
ಮದ್ಯದಂಗಡಿಗಳನ್ನು ಗೋಶಾಲೆಗಳಾಗಿ ಪರಿವರ್ತಿಸಿ: ಬಿಜೆಪಿ ನಾಯಕಿ ಉಮಾ ಭಾರತಿ
Team Udayavani, Feb 1, 2023, 11:42 AM IST

ಭೋಪಾಲ್: ಮಧ್ಯಪ್ರದೇಶದ ಮದ್ಯದ ಅಂಗಡಿಗಳನ್ನು ಗೋಶಾಲೆಗಳಾಗಿ ಪರಿವರ್ತಿಸ ಬೇಕು ಎಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಿರಿಯ ನಾಯಕಿ ಉಮಾಭಾರತಿ ಅವರು ಒತ್ತಾಯಿಸಿದ್ದಾರೆ.
ಮಹಿಳೆಯರ ವಿರುದ್ಧದ ಅಪರಾಧಗಳ ಹೆಚ್ಚಳಕ್ಕೆ ಮದ್ಯ ಸೇವನೆಯೇ ಕಾರಣ ಎಂದು ಉಮಾ ಭಾರತಿ ಹೇಳಿದರು.
ಭೋಪಾಲ್ ನ ದೇವಸ್ಥಾನವೊಂದರಲ್ಲಿ ತನ್ನ ನಾಲ್ಕು ದಿನಗಳ ವಾಸ್ತವ್ಯವನ್ನು ಕೊನೆಗೊಳಿಸಿದ ಉಮಾ ಭಾರತಿ, ರಾಜ್ಯದಲ್ಲಿ ನಿಯಂತ್ರಿತ ಮದ್ಯ ನೀತಿಯ ಬೇಡಿಕೆಯನ್ನು ಬೆಂಬಲಿಸುವ ಸಲುವಾಗಿ ‘ಮಧುಶಾಲಾ ಮೇ ಗೌಶಾಲಾ’ (ಮದ್ಯ ಮಾರಾಟ ಕೇಂದ್ರ ಸ್ಥಳದಲ್ಲಿ ಗೋಶಾಲೆಗಳು) ಕಾರ್ಯಕ್ರಮವನ್ನು ಪ್ರಾರಂಭಿಸುವುದಾಗಿ ಘೋಷಿಸಿದರು.
ಮದ್ಯದ ನೀತಿಗೆ ಕಾಯದೆ, ನಿಯಮ ಉಲ್ಲಂಘಿಸಿ ನಡೆಸುತ್ತಿರುವ ಮದ್ಯದಂಗಡಿಗಳನ್ನು ಗೋಶಾಲೆಗಳನ್ನಾಗಿ ಪರಿವರ್ತಿಸಲು ಮುಂದಾಗುತ್ತೇನೆ ಎಂದರು.
ಇದನ್ನೂ ಓದಿ:ಈ ಬಜೆಟ್ ಪ್ರತಿಯೊಂದು ವರ್ಗದ ನಿರೀಕ್ಷೆ ಪೂರೈಸುತ್ತದೆ: ಕೇಂದ್ರ ಸಚಿವ
ಓರ್ಚಾದಲ್ಲಿರುವ ಅಕ್ರಮ ಮದ್ಯದ ಅಂಗಡಿಯ ಹೊರಗೆ 11 ಹಸುಗಳನ್ನು ಹಾಕಲು ವ್ಯವಸ್ಥೆ ಮಾಡುವಂತೆ ಜನರಿಗೆ ತಿಳಿಸಿದ್ದೇನೆ ಎಂದು ಉಮಾ ಭಾರತಿ ಹೇಳಿದರು.
“ನನ್ನನ್ನು ತಡೆಯಲು ಯಾರು ಧೈರ್ಯ ಮಾಡುತ್ತಾರೆ ಎಂಬುದನ್ನು ನೋಡುತ್ತೇವೆ. ಈ ಹಸುಗಳಿಗೆ ಆಹಾರ ಮತ್ತು ನೀರು ಮದ್ಯದ ಅಂಗಡಿಯಲ್ಲಿ ಕೊಡುತ್ತಾರೆ” ಎಂದು ಮಾಜಿ ಕೇಂದ್ರ ಸಚಿವರು ಹೇಳಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ಮೋದಿಯನ್ನೇ ಟೀಕಿಸಿದ ರಾಯಚೂರು ನಗರ ಬಿಜೆಪಿ ಶಾಸಕ: ಆಡಿಯೊ ವೈರಲ್

ದಕ್ಷಿಣ ಆಗ್ನೇಯ ರೈಲ್ವೆ…ಒಂದು ವರ್ಷದಲ್ಲಿ 1ಕೋಟಿಗೂ ಅಧಿಕ ದಂಡ ವಸೂಲಿ ಮಾಡಿದ ಟಿಕೆಟ್ ಪರೀಕ್ಷಕ

ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿ ಆಯ್ಕೆ: ನಳಿನ್ ಕುಮಾರ್ ಕಟೀಲ್

ಇಬ್ಬರು ಶಾಸಕರ ರಾಜೀನಾಮೆ? ಶಿರಸಿಯತ್ತ ಎಲ್ಲರ ಚಿತ್ತ!

ಮುಂಬೈ-ಚೆನ್ನೈ ಅಲ್ಲ, ಐಪಿಎಲ್ ವಿಜೇತರ ಬಗ್ಗೆ ಭವಿಷ್ಯ ನುಡಿದ ಮೈಕಲ್ ವಾನ್