
ಸಿಧು ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುವೆ; ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಗುಡುಗು
Team Udayavani, Sep 22, 2021, 11:15 PM IST

ಚಂಡೀಗಡ: ಮಾಜಿ ಸಚಿವ ನವ್‌ಜೋತ್ ಸಿಂಗ್ ಸಿಧು ನೇತೃತ್ವದಲ್ಲಿಯೇ ಪಂಜಾಬ್ ವಿಧಾನಸಭೆ ಚುನಾವಣೆ ಎದುರಿಸಲಾಗುತ್ತದೆ ಎಂಬ ಅಂಶ ಮಾಜಿ ಸಿಎಂ ಕ್ಯಾ.ಅಮರೀಂದರ್ ಸಿಂಗ್ ಅವರನ್ನು ಕೆರಳಿಸಿದೆ.
ಸಿಧು ವಿರುದ್ಧ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸುತ್ತೇನೆ ಮತ್ತು ಅವರು ಮುಖ್ಯಮಂತ್ರಿಯಾಗುವುದನ್ನು ತಡೆಯುತ್ತೇನೆ ಎಂದು ಹೇಳಿದ್ದಾರೆ. ಚಂಡೀಗಡದಲ್ಲಿ ಮಾತನಾಡಿದ ಅವರು, ಸಿಧು ಅವರನ್ನು ಸೋಲಿಸಲು ಯಾವುದೇ ತ್ಯಾಗಕ್ಕೆ ಸಿದ್ಧ.
ಸಿಧು ರಾಜ್ಯಕ್ಕೆ ಹಾನಿಕಾರಕ ವ್ಯಕ್ತಿ. ಒಂದು ಸಚಿವಾಲಯವನ್ನೇ ನಿರ್ವಹಿಸಲಾಗದವರು ಪೂರ್ತಿ ಸದನವನ್ನು ನಿರ್ವಹಿಸಲಿದ್ದಾರೆ ಎನ್ನುವುದು ನೋವಿನ ವಿಚಾರ. ಪಂಜಾಬ್‌ನಲ್ಲಿ ನಾಟಕ ಮಾಡುವವರ ನಾಯಕತ್ವದಲ್ಲಿ ಪಕ್ಷ ಎರಡಂಕಿಯ ಸ್ಥಾನ ಗೆಲ್ಲಬಹುದಷ್ಟೇ ಎಂದು ಅವರು ನುಡಿದಿದ್ದಾರೆ.
ಇದನ್ನೂ ಓದಿ:ಟಿಸಿಎಸ್‌ನ ಶೇ. 75 ಸಿಬ್ಬಂದಿಗೆ ಶಾಶ್ವತ ವರ್ಕ್ ಫ್ರಂ ಹೋಂ!
ಅನುಭವ ಇಲ್ಲ:
ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರಿಗೆ ರಾಜಕೀಯದ ಅನುಭವವೇ ಇಲ್ಲ ಎಂದು ಕಿಡಿ ಕಾರಿದ್ದಾರೆ ಅಮರೀಂದರ್. ಪ್ರಿಯಾಂಕಾ ಮತ್ತು ರಾಹುಲ್ ತಮಗೆ ಮಕ್ಕಳಿದ್ದಂತೆ ಎಂದು ಅವರು ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
