ಮಗುವಿಗೆ ಹೆಲ್ಮೆಟ್ ತೊಡಿಸಿದ ತಾಯಿಗೆ ಪೊಲೀಸ್ ಸೆಲ್ಯೂಟ್
Team Udayavani, Aug 2, 2019, 6:30 PM IST
ಉತ್ತರ ಪ್ರದೇಶ: ಮೋಟಾರ್ ವಾಹನ (ತಿದ್ದುಪಡಿಗೊಂಡು) ಕಾಯಿದೆ 2019 ಜಾರಿಗೆ ಬಂದ ಬಳಿಕ ರಸ್ತೆ ಸುರಕ್ಷಾ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತಿದೆ. ರಸ್ತೆಯಲ್ಲಿ ಹೆಲ್ಮೆಟ್ ಧರಿಸಿ ಪ್ರಯಾಣಿಸುವುದು ನಮ್ಮ ಸುರಕ್ಷತೆಯ ದೃಷ್ಟಿಯಲ್ಲಿ ಅನಿವಾರ್ಯವಾಗಿದ್ದು, ಇದೀಗ ಕಾನೂನು ಬಂದ ಬಳಿಕ ಕಡ್ಡಾಯವಾಗಿದೆ.
ತಿದ್ದುಪಡಿ ಮಸೂದೆ ಮಂಡನೆಯಾಗಿ ಕಾಯಿದೆಯಾದ ಬಳಿಕ ಪೊಲೀಸರು ಮತ್ತೂ ಚುರುಕಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಸ್ಕೂಟಿಯಲ್ಲಿ ತನ್ನ ಮಗಳ ಜತೆ ಪ್ರಯಾಣಿಸುತ್ತಿದ್ದ ತಾಯಿಯನ್ನು ಅಲ್ಲಿನ ಎಎಸ್ಪಿ ರಾಹುಲ್ ಶ್ರೀವಾತ್ಸವ್ ಅವರು ಅಭಿನಂದಿಸಿದ ದೃಶ್ಯ ಸಾಮಾಜಿಕ ಜಾಲತಾಣದಲಿ ವೈರಲ್ ಆಗಿದೆ.
ಅಷ್ಟಕ್ಕೂ ಆಗಿದ್ದೇನು?
ಉತ್ತರಪ್ರದೇಶದಲ್ಲಿ ತಾಯಿಯೊಬ್ಬಳು ತಾನೂ ಹೆಲ್ಮೆಟ್ ಧರಿಸಿದ್ದಲ್ಲದೇ ಮುಂದೆ ಕುಳಿತಿದ್ದ ತನ್ನ ಪುಟ್ಟ ಮಗಳಿಗೂ ಹೆಲ್ಮೆಟ್ ಅನ್ನು ತೊಡಿಸಿ ಪ್ರಯಾಣಿಸುತ್ತಿದ್ದರು. ಈ ಘಟನೆಯಿಂದ ಸಂತಸಗೊಂಡ ರಾಹುಲ್ ಅವರು ತಾಯಿ ಮತ್ತು ಮಗುವಿನ ವೀಡಿಯೋ ತೆಗೆದು ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನಿನ್ನ ಹೆಸರೇನು ಎಂದು ಮಗುವಿನಲ್ಲಿ ಕೇಳಿದ ಪೊಲೀಸ್, ನಿಮಗೂ, ನಿಮ್ಮ ಅಮ್ಮನಿಗೂ ನಮ್ಮ ಇಲಾಖೆ ವತಿಯಿಂದ ಧನ್ಯವಾದಗಳನ್ನು ತಿಳಿಸಿದ್ದಾರೆ. ನಿಮ್ಮ ಈ ಕಾಳಜಿಗೆ ನಾವು ಸಂತಸಗೊಂಡಿದ್ದೇವೆ. ಈ ಒಂದು ಉದಾಹರಣೆ ಹಲವು ಪ್ರಯಾಣಿಕರಿಗೆ ಮಾದರಿಯಾಗಲಿ ಎಂದು ಹೇಳಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ರಾಹುಲ್ ಮಗುವಿಗೆ ಶೇಕ್ ಹ್ಯಾಂಡ್ ಮಾಡಿ ಐಎಎಸ್, ಐಪಿಎಸ್ ಮೊದಲಾದ ಅತ್ಯನ್ನುತ ಹುದ್ದೆಯನ್ನು ಅಲಂಕರಿಸುವಂತೆ ಹೇಳಿದೆ. ಮಗು ಎಲ್ಲದಕ್ಕೂ ಓಕೆ ಎಂದಿದೆ.
ಚಾಲನೆ ಮಾಡುವವರು ಹೆಲ್ಮೆಟ್ ಧರಿಸಿ ಪ್ರಯಾಣಿಸುವವರನ್ನು ನಾವು ಸಾಮಾನ್ಯವಾಗಿ ಕಾಣಬಹುದಾಗಿದೆ. ಆದರೆ ಇದಕ್ಕೆ ಅಪವಾದ ಎಂಬಂತೆ ಕೆಲವೊಂದು ಪ್ರಯಾಣಿಕರು ಹೆಲ್ಮೆಟ್ ತೊಡುವುದಿಲ್ಲ. ಜತೆಗೆ ಹಿಂದೆ ಕುಳಿತವರು ಹೆಲ್ಮೆಟ್ ಧರಿಸುವವರು ತೀರಾ ಅಪರೂಪವಾಗಿದೆ. ಇಂತಹ ನಿದರ್ಶನ ನಮ್ಮಲ್ಲಿರುವಾಗ ಮುಂದೆ ಕುಳಿತ ಮುಟ್ಟ ಮಗುವಿಗೆ ಹೆಲ್ಮೆಟ್ ತೊಡಿಸಿ ಚಾಲನೆ ಮಾಡುವುದು ಬಹಳ ಅಪರೂಪದ ಸಂಗತಿಯಾಗಿದೆ.
ಪೊಲೀಸ್ ಟ್ವೀಟ್
Salute the lady’s concern for the safety of the child !
Also admirable is Traffic Inspector Deoria’s effort to engage them in a conversation, appreciate their concern for safety & promise to reward the child in her school. #RoadSafety #Helmet #HelmetForAll pic.twitter.com/ohNIqNI0a3— RAHUL SRIVASTAV (@upcoprahul) August 1, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೊಸ ವರ್ಷದ ಆರಂಭದಲ್ಲಿ ಸ್ವಚ್ಛ ಭಾರತ ಸಂಕಲ್ಪ ಮಾಡಿ: ಗೋವಾ ಸಿಎಂ ಡಾ.ಪ್ರಮೋದ್ ಸಾವಂತ್ ಕರೆ
ನವಜೋತ್ ಸಿಂಗ್ ಸಿಧು ಪತ್ನಿಗೆ ಕ್ಯಾನ್ಸರ್: ನಿಮಗಾಗಿ ಕಾದಿರುವೆ ಎಂದು ಟ್ವೀಟ್ ಮಾಡಿದ ಕೌರ್
ದೋಷಿ,2 ವರ್ಷ ಶಿಕ್ಷೆಯ ತೀರ್ಪು…ರಾಹುಲ್ ರಾಜಕೀಯ ಭವಿಷ್ಯ ಏನಾಗಲಿದೆ?ಕಾನೂನು ತಜ್ಞರು ಹೇಳೋದೇನು
ವಿದ್ಯಾರ್ಥಿನಿಗೆ ಹೊಡೆದ ಆರೋಪ: ಶಿಕ್ಷಕನನ್ನೇ ಅಟ್ಟಾಡಿಸಿ ಥಳಿಸಿದ ಪೋಷಕರು
ತಮಿಳುನಾಡು: ಕೋರ್ಟ್ ಆವರಣದಲ್ಲೇ ಪತ್ನಿ ಮುಖದ ಮೇಲೆ ಆ್ಯಸಿಡ್ ಎಸೆದ ಪತಿ
MUST WATCH
ಹೊಸ ಸೇರ್ಪಡೆ
ಬಾಲ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆಗೆ ಬಾಲ ಗೌರವ ಪ್ರಶಸ್ತಿ
ಬಿಜೆಪಿ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವ ಬದಲು ನಿರುದ್ಯೋಗ ಸೃಷ್ಟಿಸಿದೆ: ಸಿದ್ದು ಟೀಕೆ
ಎ. 2 ರಂದು ಸಿತಾರ್-ಬಾನ್ಸುರಿ ಜುಗಲ್ ಬಂದಿ “ಬಸಂತ್ ಉತ್ಸವ್’
ಹೊಸ ವರ್ಷದ ಆರಂಭದಲ್ಲಿ ಸ್ವಚ್ಛ ಭಾರತ ಸಂಕಲ್ಪ ಮಾಡಿ: ಗೋವಾ ಸಿಎಂ ಡಾ.ಪ್ರಮೋದ್ ಸಾವಂತ್ ಕರೆ
ದಾವಣಗೆರೆ: ಯುಗಾದಿಗೆ ಅತ್ತೆ ಮನೆಗೆ ಬಂದು ನಾಪತ್ತೆಯಾಗಿದ್ದ ಅಳಿಯನ ಭೀಕರ ಹತ್ಯೆ