

Team Udayavani, Nov 21, 2023, 5:53 PM IST
ಲಕ್ನೋ: ಕ್ಷುಲಕ ಕಾರಣಕ್ಕೆ ಮಗನನ್ನೇ ಕೊಲೆಗೈದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಭಾನುವಾರ(ನ.19 ರಂದು) ನಡೆದ ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಈ ಘಟನೆ ನಡೆದಿದೆ.
ಮನೆಯಲ್ಲಿ ಗಣೇಶ್ ಪ್ರಸಾದ್ ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯವನ್ನು ವೀಕ್ಷಿಸುತ್ತಿದ್ದರು. ಈ ವೇಳೆ ಮಗ ದೀಪಕ್ ನಿಶಾದ್ ಅಪ್ಪ ಮೊದಲು ರಾತ್ರಿಯ ಊಟವನ್ನು ತಯಾರಿಸಿ ನಂತರ ಕ್ರಿಕೆಟ್ ನೋಡಿಯೆಂದು ಹೇಳಿದ್ದಾನೆ. ಎಷ್ಟು ಹೇಳಿದರೂ ಕೇಳದ್ದಕ್ಕೆ ಮಗ ದೀಪಕ್ ಸೀದಾ ಹೋಗಿ ಟಿವಿಯ ಸ್ವಿಚ್ ನ್ನು ಆಫ್ ಮಾಡಿದ್ದಾನೆ. ಇದರಿಂದ ತಂದೆ – ಮಗನ ನಡುವೆ ವಾಗ್ವಾದ ಶುರುವಾಗಿದೆ. ಇದಾದ ಬಳಿಕ ದೈಹಿಕವಾಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಸಿಟ್ಟಾದ ತಂದೆ ಗಣೇಶ್ ವಿದ್ಯುತ್ ತಂತಿಯಿಂದ ಮಗನ ಕತ್ತು ಹಿಸುಕಿ ಕೊಲೆ ಮಾಡಿ, ಪರಾರಿ ಆಗಿದ್ದು, ಪೊಲೀಸರು ಆರೋಪಿಯನ್ನು ಪತ್ತೆ ಮಾಡಿದ್ದಾರೆ.
ದೀಪಕ್ ಮತ್ತು ಗಣೇಶ್ ನಡುವೆ ಕುಡಿತದ ಚಟದ ಬಗ್ಗೆ ಆಗಾಗ ವಾಗ್ವಾದಗಳು ನಡೆಯುತ್ತಿದ್ದವು. ಕ್ರಿಕೆಟ್ ಪಂದ್ಯದ ವೇಳೆ ನಡೆದ ವಾಗ್ವಾದ ಕೊಲೆಗೆ ಕಾರಣವಾಯಿತೆಂದು ಚಾಕೇರಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಬ್ರಿಜ್ ನಾರಾಯಣ್ ಸಿಂಗ್ ಹೇಳಿದ್ದಾರೆ.
ಆರೋಪಿಯನ್ನು ಕಸ್ಟಡಿಗೆ ಒಪ್ಪಿಸಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ.
Ad
ಶಾರ್ಜಾದಲ್ಲಿ ಒಂದೂವರೆ ವರ್ಷದ ಮಗುವನ್ನು ಕೊಂ*ದು ಆತ್ಮಹ*ತ್ಯೆಗೆ ಶರಣಾದ ಕೇರಳದ ಮಹಿಳೆ
Nimisha Priya: ಕೇರಳದ ನರ್ಸ್ ನಿಮಿಷಾ ಪ್ರಿಯಾ ಮರಣದಂಡನೆ ಮುಂದೂಡಿಕೆ… ವರದಿ
Fauja Singh: 114ವರ್ಷದ ವಿಶ್ವದ ಅತ್ಯಂತ ಹಿರಿಯ ಮ್ಯಾರಥಾನ್ ಓಟಗಾರ ರಸ್ತೆ ಅಪಘಾತದಲ್ಲಿ ನಿಧನ
Odisha: ಕಾಲೇಜಿನಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ ಸಾ*ವು
Mumbai: ದೇಶದ ಮೊದಲ ಟೆಸ್ಲಾ ಕಾರು ಮಳಿಗೆ ಇಂದು ಲೋಕಾರ್ಪಣೆ
ಉಡುಪಿ ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಡ್ರಗ್ಸ್ ತಡೆ ಸಮಿತಿ ರಚನೆ: ಎಸ್‌ಪಿ
Saroja Devi Funeral: ಹುಟ್ಟೂರಿನ ಮಣ್ಣಿನಲ್ಲಿ ‘ಅಭಿನಯ ಸರಸ್ವತಿ’ ಬಿ.ಸರೋಜಾದೇವಿ ಲೀನ
Hunsur: ಕೋಳಿ ಫಾರಂ ರೈಟರ್ ನಾಪತ್ತೆ; ದೂರು ದಾಖಲು
Bantwal; ಬಡಗಬೆಳ್ಳೂರು: ಹಲಸಿನ ಮರ ಬಿದ್ದು ಮನೆ ಜಖಂ
ಭಾರತದ ಬಾಹ್ಯಾಕಾಶ ಭವಿಷ್ಯಕ್ಕೆ ಶುಭಾಂಶು ಕೊಡುಗೆ: ಬಾಹ್ಯಾಕಾಶ ಅನ್ವೇಷಣೆಯಲ್ಲಿ ಹೊಸ ಅಧ್ಯಾಯ
You seem to have an Ad Blocker on.
To continue reading, please turn it off or whitelist Udayavani.