

Team Udayavani, Jul 19, 2024, 12:59 AM IST
ಲಕ್ನೋ: ಉತ್ತರ ಪ್ರದೇಶದಲ್ಲಿ ಕನ್ವರ್‌ಯಾತ್ರೆ ಸಾಗುವ ಮಾರ್ಗದಲ್ಲಿರುವ ಹೊಟೇಲ್‌ಗಳು ಮುಂಭಾಗದಲ್ಲಿ ಅವುಗಳ ಮಾಲಕರ ಹೆಸರಿನ ಫಲಕ ಹಾಕಬೇಕೆಂದು ಉತ್ತರ ಪ್ರದೇಶದ ಪೊಲೀಸರು ಆದೇಶಿಸಿದ್ದಾರೆ. ಈ ವಿಚಾರವೀಗ ವಿವಾದಕ್ಕೀಡಾಗಿದ್ದು, ಇದನ್ನು ‘ಹಿಟ್ಲರ್ ನೀತಿ’ ಎಂದು ಟೀಕಿಸಲಾಗಿದೆ.
ಶ್ರಾವಣ ಮಾಸದಲ್ಲಿ ನಡೆಯುವ ಯಾತ್ರೆ ವೇಳೆ ಸಾವಿರಾರು ಶಿವಭಕ್ತರು ಹರಿದ್ವಾರದಿಂದ ಪುಣ್ಯ ತೀರ್ಥ ತಂದು ಉತ್ತರ ಪ್ರದೇಶದ ಮುಜಾಫರ್ ನಗರದ ಮಾರ್ಗವಾಗಿ ಸಾಗುತ್ತಾರೆ. ಈ ವೇಳೆ ಯಾತ್ರಿಕರಿಗೆ ಗೊಂದಲವಾಗದಂತೆ, ಭವಿಷ್ಯದಲ್ಲಿ ಯಾವುದೇ ಆರೋಪ ಕೇಳಿ ಬರದಂತೆ ತಡೆಯಲು ಹೊಟೇಲ್, ಢಾಬಾ, ರಸ್ತೆಬದಿಯ ತಳ್ಳುಗಾಡಿಗಳು ತಮ್ಮ ಮಾಲಕರ ಹೆಸರನ್ನು ಸ್ಪಷ್ಟವಾಗಿ ಕಾಣುವಂತೆ ಅಳವಡಿಸಿ ಎಂದು ಪೊಲೀಸರು ಆದೇಶಿಸಿದ್ದರು.
ಈ ಬಗ್ಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. “ಕನ್ವರ್ ಯಾತ್ರಿಕರು ಮುಸಲ್ಮಾನರ ಅಂಗಡಿಗಳಿಗೆ ವ್ಯಾಪಾರ ಮಾಡಬಾರದು ಎಂಬುದು ಇದರ ಉದ್ದೇಶ’ ಎಂದು ಟ್ವೀಟ್ ಮಾಡಿದ್ದಾರೆ. ಬಾಲಿವುಡ್ ಸಾಹಿತಿ ಜಾವೇದ್ ಅಕ್ತರ್ ಕೂಡ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, ಯಾವುದೇ ಧರ್ಮ ತಾರತಮ್ಯದ ಉದ್ದೇಶದಿಂದ ಈ ಆದೇಶ ನೀಡಿಲ್ಲ ಎಂದು ತಿಳಿಸಿದ್ದಾರೆ.
Ad
ಹೈದರಾಬಾದ್ ಗಾಂಜಾ ಪ್ರಕರಣ: ಐಟಿ ಉದ್ಯೋಗಿಗಳು, ವಿದ್ಯಾರ್ಥಿ ಸೇರಿದಂತೆ 14 ಜನರ ಬಂಧನ
Kerala Nurse ನರ್ಸ್ ಪ್ರಿಯಾ ಗಲ್ಲುಶಿಕ್ಷೆ ಕೇಸ್- ಸುಪ್ರೀಂನಲ್ಲಿ ಕೈಚೆಲ್ಲಿದ ಕೇಂದ್ರ
ಪತನಗೊಂಡ ವಿಮಾನದಲ್ಲಿ ಯಾವುದೇ ಸಮಸ್ಯೆ ಕಂಡುಬಂದಿಲ್ಲ.. ಏರ್ ಇಂಡಿಯಾ ಸಿಇಒ ಮೊದಲ ಪ್ರತಿಕ್ರಿಯೆ
San Rechal:ಆರ್ಥಿಕ ಸಂಕಷ್ಟ-ಜನಪ್ರಿಯ ರೂಪದರ್ಶಿ ಸ್ಯಾನ್ ತಂದೆ ನಿವಾಸದಲ್ಲಿ ನೇ*ಣಿಗೆ ಶರಣು
Kidnapped: ಮಾಲಿಯಲ್ಲಿ ಶಸ್ತ್ರಸಜ್ಜಿತರಿಂದ ಮೂವರು ಭಾರತೀಯರ ಅಪಹರಣ… ಇನ್ನೂ ಸಿಗದ ಸುಳಿವು
You seem to have an Ad Blocker on.
To continue reading, please turn it off or whitelist Udayavani.