ದೆಹಲಿ: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವಿವಾಹಿತ ಮಹಿಳೆ ಮೇಲೆ ಗುಂಡಿನ ದಾಳಿ; ಮೃತ್ಯು
Team Udayavani, Jan 31, 2023, 8:50 AM IST
ದೆಹಲಿ: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವಿವಾಹಿತ ಮಹಿಳೆ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ದೆಹಲಿಯ ಪಶ್ಚಿಮ ವಿಹಾರದಲ್ಲಿ ಸೋಮವಾರ ಸಂಜೆ (ಜ.30 ರಂದು) ನಡೆದಿದೆ.
ಮೃತರನ್ನು ಜ್ಯೋತಿ(32) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ರಸ್ತೆ ಬದಿ ನಿಂತಿದ್ದವರ ಮೇಲೆ ಸಾಮೂಹಿಕ ಗುಂಡಿನ ದಾಳಿ: 9 ಮಂದಿಗೆ ಗಾಯ
ಫ್ಲಿಪ್‌ಕಾರ್ಟ್‌ನ ಕೊರಿಯರ್ ಇಲಾಖೆಯಲ್ಲಿ ಕೆಲಸ ಮಾಡುವ ಜ್ಯೋತಿ ಸೋಮವಾರ ಸಂಜೆ 7:30 ರ ವೇಳೆ ಕೆಲಸ ಮುಗಿಸಿ ಸ್ಕೂಟರ್ ನಲ್ಲಿ ಮನೆಗೆ ಬರುತ್ತಿದ್ದ ವೇಳೆ ಬೈಕ್ ಹಾಗೂ ಸ್ಕೂಟಿಯಲ್ಲಿ ಬಂದ ದುಷ್ಕರ್ಮಿಗಳು ಜ್ಯೋತಿ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ.
ಗಂಭೀರ ಗಾಯಗೊಂಡ ಜ್ಯೋತಿ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಅವರು ಕೊನೆಯುಸಿರೆಳೆದಿದ್ದಾರೆ. ಪತಿ ಹಾಗೂ ಮೂವರು ಮಕ್ಕಳನ್ನು ಮೃತರು ಅಗಲಿದ್ದಾರೆ.
ಸಿಸಿಟಿವಿ ದೃಶ್ಯಗಳನ್ನು ನೋಡಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಮೃತಪಾಲ್ ಸಿಂಗ್ ಜನಪ್ರಿಯತೆಗಾಗಿ ಮಂದೀಪ್ ಸಂಘಟನೆ ಪಿಗ್ಗಿಬ್ಯಾಕ್ ಮಾಡಿದನೇ?
ಪಶ್ಚಿಮ ಬಂಗಾಳ: ಬಸ್ಸಿಗೆ ತೈಲ ಟ್ಯಾಂಕರ್ ಢಿಕ್ಕಿ, 27 ಮಂದಿಗೆ ಗಾಯ, ಹಲವರ ಸ್ಥಿತಿ ಗಂಭೀರ
ಶಾಲಾ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಪತ್ತೆಯಾಯ್ತು ಕಾಂಡೋಮ್, ಮದ್ಯದ ಬಾಟಲಿ…
ಗೋವಾ ಸಮುದ್ರ ತೀರದಲ್ಲಿ ಮದುವೆಯಾಗುವ ಕನಸು ಕಾಣುತ್ತಿದ್ದವರಿಗೆ ಇನ್ನು ಹೆಚ್ಚು ಖರ್ಚು
ಏರ್ ಇಂಡಿಯಾ ಮತ್ತು ನೇಪಾಳ ಏರ್‌ಲೈನ್ಸ್ ವಿಮಾನಗಳು ಢಿಕ್ಕಿ ಹೊಡೆಯುತ್ತಿವು!!