿಸಿಕೊಂಡಿದ್ದಾರೆ. ಫೋಟೋ ಟ್ವೀಟ್ ಮಾಡಿರುವ ಪ್ರಿಯಾಂಕಾ, ‘2001ರಲ್ಲಿ ನನ್ನ ಮಗನ ತಲೆಯ ಮೇಲೆ ಇದ್ದ ಫ್ಯಾನ್ಸಿ ಟೋಪಿ ನೋಡಿ ಅವರು ಲಘುವಾಗಿ ಛೇಡಿಸಿದ್ದರು’ ಎಂದು ಬರೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online ಮೂಲಕ ಸಲ್ಲಿಸುವ ಜೀವನ ಪ್ರಮಾಣಪತ್ರಕ್ಕೆ ಫೇಸ್ ರೆಕಗ್ನಿಷನ್ ಇನ್ನು ಅಧಿಕೃತ ಪುರಾವೆ
ಶಾಲೆಗೆ ಬಣ್ಣ ಬಳಿಯುವ ವಿಚಾರದಲ್ಲಿ ಜೆಎಂಎಂ-ಬಿಜೆಪಿ ವರ್ಣ ಕದನ
ವಸುಂಧರಾ ಇಲ್ಲದೆ ನಡೆಯಲಿದೆ ಚುನಾವಣೆ? ರಾಜ್ಯ ಬಿಜೆಪಿ ಅಧ್ಯಕ್ಷರು ಹೇಳಿದೆನು?
ಮಳೆಗೆ ಬಳಲಿದ ಅಸ್ಸಾಂ; ನಿಲ್ಲದ ಪ್ರವಾಹ ಪ್ರಕೋಪ; ರಕ್ಷಣಾ ಕಾರ್ಯ
ಇ-ವಾಹನ ಬಳಕೆಗೆ ಮುಂದಾದ ಮೆಘಾಲಯ ಸಿಎಂ ಕಾನ್ರಾಡ್ ಸಂಗ್ಮಾ