ಪ. ಮಹಾರಾಷ್ಟ್ರ : ಕಾಂಗ್ರೆಸ್‌-ಎನ್‌ಸಿಪಿ ಭದ್ರಕೋಟೆ; ಬಿಜೆಪಿ-ಶಿವಸೇನೆ ರಣತಂತ್ರ

Team Udayavani, Apr 15, 2019, 12:09 PM IST

ಮುಂಬಯಿ : ಕಾಂಗ್ರೆಸ್‌ – ಎನ್‌ಸಿಪಿ ಭದ್ರಕೋಟೆಯಾಗಿರುವ ಪಶ್ಚಿಮ ಮಹಾರಾಷ್ಟ್ರದ 9 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ-ಶಿವಸೇನೆಯಿಂದ ಅತ್ಯಂತ ಕತ್ತುಕತ್ತಿನ, ಜಿದ್ದಾಜಿದ್ದಿಯ ಸ್ಪರ್ಧೆ ಈ ಬಾರಿ ಕಂಡು ಬರುತ್ತಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆ ಅತ್ಯಂತ ಬಲಿಷ್ಠವಾಗಿದ್ದ ಸಂದರ್ಭದಲ್ಲಿಯೂ ಇಲ್ಲಿನ ಒಂಬತ್ತು ಲೋಕಸಭಾ ಕ್ಷೇತ್ರಗಳ ಪೈಕಿ ಎನ್‌ಸಿಪಿ ಗೆ ನಾಲ್ಕು ಸ್ಥಾನ, ಸ್ವಾಭಿಮಾನಿ ಶೇತ್ಕರಿ ಸಂಘಟನೆ (ಎಸ್‌ಎಸ್‌ಎಸ್‌) ಗೆ ಒಂದು ಸ್ಥಾನ, ಬಿಜೆಪಿಗೆ ಎರಡು ಮತ್ತು ಶಿವ ಸೇನೆಗೆ ಎರಡು ಸ್ಥಾನಗಳು ದಕ್ಕಿದ್ದವು.

ಪಶ್ಚಿಮ ಮಹಾರಾಷ್ಟ್ರದ 9 ಲೋಕಸಭಾ ಸ್ಥಾನಗಳಾಗಿರುವ ಬಾರಾಮತಿ, ಮಾಢಾ, ಸಾಂಗ್ಲಿ, ಸಾತಾರಾ, ಕೊಲ್ಹಾಪುರ, ಹಾತ್‌ಕನಂಗಾಲೆ (ಇಲ್ಲಿ ಎ.23ರಂದು ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ), ಮಾವಾಲ್‌ ಮತ್ತು ಶಿರೂರ್‌ (ಇಲ್ಲಿ ಎ.29ರಂದು ನಾಲ್ಕನೇ ಹಂತದಲ್ಲಿ ಮತದಾನ ನಡೆಯಲಿದೆ) ಎನ್‌ಸಿಪಿಯ ಭದ್ರಕೋಟೆ ಎನಿಸಿಕೊಂಡಿವೆ.

ಸಿರಿವಂತ ಮತ್ತು ಸಮೃದ್ಧ ಪಶ್ಚಿಮ ಮಹಾರಾಷ್ಟ್ರದ ಎನ್‌ಸಿಪಿಯ ಭದ್ರಕೋಟೆಯನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಭೇದಿಸುವ ಸಂಕಲ್ಪ ತಳೆದಿರುವ ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಶಿವ ಸೇನೆ, ಅತ್ಯಧಿಕ ಸ್ಥಾನಗಳನ್ನು ಗೆಲ್ಲುವ ರಣತಂತ್ರವನ್ನು ರೂಪಿಸಿವೆ.

ಅದೇ ರೀತಿ ತಮ್ಮ ಈ ಭದ್ರ ಕೋಟೆಯನ್ನು ಉಳಿಸಿಕೊಳ್ಳಲು ಪವಾರ್‌, ಮೋಹಿತೆ ಪಾಟೀಲ್‌ ಮತ್ತು ದಿವಂಗತ ವಸಂತರಾವ್‌ ದಾದಾ ಪಾಟೀಲ್‌ ಕುಟುಂಬಗಳು ಕೂಡ ಟೊಂಕ ಕಟ್ಟಿ ನಿಂತಿವೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೊಸದಿಲ್ಲಿ : ಭಾರತದ ವರಿಷ್ಠ ನ್ಯಾಯಮೂರ್ತಿ (ಸಿಜೆಐ) ರಂಜನ್‌ ಗೊಗೊಯ್‌ ಅವರಿಂದು ಶನಿವಾರ ಸುಪ್ರೀಂ ಕೋರ್ಟಿನ ವಿಶೇಷ ಪೀಠದಲ್ಲಿದ್ದುಕೊಂಡು ತನ್ನ ವಿರುದ್ಧ...

  • ಇಂದು ನಿತ್ಯ ಹರಿದ್ವರ್ಣ ಕಾಡುಗಳಲ್ಲಷ್ಟೇ ಬೃಹತ್‌ ಗಾತ್ರದ ದೇವದಾರು, ತೇಗ, ಬೀಟೆ ಮೊದಲಾದ ಮರಗಳನ್ನು ಕಾಣಬಹುದು. ಆದರೆ ಸವಣೂರಿನ ಕಲ್ಮಠದಲ್ಲಿ ಸಾವಿರಾರು ವರ್ಷಗಳ...

  • Gadwall (Anas strepera) M -Duck + ಗದ್ವಾಲ್‌ ಬಾತನ್ನು ಚರ್ಲೆ ಅಥವಾ ಸರಳೆ ಬಾತು ಎಂದು ಕರೆಯಲಾಗುತ್ತದೆ. ಈ ಹಕ್ಕಿ, ನೀರಿನಲ್ಲಿ ಮುಳುಗಿ ಅಲ್ಲಿರುವ ಕ್ರಿಮಿ ಕೀಟಗಳನ್ನು ಬೇಟೆಯಾಡುತ್ತದೆ....

  • ವೃತ್ತಿಯಲ್ಲಿ ಶಿಕ್ಷಕರಾದ ಕಲ್ಯಾಣ್‌ ಕುಮಾರ್‌ ಅವರಿಗೆ ಪತ್ರಿಕೆ ಸಂಗ್ರಹಿಸುವ ಹವ್ಯಾಸ. ಇದು ಹುಟ್ಟಿದ್ದು ಪರ ಊರಿಗೆ ಪ್ರಯಾಣಿಸುವಾಗ . ಬೇಜಾರು ಕಳೆಯಲಿಕ್ಕೆ...

  • ಉದ್ದಾನ ವೀರಭದ್ರಸ್ವಾಮಿಗಳು ಈ ಆಂಜನೇಯನಿಗೆ ಲಿಂಗಧಾರಣೆ ಮಾಡಿದ್ದು, ಕೊರಳಿನಲ್ಲಿ ರುದ್ರಾಕ್ಷಿ ಮಾಲೆ ಇರುವುದು ಒಂದು ವಿಶೇಷ. ಸೊಂಟದಲ್ಲಿ ಕತ್ತಿ ಇರುವುದು...

  • ಅರಳಿಮರದ ಬುಡದಲ್ಲಿ ಕುಳಿತು ಸರ್ವಾಂತರ್ಯಾಮಿಯಾದ ಭಗವಂತನ ಸ್ವರೂಪವನ್ನು ಯೋಗಿಗಳಿಂದ ಕೇಳಿ ತಿಳಿದ ರೀತಿಯಲ್ಲೇ ಧ್ಯಾನ ಮಾಡತೊಡಗಿದ್ದರು. ಏಕಾಗ್ರಚಿತ್ತದಿಂದ...