
Union Budget 2023: ಆದಾಯ ತೆರಿಗೆಯಲ್ಲಿ ಭಾರಿ ಬದಲಾವಣೆ; 7 ಲಕ್ಷದವರೆಗೆ ಟ್ಯಾಕ್ಸ್ ಕಟ್ಟಬೇಕಿಲ್ಲ
Team Udayavani, Feb 1, 2023, 12:47 PM IST

ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2023-24ರ ಕೇಂದ್ರ ಆಯವ್ಯಯ ಮಂಡಿಸಿದ್ದು, ಹಲವು ವರ್ಷಗಳ ಬಳಿಕ ಆದಾಯ ತೆರಿಗೆ ಸ್ಲ್ಯಾಬ್ ಬದಲಾವಣೆ ಮಾಡಲಾಗಿದೆ.
ಹೊಸ ತೆರಿಗೆ ಪದ್ಧತಿಯಲ್ಲಿ ರೂ 7 ಲಕ್ಷದವರೆಗಿನ ಆದಾಯದ ಮೇಲಿನ ರಿಯಾಯಿತಿಯನ್ನು ವಿಸ್ತರಿಸಲಾಗಿದೆ.
2.5 ಲಕ್ಷದಿಂದ ಪ್ರಾರಂಭವಾಗುವ 6 ಆದಾಯ ಸ್ಲ್ಯಾಬ್ ಗಳೊಂದಿಗೆ ಹೊಸ ವೈಯಕ್ತಿಕ ಆದಾಯ ತೆರಿಗೆ ಪದ್ಧತಿಯನ್ನು ನಾನು 2020 ರಲ್ಲಿ ಪರಿಚಯಿಸಿದ್ದೇನೆ. ಸ್ಲ್ಯಾಬ್ ಗಳ ಸಂಖ್ಯೆಯನ್ನು 5 ಕ್ಕೆ ಇಳಿಸುವ ಮೂಲಕ ಮತ್ತು ತೆರಿಗೆ ವಿನಾಯಿತಿ ಮಿತಿಯನ್ನು 3 ಲಕ್ಷಕ್ಕೆ ಹೆಚ್ಚಿಸುವ ಮೂಲಕ ಈ ಆಡಳಿತದಲ್ಲಿ ತೆರಿಗೆ ರಚನೆಯನ್ನು ಬದಲಾಯಿಸುತ್ತೇವೆ” ಎಂದು ಅವರು ಹೇಳಿದರು.
ಇದನ್ನೂ ಓದಿ:ಧಾರವಾಡದ ಕಸೂತಿ ಕಲೆಯ ಸೀರೆಯುಟ್ಟು ಬಜೆಟ್ ಮಂಡಿಸಿದ ಸಚಿವೆ ನಿರ್ಮಲಾ ಸೀತಾರಾಮನ್
ಆದಾಯ ತೆರಿಗೆಯಲ್ಲಿ 0 ರಿಂದ 3 ಲಕ್ಷಗಳು ಆದಾಯಕ್ಕೆ ಶೂನ್ಯ, 3 ರಿಂದ 6 ಲಕ್ಷಗಳಿಗೆ – 5%, 6 ರಿಂದ 9 ಲಕ್ಷಗಳಿಗೆ – 10%, 9 ರಿಂದ 12 ಲಕ್ಷಗಳಿಗೆ – 15%, 12 ರಿಂದ 15 ಲಕ್ಷಗಳಿಗೆ – 20% ಮತ್ತು 15 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿದವರಿಗೆ 30% ತೆರಿಗೆ ಇರಲಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದರು.
Personal income-tax | Income tax- rebate extended on income up to Rs 7 lakhs in new tax regime: FM Sitharaman pic.twitter.com/X8rmVH7Gh2
— ANI (@ANI) February 1, 2023
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೊಳ್ಳೆ ಕಾಯಿಲ್ ನಿಂದ ಉಸಿರುಗಟ್ಟಿ ಮಗು ಸೇರಿದಂತೆ ಆರು ಮಂದಿ ಕೊನೆಯುಸಿರು…

ಗುಜರಾತ್ ನಲ್ಲಿ ಪ್ರಧಾನಿ ಮೋದಿ ವಿರುದ್ಧ ಪೋಸ್ಟರ್ ಅಭಿಯಾನ; 8 ಮಂದಿ ಬಂಧನ: ವರದಿ

ನಾಳೆಯಿಂದ ಬದಲಾವಣೆಯ ಪರ್ವ: ಏನೇನು ಬದಲಾವಣೆ? ಇಲ್ಲಿದೆ ವಿವರ

ಔಷಧ ಕಸ್ಟಮ್ಸ್ ಸುಂಕ ವಿನಾಯಿತಿ: ಏಪ್ರಿಲ್ 1 ರಿಂದ ಹೊಸ ನಿಯಮ

ಎನ್‌ಕೌಂಟರ್ ಕೇಸಲ್ಲಿ ಮೋದಿ ಹೆಸರು ಹೇಳಲು ಒತ್ತಡ ಹೇರಿದ್ದ ಸಿಬಿಐ! ಅಮಿತ್ ಶಾ ಆರೋಪ