ಜೀವದ ಹಂಗು ತೊರೆದು ಕಳ್ಳನನ್ನು ಹಿಡಿದ ಪೊಲೀಸ್ ಪೇದೆಗೆ ಭಾರಿ ಪ್ರಶಂಸೆ
ಈತನ ಮೇಲಿತ್ತು 11 ಪ್ರಕರಣ
Team Udayavani, Nov 25, 2022, 4:05 PM IST
ನವದೆಹಲಿ : ದೆಹಲಿ ಪೊಲೀಸ್ ಪೇದೆಯೊಬ್ಬರು ಏಕಾಂಗಿಯಾಗಿ ಸರಗಳ್ಳನನ್ನು ಹಿಡಿದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ದೆಹಲಿಯ ಶಹಬಾದ್ ಡೈರಿ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಸತ್ಯೇಂದ್ರ ಅವರೇ ಈ ಸಾಹಸದ ಕೆಲಸ ಮಾಡಿದ ಪೊಲೀಸ್ ಪೇದೆ.
ದೆಹಲಿಯಲ್ಲಿ ಕಳೆದ ಕೆಲವು ದಿನಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಲೆಮರೆಸಿಕೊಂಡಿದ್ದ ಕಳ್ಳನನ್ನು ಪೊಲೀಸ್ ಸಿಬಂಧಿ ಹಿಡಿಯುವ ಮೂಲಕ ಸುಮಾರು ಹನ್ನೊಂದು ಪ್ರಕರಣಗಳಿಗೆ ಬೇಕಾಗಿದ್ದ ಆರೋಪಿ ಸಿಕ್ಕಿಬಿದ್ದಂತಾಗಿದೆ.
ಕಾನ್‌ಸ್ಟೆಬಲ್ ಸತ್ಯೇಂದ್ರ ಅವರು ದೆಹಲಿ ನಗರದಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ಸಂದರ್ಭ ಆರೋಪಿ ಎದುರಿನಿಂದ ಬೈಕ್ ನಲ್ಲಿ ಬರುತ್ತಿದ್ದ ಈ ವೇಳೆ ಪೊಲೀಸ್ ಸಿಬ್ಬಂದಿ ತನ್ನ ಬೈಕ್ ಕಳ್ಳನ ಬೈಕ್ ಗೆ ಅಡ್ಡ ಇಟ್ಟು ಹಿಡಿಯಲು ಮುಂದಾಗಿದ್ದಾರೆ ಈ ವೇಳೆ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ ಈ ಆದರೆ ಪೊಲೀಸ್ ಸಿಬ್ಬಂದಿ ತನ್ನ ಜೀವದ ಹಂಗನ್ನು ತೊರೆದು ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಅಲ್ಲದೆ ಈತನ ಮೇಲೆ ಠಾಣೆಯಲ್ಲಿ ಸುಮಾರು ಹನ್ನೊಂದು ಪ್ರಕರಣಗಳು ದಾಖಲಾಗಿದ್ದು ಆರೋಪಿಯ ಬಂಧನದಿಂದ ಪೊಲೀಸರು ನಿಟ್ಟುಸಿರು ಬಿಡುವಂತಾಗಿದೆ.
ಇತ್ತ ಪೊಲೀಸ್ ಪೇದೆಯ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಲ್ಲದೆ, ಸಾರ್ವಜನಿಕರಿಂದಲೂ ಮೆಚ್ಚುಗೆಯನ್ನು ಗಳಿಸಿದ್ದಾರೆ.
अपनी जान की परवाह किए बगैर शाहबाद डेरी थाने के कांस्टेबल सत्येंद्र ने एक स्नैचर को गिरफ्तार किया।
इस स्नैचर की गिरफ्तारी से 11 मामले सुलझाए गए।
विधिक कार्यवाही जारी है।@dcp_outernorth#HeroesOfDelhiPolice pic.twitter.com/PceBbYpdYQ— Delhi Police (@DelhiPolice) November 24, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
4 ಮಕ್ಕಳೊಂದಿಗೆ ಬಾವಿಗೆ ಹಾರಿ,ಹಗ್ಗ ಹಿಡಿದು ತನ್ನನು ಹಾಗೂ ಹಿರಿ ಮಗಳನ್ನು ರಕ್ಷಿಸಿದ ತಾಯಿ.!
ಸಾವರ್ಕರ್ ಅವರನ್ನು ಅವಮಾನಿಸಿದರೆ… ರಾಹುಲ್ ಗಾಂಧಿ ಹೇಳಿಕೆಗೆ ಉದ್ಧವ್ ಠಾಕ್ರೆ ಆಕ್ರೋಶ
ರಾಘವ್ ಛಡ್ಡಾ-ಪರಿಣಿತಿ ಛೋಪ್ರಾ ಶೀಘ್ರವೇ ಎಂಗೇಜ್
ಉದ್ಯೋಗ ಖಾತ್ರಿ ಕೂಲಿ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ನಿರ್ಧಾರ
ರಾಷ್ಟ್ರೀಯ ಸ್ಮಾರಕವಾಗಿ ರಾಮ ಸೇತು: ಸುಪ್ರೀಂಗೆ ಮತ್ತೊಂದು ಅರ್ಜಿ
MUST WATCH
ಹೊಸ ಸೇರ್ಪಡೆ
4 ಮಕ್ಕಳೊಂದಿಗೆ ಬಾವಿಗೆ ಹಾರಿ,ಹಗ್ಗ ಹಿಡಿದು ತನ್ನನು ಹಾಗೂ ಹಿರಿ ಮಗಳನ್ನು ರಕ್ಷಿಸಿದ ತಾಯಿ.!
ಸಾವರ್ಕರ್ ಅವರನ್ನು ಅವಮಾನಿಸಿದರೆ… ರಾಹುಲ್ ಗಾಂಧಿ ಹೇಳಿಕೆಗೆ ಉದ್ಧವ್ ಠಾಕ್ರೆ ಆಕ್ರೋಶ
ಮಲಯಾಳಂ ಖ್ಯಾತ ನಟ ಇನೋಸೆಂಟ್ ನಿಧನ: ದುಃಖದಲ್ಲಿ ಮಾಲಿವುಡ್ ಚಿತ್ರರಂಗ
ವಿಧಾನ-ಕದನ 2023: ಪ್ರಚಾರಕ್ಕೆ ಎಲ್ಲಿದೆ ದಿನಾಂಕದ ಭಾರ
ನಮ್ಮ ಹಕ್ಕೊತ್ತಾಯ: ಬಂಟ್ವಾಳ – ರಂಗಮಂದಿರ, ಕ್ರೀಡಾಂಗಣ ಬೇಗ ಈಡೇರಲಿ