ಉತ್ತರಪ್ರದೇಶ ಯೂನಿರ್ವಸಿಟಿ, ಕಾಲೇಜುಗಳಲ್ಲಿ ಮೊಬೈಲ್ ಬಳಕೆ ನಿಷೇಧ; ಉಪನ್ಯಾಸಕರಿಗೂ ಅನ್ವಯ
Team Udayavani, Oct 17, 2019, 1:45 PM IST

ಲಕ್ನೋ: ವಿದ್ಯಾರ್ಥಿಗಳು ಪಾಠದ ಸಮಯದಲ್ಲಿ ಮೊಬೈಲ್ ಮೇಲೆ ಹೆಚ್ಚಿನ ಗಮನ ಹರಿಸುವುದನ್ನು ತಡೆಯುವ ನಿಟ್ಟಿನಲ್ಲಿ ಉತ್ತರಪ್ರದೇಶದ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಿ ಉತ್ತರಪ್ರದೇಶ ಉನ್ನತ ಶಿಕ್ಷಣ ನಿರ್ದೇಶನಾಲಯ ಆದೇಶ ಹೊರಡಿಸಿದೆ.
ಉತ್ತರಪ್ರದೇಶ ರಾಜ್ಯಾದ್ಯಂತ ಕಾಲೇಜು ಮತ್ತು ಯೂನಿರ್ವಸಿಟಿ ಆವರಣದೊಳಗೆ ಮೊಬೈಲ್ ಫೋನ್ ಗಳ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಉನ್ನತ ಶಿಕ್ಷಣ ನಿರ್ದೇಶನಾಲಯ ಹೊರಡಿಸಿರುವ ನೂತನ ಪ್ರಕಟಣೆಯಲ್ಲಿ ತಿಳಿಸಿದೆ ಎಂದು ವರದಿ ವಿವರಿಸಿದೆ.
ಅಷ್ಟೇ ಅಲ್ಲ ಎಲ್ಲಾ ಯೂನಿರ್ವಸಿಟಿ ಮತ್ತು ಕಾಲೇಜುಗಳ ಉಪನ್ಯಾಸಕರಿಗೂ ಈ ಮೊಬೈಲ್ ನಿಷೇಧ ಅನ್ವಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.