ಮಧ್ಯಪ್ರದೇಶ : ಆಸ್ಪತ್ರೆಯ ಬೆಡ್ ಮೇಲೆ ಆರಾಮವಾಗಿ ಮಲಗಿದ ಶ್ವಾನ : ವಿಡಿಯೋ ವೈರಲ್…
Team Udayavani, Sep 17, 2022, 9:24 AM IST
ಮಧ್ಯಪ್ರದೇಶ : ನಗರದ ರತ್ಲಾಮ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಯ ಹಾಸಿಗೆಯ ಮೇಲೆ ಶ್ವಾನವೊಂದು ಆರಾಮವಾಗಿ ಮಲಗಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಶುಕ್ರವಾರ ಬಾರಿ ವೈರಲ್ ಆಗಿದ್ದು. ಆಸ್ಪತ್ರೆಯ ಆಡಳಿತ ಮಂಡಳಿಯ ವಿರುದ್ಧ ಬಾರಿ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೆ ಇದು ಆಡಳಿತದಲ್ಲಿರುವ ಸರಕಾರದ ವೈಫಲ್ಯ ಎಂದು ಕಾಂಗ್ರೆಸ್ ಟೀಕಿಸಿದೆ.
ಟೀಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ.ಪ್ರಭಾಕರ ನಾನಾವರೆ ಅವರು ಪ್ರತಿಕ್ರಿಯೆ ನೀಡಿದ್ದು ನಾನು ರಜೆಯಲ್ಲಿದ್ದ ಕಾರಣ ಘಟನೆಯ ಬಗ್ಗೆ ತನಗೆ ತಿಳಿದಿಲ್ಲ ಎಂದು ಪಿಟಿಐಗೆ ತಿಳಿಸಿದ್ದಾರೆ.
ಕಾಂಗ್ರೆಸ್ ವಕ್ತಾರ ನರೇಂದ್ರ ಸಲೂಜಾ ಅವರು ಟ್ವೀಟ್‌ನಲ್ಲಿ, ಬಿಜೆಪಿ ಆಡಳಿತದಲ್ಲಿ ರಾಜ್ಯದಲ್ಲಿ ನಾಯಿಗಳು ಉತ್ತಮ ನಿದ್ರೆ ಮಾಡುತ್ತಿದ್ದರೆ, ರೋಗಿಗಳು ಮಾತ್ರ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ ಪರದಾಡುವಂತಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
मध्यप्रदेश में भले मरीज़ों को बेड़ मिले या ना मिले लेकिन “श्वान “ तो बेड पर मस्त सोया हुआ है…
तस्वीर रतलाम के अलोट की बतायी जा रही है…
“बदहाल स्वास्थ्य सिस्टम” pic.twitter.com/mhqjdGNiEx
— Narendra Saluja (@NarendraSaluja) September 16, 2022