ಅಯೋಧ್ಯೆ: 2023ರ ಡಿಸೆಂಬರ್ಗೆ ಮಸೀದಿ ನಿರ್ಮಾಣ ಕಾರ್ಯ ಪೂರ್ಣ
Team Udayavani, Nov 14, 2022, 7:30 AM IST
ಲಕ್ನೋ: ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಮಸೀದಿಯ ನಿರ್ಮಾಣ ಕಾರ್ಯ ಮುಂದಿನ ವರ್ಷದ ಡಿಸೆಂಬರ್ಗೆ ಮುಕ್ತಾಯವಾಗಲಿದೆ.
ಮಸೀದಿಯ ನಕ್ಷೆ, ಆಸ್ಪತ್ರೆ, ಸಮುದಾಯ ಅಡುಗೆ ಕೇಂದ್ರ ಸೇರಿದಂತೆ ಯೋಜನೆಯ ಪೂರ್ಣ ನಕ್ಷೆಗೆ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದಿಂದ ಶೀಘ್ರವೇ ಅನುಮತಿ ಸಿಗಲಿದೆ. ಅದರ ಬಳಿಕ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಷನ್ ಟ್ರಸ್ಟ್ನ ಕಾರ್ಯದರ್ಶಿ ಅಥರ್ ಹುಸೇನ್ ಹೇಳಿದ್ದಾರೆ.
2019ರಲ್ಲಿ ಸುಪ್ರೀಂಕೋರ್ಟ್ ಮುಸ್ಲಿಮರಿಗೆ ಮಸೀದಿ ನಿರ್ಮಾಣಕ್ಕೆ ಜಮೀನು ನೀಡುವಂತೆ ತೀರ್ಪು ನೀಡಿತ್ತು. ಅದರ ಅನ್ವಯ ಮೊದಲ ಹಂತದಲ್ಲಿ ಮಸೀದಿ ನಿರ್ಮಾಣವಾಗಲಿದೆ. ಉಳಿದ ಹಂತದ ನಿರ್ಮಾಣ ಕಾರ್ಯಗಳನ್ನು ಹಂತ ಹಂತವಾಗಿ ಕೈಗೆತ್ತಿಕೊಳ್ಳಲಾಗುತ್ತದೆ.