
ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ವಿಮಾನದೊಳಗೆ ಬೆತ್ತಲಾದ ಮಹಿಳೆ: ಮುಂಬೈ ಪೊಲೀಸರಿಂದ ಬಂಧನ
Team Udayavani, Jan 31, 2023, 4:04 PM IST

ಮುಂಬೈ: ವಿಸ್ತಾರಾ ಅಬುಧಾಬಿ-ಮುಂಬೈ ವಿಮಾನದಲ್ಲಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ 45 ವರ್ಷದ ಇಟಾಲಿಯನ್ ಮಹಿಳೆಯನ್ನು ಸೋಮವಾರ ಬಂಧಿಸಲಾಗಿದೆ.
ಎಕಾನಮಿ ಕ್ಲಾಸ್ ಟಿಕೆಟ್ ಹೊಂದಿದ್ದ ಪಾವೊಲಾ ಪೆರುಸಿಯೊ ಅವರು ಬ್ಯುಸಿನೆಸ್ ಕ್ಲಾಸ್ ನಲ್ಲಿ ಕುಳಿತುಕೊಳ್ಳಲು ಮುಂದಾಗಿದ್ದರು. ಆದರೆ ತಡೆದಾಗ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರು ಎಂದು ಏರ್‌ಲೈನ್ಸ್ ಹೇಳಿದೆ.
ಪಾವೊಲಾ ಪೆರುಸಿಯೊ ಸಿಬ್ಬಂದಿಗೆ ಗುದ್ದಿದ್ದು, ಮತ್ತೋರ್ವನ ಮೇಲೆ ಉಗುಳಿದಳು. ಅಲ್ಲದೆ ವಿಮಾನದಲ್ಲಿ ಭಾಗಶಃ ಬೆತ್ತಲೆಯಾಗಿ ಓಡಾಡಿದಳು ಎಂದು ಏರ್ ಲೈನ್ಸ್ ಹೇಳಿದೆ. ವಿಮಾನ ಸಿಬ್ಬಂದಿಯ ದೂರಿನ ಆಧಾರದ ಮೇಲೆ ಮುಂಬೈ ಪೊಲೀಸರು ಆಕೆಯನ್ನು ಬಂಧಿಸಿದ್ದು, ಮುಂಬೈ ನ್ಯಾಯಾಲಯದಿಂದ ಜಾಮೀನು ನೀಡಲಾಯಿತು.
ಇದನ್ನೂ ಓದಿ:‘4.30-6.00 ಮುಹೂರ್ತ, ನಾಲ್ಕು ಜನ ಕಾಣಿಸ್ತಿಲ್ಲ’ ಹೀಗೊಂದು ಕನ್ನಡ ಸಿನಿಮಾ
ಅವಳು ತನ್ನ ಕೆಲವು ಬಟ್ಟೆಗಳನ್ನು ತೆಗೆದು ಭಾಗಶಃ ಬೆತ್ತಲೆ ಸ್ಥಿತಿಯಲ್ಲಿ ವಿಮಾನದಲ್ಲಿ ಓಡಾಡಿದಳು. ಪ್ರಯಾಣಿಕೆಯ ವಿರುದ್ಧ ಪ್ರಕರಣ ದಾಖಲಿಸಿದ ಮುಂಬೈ ಪೊಲೀಸರು ಒಂದು ದಿನದೊಳಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೆಹಲಿ ನ್ಯಾಯಾಲಯದಿಂದ ಮನೀಶ್ ಸಿಸೋಡಿಯಾ ಜಾಮೀನು ಅರ್ಜಿ ವಜಾ

ಮುಳುಗುತ್ತಿದ್ದವರನ್ನು ರಕ್ಷಿಸಿದ ಬಾಲಕನಿಗೆ ಗೋವಾ ಮುಖ್ಯಮಂತ್ರಿಯಿಂದ 1 ಲಕ್ಷ ರೂ. ಬಹುಮಾನ

ಪ್ರಧಾನಿ ಮೋದಿ ಪದವಿಯ ವಿವರ ಪ್ರಶ್ನೆ;ಕೇಜ್ರಿವಾಲ್‌ಗೆ ದಂಡ ಹಾಕಿದ ಕೋರ್ಟ್

ಪಟಿಯಾಲಾ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ನವಜೋತ್ ಸಿಂಗ್ ಸಿಧು

ʻಮೋದಿ ಹಟಾವೋ, ದೇಶ್ ಬಚಾವೋʼ ಪೋಸ್ಟರ್: ಗುಜರಾತ್‌ನಲ್ಲಿ 8 ಜನ ಪೋಲಿಸ್ ವಶಕ್ಕೆ