
ಸೀನಿದ ಕೆಲವೇ ಸೆಕೆಂಡ್‌ಗಳ ಬಳಿಕ ಹೃದಯಾಘಾತ: ಸ್ನೇಹಿತರ ಮುಂದೆಯೇ ಕುಸಿದು ಬಿದ್ದು ಯುವಕ ಮೃತ್ಯು
Team Udayavani, Dec 5, 2022, 4:39 PM IST

ಉತ್ತರ ಪ್ರದೇಶ: ನಾನಾ ಸಂದರ್ಭದಲ್ಲಿ ಹೃದಯಾಘಾತಗಳು ಸಂಭವಿಸುತ್ತಿರುವುದನ್ನು ನೋಡಿದ್ದೇವೆ. ಡ್ಯಾನ್ಸ್ ಮಾಡುವಾಗ,ಆಟ ಆಡುವಾಗ ಹೀಗೆ ಬೇರೆ ಬೇರೆ ಸಂದರ್ಭದಲ್ಲಿ ಹಠಾತ್ ಹೃದಯಾಘಾತಗಳು ಸಂಭವಿಸಿ ಎಷ್ಟೋ ಜನರು ಕೊನೆಯುಸಿರು ಎಳೆದಿದ್ದಾರೆ. ಇಂಥದ್ದೇ ಒಂದು ಘಟನೆ ಡಿ.2 (ಶುಕ್ರವಾರ) ಉತ್ತರ ಪ್ರದೇಶ ಮೀರತ್ ನಲ್ಲಿ ನಡೆದಿದೆ.
ವ್ಯಕ್ತಿಯೊಬ್ಬ ತನ್ನ ಮೂವರು ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾನೆ. ಮಾತಾನಾಡುತ್ತಾ, ಹಾಯಾಗಿ ಹೋಗುವ ವೇಳೆ ಒಬ್ಬಾತನಿಗೆ ಸೀನು ಬಂದಿದೆ. ಸೀನಿದ ಬಳಿಕ ಎದೆ, ಕುತ್ತಿಗೆಗೆ ಕೈಯಿಟ್ಟ ಆತ, ಏಕಾಏಕಿ ಕುಸಿದು ಬಿದ್ದಿದ್ದಾನೆ. ಸ್ನೇಹಿತರು ಏನಾಯಿತೆಂದು ನೋಡಲು ಆತನನ್ನು ಎಚ್ಚರಿಸಲು ಯತ್ನಿಸಿದ್ದಾರೆ.
ಕೂಡಲೇ ಆತನಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಆದರೆ ಆದಾಗಲೇ ಆತ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ. ಸಿಸಿಟಿವಿಯಲ್ಲಿ ಈ ಘಟನೆ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ದೃಶ್ಯ ವೈರಲ್ ಆಗಿದೆ.
ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಯುವ ಜನರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಲಕ್ನೋದಲ್ಲಿ ಮದುವೆ ಮಂಟಪದಲ್ಲೇ ವಧು ಹೃದಯಾಘಾತದಿಂದ ಕುಸಿದು ಬಿದ್ದು ನಿಧನರಾದ ಘಟನೆ ಡಿ.3 ರಂದು ನಡೆದಿತ್ತು.
2 Dec 2022 : 🇮🇳 : A young man died due to 💔 attack💉 while walking.
Why? Because “Cov-ID-AI 💉 strong association with cardiovascular RIP”
Why? Because “India made a record of doing the biggest 💉campaign in human history”
But the gov. says I am not responsible.#heartattack pic.twitter.com/v89e9h5k6o
— Anand Panna (@AnandPanna1) December 4, 2022
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ತೆರಿಗೆ ಪದ್ಧತಿ ಯಾರಿಗೆ, ಹೇಗೆ ಅನ್ವಯ?

ಕ್ರೀಡೆಗೆ 700 ಕೋಟಿ ರೂ. ಅಧಿಕ ಉತ್ತೇಜನ

ರಕ್ಷಣಾ ಕ್ಷೇತ್ರಕ್ಕೆ 5.94 ಲಕ್ಷ ಕೋಟಿ ರೂ.: ದೇಶೀಯವಾಗಿ ಶಸ್ತ್ರಾಸ್ತ್ರ ತಯಾರಿಕೆಗೆ ಒತ್ತು

‘ಮಿತ್ರ್ ಕಾಲ್’ ಬಜೆಟ್ ನಲ್ಲಿ ಭಾರತದ ಭವಿಷ್ಯವಿಲ್ಲ: ಪ್ರಧಾನಿಗೆ ರಾಹುಲ್ ಗಾಂಧಿ ಟಾಂಗ್

Union Budget 2023: 20 ಲಕ್ಷ ಕೋಟಿ ರೂಪಾಯಿ ಕೃಷಿ ಸಾಲದ ಗುರಿ-ಕೃಷಿ ಕ್ಷೇತ್ರಕ್ಕೆ ಡಿಜಿಟಲ್ ಸ್ಪರ್ಶ
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
